ಕೊಪ್ಪಳದಲ್ಲಿ ಹನಿ ನೀರಿಗೂ ಹಾಹಾಕಾರ; ಶಾಲೆ ಬಿಟ್ಟು ನೀರಿಗಾಗಿ ಓಡುತ್ತಿರುವ ಮಕ್ಕಳು

ಕೊಪ್ಪಳ ತಾಲೂಕಿನ ಇಂದಿರಾ ನಗರ ತಾಂಡಾದಲ್ಲಿ ಹನಿ ನೀರಿಗಾಗಿಯೂ ಪರಿತಪಿಸುವಂತಹ ಸ್ಥಿತಿ ಇದೆ. ಕೊಳವೆಬಾವಿಗಳು ಬತ್ತುತ್ತಿದ್ದು ಒಂದು ಬಿಂದಿಗೆ ನೀರಿಗಾಗಿಯೂ ಜನರು ಪರದಾಡುತ್ತಿದ್ದಾರೆ. ಓದಿಗಿಂತ ಹನಿ ನೀರು ಮುಖ್ಯ ಎಂದು ಶಾಲೆ ಬಿಟ್ಟು ನೀರು ಹಿಡಿಯಲು ಕೆಲ ಮಕ್ಕಳು ತಮ್ಮ ಓದನ್ನೇ ತ್ಯಾಗ ಮಾಡಿದ್ದಾರೆ. ತಮಗೆ ಶಾಶ್ವತ ನೀರು ಪೂರೈಕೆ ಮಾಡಬೇಕು ಎಂದು ಇಲ್ಲಿನ ಜನ ಒತ್ತಾಯಿಸಿದ್ದಾರೆ.

Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಆಯೇಷಾ ಬಾನು

Updated on:Feb 15, 2024 | 2:54 PM

ಕೊಪ್ಪಳ, ಫೆ.15: ಬೇಸಿಗೆ ಆರಂಭದಲ್ಲಿಯೇ ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ (Drinking Water) ಹಾಹಾಕಾರ ಶುರುವಾಗಿದೆ. ಕೊಳವೆಬಾವಿಗಳು ಬತ್ತುತ್ತಿದ್ದು ಒಂದು ಬಿಂದಿಗೆ ನೀರಿಗಾಗಿಯೂ ಜನರು ಪರದಾಡುತ್ತಿದ್ದಾರೆ. ಓದಿಗಿಂತ ಹನಿ ನೀರು ಮುಖ್ಯ ಎಂದು ಶಾಲೆ ಬಿಟ್ಟು ನೀರು ಹಿಡಿಯಲು ಕೆಲ ಮಕ್ಕಳು ತಮ್ಮ ಓದನ್ನೇ ತ್ಯಾಗ ಮಾಡುವಂತಹ ಸ್ಥಿತಿ ಕೊಪ್ಪಳದಲ್ಲಿ (Koppal) ನಿರ್ಮಾಣವಾಗಿದೆ. ಹೆತ್ತವರು ಕೂಲಿ ಕೆಲಸಕ್ಕೆ ಹೋದ್ರೆ, ಮಕ್ಕಳು (Students) ನೀರು ಹಿಡಿಯೋ ಅನಿವಾರ್ಯತೆ ಎದುರಾಗಿದೆ.

ನೀರಿನ ಸಮಸ್ಯೆಯಿಂದ ಮಕ್ಕಳು ಸರಿಯಾಗಿ ಓದಲಿಕ್ಕಾಗದೇ ವಿಧ್ಯೆಯಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳು, ಮಹಿಳೆಯರು ಬಿಂದಿಗೆ ನೀರಿಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಕೊಪ್ಪಳ ತಾಲೂಕಿನ ಇಂದಿರಾ ನಗರ ತಾಂಡಾದಲ್ಲಿ ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ಇದೆ. ತಾಂಡಾದಲ್ಲಿ ಸಾವಿರಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಆದರೆ ತಾಂಡಾಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಕೊಳವೆ ಬಾವಿಗಳು ಬತ್ತಿವೆ. ಇದೀಗ ಪರ್ಯಾಯವಾಗಿ ನೀರು ಪೂರೈಕೆ ಮಾಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ತಾಂಡಾ ನಿವಾಸಿಗಳು ಖಾಸಗಿ ವ್ಯಕ್ತಿ ಬಳಿ ಕಾದು ಕಾದು ನೀರು ತಗೆದುಕೊಂಡು ಹೋಗುತ್ತಿದ್ದಾರೆ. ಕರೆಂಟ್ ಇದ್ದಾಗ ಬೇರೆಲ್ಲ ಕೆಲಸ ಬಿಟ್ಟು ನೀರು ಹಿಡಿಯಲು ಓಡುವಂತಾಗಿದೆ.

ತಾಂಡಾದಲ್ಲಿ ಮನೆ ಮನೆಗೆ ಗಂಗೆ ಯೋಜನೆಯಡಿ ನಲ್ಲಿ ಸಂಪರ್ಕ ಇದೆ. ಆದ್ರೆ ಜಲಜೀವನ ಮಿಷನ ಯೋಜನೆ ಕೈಕೊಟ್ಟಿದೆ. ನಲ್ಲಿ ಸಂಪರ್ಕ ಕೊಟ್ಟರು ಇಲ್ಲಿವರಗೆ ಹನಿ ನೀರು ಕೂಡ ಬಂದಿಲ್ಲ ಎಂದು ತಾಂಡಾ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ತಮಗೆ ಶಾಶ್ವತ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಹಣ ಡಬಲ್​ ಮಾಡಿಕೊಡುವುದಾಗಿ ನಂಬಿಸಿ ನೂರಾರು ಜನರಿಂದ 4.79 ಕೋಟಿ ವಂಚನೆ

ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಕಾಲದಲ್ಲಿ ವೈಭವ ಕಂಡ ಸಾಮ್ರಾಜ್ಯವಾಗಿತ್ತು. ನಂತರ ವಿಜಯನಗರ ಸಾಮ್ರಾಜ್ಯ ಹಾಳಾದ ಬಳಿಕ ಉದಯವಾಗಿದ್ದೇ ಆದಿಲ್ ಶಾಹಿಗಳ ವಿಜಯಪುರ ಸಾಮ್ರಾಜ್ಯ. ವಿಜಯಪುರ ಸಾಮ್ರಾಜ್ಯವನ್ನು 400ಕ್ಕೂ ಆಧಿಕ ವರ್ಷಗಳ ಕಾಲ ಆಳಿದ ಆದಿಲ್ ಶಾಹಿಗಳು ಅಂದಿನ ಕಾಲದಲ್ಲಿ ಕುಡಿಯೋ ನೀರಿಗೆ ಬಹಳ ಪ್ರಾಮುಖ್ಯತೆ ನೀಡಿದ್ದರು. ಆಗಿನ ಕಾಲದಲ್ಲೇ ತಂತ್ರಜ್ಞಾನದ ಬಳಕೆ ಮಾಡಿದ್ದರು. ಸಮತಟ್ಟಾದ ಪ್ರದೇಶದಲ್ಲಿ ನೀರು ಸಂಗ್ರಹ ಮಾಡಿ ಪೂರೈಕೆ ಮಾಡುವುದು ಕಷ್ಟದ ಕೆಲಸವಾಗಿತ್ತು. ಅದಕ್ಕಾಗಿ ಅಂದಿನ ಕಾಲದಲ್ಲಿ ತಮ್ಮ ಸಾಮ್ರಾಜ್ಯದ ರಾಜಧಾನಿಯಾಗಿದ್ದ ವಿಜಯಪುರ ನಗರದ ಸುತ್ತಲೂ ನಾಲ್ಕೂ ದಿಕ್ಕಿಗೂ ದೊಡ್ಡ ದೊಡ್ಡ ಕೆರೆಗಳನ್ನು ಕಟ್ಟಿಸಿದ್ದರು. ಆ ಕೆರೆಗಳಿಗೆ ಸಂಪರ್ಕ ಹೊಂದುವಂತೆ ಭೂಮಿಯಾಳದಲ್ಲಿ ದೊಡ್ಡ ದೊಡ್ಡ ಕಾಲುವೆಗಳನ್ನು ಸುರಂಗದ ಮಾದರಿಯಲ್ಲೇ ನಿರ್ಮಾಣ ಮಾಡಿದರು.

ಆ ಅಂಡರ್ ಗ್ರೌಂಡ್ ಟ್ಯೂನಲ್ ಮೂಲಕ ನಗರದಲ್ಲಿರೋ ದೊಡ್ಡ ದೊಡ್ಡ ಬಾವಿಗಳಿಗೆ ಮಸೀದಿ, ದೇವಸ್ಥಾನಗಳಿಗೆ ಹರಿದು ಬರುವಂತೆ ಮಾಡಿದ್ದರು. ಈ ನೀರು ಗಂಜ್ ಗಳನ್ನು ನಿಲ್ಲುವಂತೆ ಮಾಡಿದ್ದರು. ಇಂಥ ತಂತ್ರಜ್ಞಾನ ಪರ್ಷಿಯಾ ದೇಶ ಬಿಟ್ಟರೆ ಕೇವಲ ವಿಜಯಪುರ ಹಾಗೂ ಬೀದರ್ ನಲ್ಲಿ ಮಾತ್ರ ಕಂಡು ಬರುತ್ತದೆ. ಬೀದರ್ ನಲ್ಲಿ ಸುಮಾರು 3 ಕಿಲೋ ಮೀಟರ್ ಮಾತ್ರ ಕಂಡು ಬರುವ ಭೂಮಿಯಾಳದ ಕಾಲುವೆ ವಿಜಯಪುರದಲ್ಲಿ 5 ಕಿಲೋ ಮೀಟರ್ ಗೂ ಆಧಿಕ ಅಂತರವವನ್ನು ಹೊಂದಿವೆ. ಈ ಕಾಲುವೆಗಳಿಗೆ ಅಲ್ಲಲ್ಲಿ ಬೆಳಕು ಬೀಳಲು ಕಸಕಡ್ಡಿಗಳು ಬಿದ್ದರೆ ತೆಗೆಯಲು ಮ್ಯಾನ್ ಹೋಲ್ ಮಾದರಿಯಲ್ಲಿ ಕಿಂಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಇದು ಭೂಮಿಯಾಳದ ಕಾಲುವೆಗಳಿಂದ ನೀರು ಪೂರೈಕೆ ಮಾಡುವ ತಂತ್ರಜ್ಞಾನವಾಗಿತ್ತು.

ಸದ್ಯ ಭೂಮಿಯಾಳದಲ್ಲಿರೋ ಕಾಲುವೆಗಳು ಹೂಳಿನಿಂದ ತುಂಬಿ ಹೋಗಿವೆ. 500 ವರ್ಷಗಳಿಂದ ಉಪಯೋಗ ಮಾಡದೇ ಹಾಳಾಗಿ ಹೋಗಿವೆ. ಇದನ್ನು ದುರಸ್ಥಿ ಮಾಡುವ ಮಾತುಗಳು ಕೇಳಿ ಬಂದವು ಹೊರತು ಯಾವುದೇ ಕೆಲಸ ಕಾಮಗಾರಿ ಆಗಲಿಲ್ಲಾ. ಇಂದಿನ ಆಧುನಿಕ ತಂತ್ರಜ್ಞಾನ ಬಳಸಿ ಪುರಾತನವಾದ ಭೂಮಿಯಾಳದ ಕಾಲುವೆಗಳ ದುರಸ್ಥಿ ಮಾಡಿಸಬೇಕೆಂದು ನಗರದ ಜನರು ಒತ್ತಾಯ ಮಾಡುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:03 am, Thu, 15 February 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ