ಕನಕಗಿರಿ ಉತ್ಸವ: ಅಯೋಧ್ಯೆಯಲ್ಲಿ ಕೇವಲ ರಾಮನ ವಿಗ್ರಹ ಪ್ರತಿಷ್ಠಾಪಿಸಿದ್ದನ್ನು ಟೀಕಿಸಿದ ಸಿದ್ದರಾಮಯ್ಯ

ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಡೆದ ಕನಕಗಿರಿ ಉತ್ಸವದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹವನ್ನು ಮಾತ್ರ ಪ್ರತಿಷ್ಠಾಪನೆ ಮಾಡಿದ್ದನ್ನು ಟೀಕಿಸಿದರು. ಅಲ್ಲದೆ, ಲೋಕಸಭೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ ಬಗ್ಗೆ ನೆನಪಿಸಿಕೊಂಡ ಸಿದ್ದರಾಮಯ್ಯ ಅವರು, ಸೋತಿದ್ದು ಒಳ್ಳೆಯದೇ ಆಯ್ತು ಎಂದಿದ್ದಾರೆ.

ಕನಕಗಿರಿ ಉತ್ಸವ: ಅಯೋಧ್ಯೆಯಲ್ಲಿ ಕೇವಲ ರಾಮನ ವಿಗ್ರಹ ಪ್ರತಿಷ್ಠಾಪಿಸಿದ್ದನ್ನು ಟೀಕಿಸಿದ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: Rakesh Nayak Manchi

Updated on: Mar 02, 2024 | 10:13 PM

ಕೊಪ್ಪಳ, ಮಾ.2: ಕನಗಿರಿ ಉತ್ಸವದಲ್ಲಿ (Kanakagiri Utsav) ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaaih), ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹವನ್ನು ಮಾತ್ರ ಪ್ರತಿಷ್ಠಾಪನೆ ಮಾಡಿದ್ದನ್ನು ಟೀಕಿಸಿದರು. ಅಂಜನಾದ್ರಿ ಅಭಿವೃದ್ಧಿಗೆ ನೂರು ಕೋಟಿ ನೀಡಿದ್ದೇವೆ. ರಾಮನನ್ನು ಅಷ್ಟೇ ಪೂಜಿಸುವುದಿಲ್ಲ, ಹನುಮನನ್ನು ನಾವು ಪೂಜಿಸುತ್ತೇವೆ. ಶ್ರೀರಾಮಚಂದ್ರನನ್ನು ಪ್ರತ್ಯೇಕ ನೋಡುವುದು ಸರಿಯಲ್ಲ. ಹೀಗಾಗಿ ‌ಸೀತಾರಾಮ್ ಕಿ ಜೈ ಅಂತ ಹೇಳುತ್ತೇನೆ. ನಾವು ಅವಿಭಕ್ತ ಕುಟುಂಬದಲ್ಲಿ ಬಂದವರು. ಹೀಗಾಗಿ ಶ್ರೀರಾಮ ಚಂದ್ರನ ದೇವಸ್ಥಾನದಲ್ಲಿ ರಾಮನ ಜೊತೆ ಸೀತೆ, ಲಕ್ಷ್ಮಣ, ಹನುಮಂತನನ್ನು ನೋಡುತ್ತೇವೆ. ಯಾವುದಾದರೂ ದೇವಸ್ಥಾನದಲ್ಲಿ ಶ್ರೀರಾಮಚಂದ್ರ ಇರುವುದನ್ನು ನೋಡಿದ್ದೀರಾ? ನಾನಂತು ಯಾವ ದೇವಸ್ಥಾನದಲ್ಲಿ ನೋಡಿಲ್ಲ. ನಾನು ರಾಮಾಯಣ, ಮಹಾಭಾರತ ಓದಿಕೊಂಡಿದ್ದೇನೆ. ಇತಿಹಾಸವನ್ನು, ಪುರಾಣಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜ್ಯದ ಐತಿಹಾಸಿಕ ಸ್ಥಳಗಳಲ್ಲಿ ಕನಕಗಿರಿ ಕೂಡಾ ಒಂದು. ಪ್ರತಿಯೊಬ್ಬ ಮನುಷ್ಯ ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಸಮಾಜದಲ್ಲಿ ಅಸಮಾನತೆ ಇದೆ. ಈ ಅಸಮಾನತೆ ಹೋಗಲಾಡಿಸಲು ನಮ್ಮ ಜೀವನದಲ್ಲಿ ಪ್ರಯತ್ನ ಮಾಡಿದೆವಾ ಅಂತ ನೋಡಿತೊಳ್ಳಬೇಕು. ನಮ್ಮ ಸಮಾಜವನ್ನು ಜಾತಿ ಜಾತಿಗಳ ಮೇಲೆ ಜೋಡಿಸಿ ಬಿಟ್ಟಿದ್ದಾರೆ. ಇದನ್ನೇ ಹಿಟ್ಲರ್‌ ಮತ್ತು ಮುಸಲೋನಿ ಮಾಡಿದ್ದರು. ಹಿಟ್ಲರ್, ಮುಸಲೋನಿ ಪಾಲೋ ಮಾಡೋರು ನಮ್ಮ ದೇಶದಲ್ಲಿ ಇದ್ದಾರೆ. ಜಗತ್ತಿನ ಜನ ತಿರುಗಿಬಿದ್ದಾಗ ಹಿಟ್ಲಾರ್ ಗುಂಡು ಹಾರಿಸಿಕೊಂಡು ಸತ್ತ. ಈ ಸ್ಥಿತಿ ನಮ್ಮ ದೇಶದಲ್ಲಿ ಆಗಬಾರದು. ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕೆ ವಿನ, ದ್ವೇಷಿಸಬಾರದು ಎಂದರು.

ಮೀಸಲಾತಿ ನೀಡಿದವರ ಬಗ್ಗೆ ಗೊತ್ತಾಗಬೇಕು. ಅದನ್ನು ಬಿಟ್ಟು ಮೀಸಲಾತಿಯನ್ನೇ ವಿರೋಧ ಮಾಡಿದರೆ ಹೇಗೆ? ನಮಗೆ ನಮ್ಮ ಇತಿಹಾಸ ಗೊತ್ತಾಗಬೇಕು. ಇತಿಹಾಸ ಗೊತ್ತಾದ್ರೆ ಮಾತ್ರ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ನಡೆಯಲು ಸಾಧ್ಯವಾಗುತ್ತದೆ ಎಂದರು.

ರಾಜೀವ್ ಗಾಂಧಿ ಹತ್ಯೆ; ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಸೋಲು

ಲೋಕಸಭೆ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, 1991 ರಲ್ಲಿ ನಾನು ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಜನತಾದಳದಿಂದ ಸ್ಪರ್ಧೆ ಮಾಡಿ 10 ಸಾವಿರ ಮತಗಳಿಂದ‌ ಸೋತಿದ್ದೆ. ರಾಜೀವಗಾಂಧಿ ಅವರ ಹತ್ಯೆಯಾಗದೇ ಇದ್ದಿದ್ದರೆ ನಾನು ಗೆಲ್ಲುತ್ತಿದ್ದೆ. ಆಗ ಸೋತಿದ್ದೇ ಒಳ್ಳೆಯದಾಯ್ತು ಅಂತ ಅನಿಸುತ್ತದೆ. ಆಗ ಗೆದ್ದಿದ್ದರೆ ರಾಷ್ಟ್ರ ರಾಜಕಾರಣದಲ್ಲಿರುತ್ತಿದೆ. ಎರಡು ಬಾರಿ ಸಿಎಂ ಆಗಲಿ ಆಗುತ್ತಿರಲಿಲ್ಲ. ಅನೇಕ ಯೋಜನೆಗಳನ್ನು ನೀಡಲು ಆಗುತ್ತಿರಲಿಲ್ಲ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ತಲೆ ಮೇಲೆ ಬೆಳ್ಳಿ ಕಿರೀಟವಿಟ್ಟು, ಕೈಗೆ ಬೃಹತ್ ಬೆಳ್ಳಿ ಗದೆ ನೀಡಿ ಸನ್ಮಾನಿಸಿದ ಜಮೀರ್ ಅಹ್ಮದ್

ಸಿದ್ದರಾಮಯ್ಯ ಜೊತೆ ಬಿಜೆಪಿ ನಾಯಕರ ಪಿಸುಮಾತು

ಕನಕಗಿರಿ ಉತ್ಸವದ ವೇದಿಕೆಯಲ್ಲಿ ಸಿದ್ದರಾಮಯ್ಯ ಜೊತೆ ಬಿಜೆಪಿ ನಾಯಕರೂ ವೇದಿಕೆ ಹಂಚಿಕೊಂಡಿದ್ದಾರೆ. ವೇದಿಕೆಯಲ್ಲಿ ಸಿದ್ದರಾಮಯ್ಯ ಜೊತೆ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಿಸುಮಾತನಾಡಿದ್ದು, ಬಳಿಕ ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತುಕತೆ ನಡೆಸಿದ್ದಾರೆ. ಒಬ್ಬರಾದ ಬಳಿಕ ಮತ್ತೊಬ್ಬರು ಸಿದ್ದರಾಮಯ್ಯ ಜೊತೆ ಮಾತನಾಡಿದ್ದು ತೀವ್ರ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯರನ್ನು ಹೊಗಳಿದ ಬಸವರಾಜ ರಾಯರೆಡ್ಡಿ

ಉತ್ಸವದಲ್ಲಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ, ಬಸವಣ್ಣನವರ ಆದರ್ಶಗಳೇ ಸಿಎಂ ಸಿದ್ದರಾಮಯ್ಯನವರ ಆದರ್ಶಗಳಾಗಿವೆ. ಗ್ಯಾರಂಟಿ ಯೋಜನೆಗಳಲ್ಲಿ 1 ರೂಪಾಯಿ ಕೂಡಾ ಭ್ರಷ್ಟಾಚಾರ ನಡೆದಿಲ್ಲ. ಸಿಎಂ ಸಿದ್ದರಾಮಯ್ಯ ಜಾತ್ಯತೀತ ನಾಯಕ. ಸಿಎಂ ಬಡವರ ಪರ ಇದ್ದಾರೆ, ಹೀಗಾಗಿ ಅವರನ್ನು ಕಂಡರೆ ಕೆಲವರಿಗೆ ಆಗಲ್ಲ. ಬಡವರು, ಶೋಷಿತರಿಗೆ ಯೋಜನೆ ಕೊಟ್ಟರೆ ಕೆಲವರಿಗೆ ಹೊಟ್ಟೆಉರಿಯಾಗುತ್ತದೆ. ರಾಜ್ಯ ಸರ್ಕಾರದ ಮುಂದಿನ ವರ್ಷದ ಬಜೆಟ್ 4 ಲಕ್ಷ ಕೋಟಿಗೆ ಹೋಗುತ್ತದೆ ಎಂದರು.

ನನ್ನನ್ನು ಮಂತ್ರಿ ಮಾಡದಿದ್ದರೂ ಪರವಾಗಿಲ್ಲ: ರಾಯರೆಡ್ಡಿ

ನನ್ನನ್ನು ಮಂತ್ರಿ ಮಾಡದಿದ್ದರೂ ಪರವಾಗಿಲ್ಲ, ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಬೇಕು ಎಂದು ರಾಯರೆಡ್ಡಿ ಹೇಳಿದ್ದಾರೆ. ನೀವು ಮುಖ್ಯಮಂತ್ರಿ ಆಗಿರಬೇಕೆಂದು ನಾನು ಸಿದ್ದರಾಮಯ್ಯಗೆ ಹೇಳಿದ್ದೇನೆ. ಸತ್ಯವನ್ನು ಹೇಳಲು ನನಗೆ ಯಾರ ಮುಲಾಜಿಲ್ಲ ಎಂದರು.

ಇಡೀ ದೇಶದಲ್ಲಿ ಅತ್ಯಂತ ಆರ್ಥಿಕ ಶಿಸ್ತು ಇರೋದು ಕರ್ನಾಟಕದಲ್ಲಿ ಮಾತ್ರ. ಸಿದ್ದರಾಮಯ್ಯ ನಂತರ ಕರ್ನಾಟಕ ರಾಜಕೀಯ ಹೇಗಿರುತ್ತೆಂಬ ಆತಂಕವಿದೆ. ಕೇವಲ ಧರ್ಮ ಹಾಗೂ ಹಣದ ರಾಜಕೀಯ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ನಿಲ್ಲಿಸುತ್ತಾರೆ ಅಂತಾ ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವರು ಹೊಟ್ಟೆಕಿಚ್ಚಿನಿಂದ ಮಾತನಾಡುತ್ತಿದ್ದಾರೆ. ಹೊಟ್ಟೆಕಿಚ್ಚಿನಿಂದ ಮಾತಾಡುವವರಿಗೆ ತಲೆ ಇದೆಯೋ ಇಲ್ವೋ ಗೊತ್ತಿಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ