ಇಂದಿನಿಂದ 2 ದಿನಗಳ ಕಾಲ ಕನಕಗಿರಿ ಉತ್ಸವ: ಕಾಲಿದ್ದವರು ಹಂಪೆ ನೋಡಬೇಕು, ಕಣ್ಣಿದ್ದವರು ಕನಕಗಿರಿ ನೋಡಬೇಕು

ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಐತಿಹಾಸಿಕ ಕನಕಗಿರಿ ಉತ್ಸವ ನಡೆಯುತ್ತಿದೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಸ್ವಕ್ಷೇತ್ರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಉತ್ಸವ ಅನೇಕ ವಿಶೇಷಗಳಿಗೆ ಸಾಕ್ಷಿಯಾಗಿದೆ. ಇನ್ನು ಕನಕಗಿರಿ, ಐತಿಹಾಸಿಕ ಸ್ಥಳವಾಗಿದ್ದು ಅನೇಕ ವಿಶೇಷತೆಗಳನ್ನೊಳಗೊಂಡಿದೆ.

ಇಂದಿನಿಂದ 2 ದಿನಗಳ ಕಾಲ ಕನಕಗಿರಿ ಉತ್ಸವ: ಕಾಲಿದ್ದವರು ಹಂಪೆ ನೋಡಬೇಕು, ಕಣ್ಣಿದ್ದವರು ಕನಕಗಿರಿ ನೋಡಬೇಕು
ಕನಕಗಿರಿ ಉತ್ಸವ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ವಿವೇಕ ಬಿರಾದಾರ

Updated on: Mar 02, 2024 | 1:48 PM

ಕೊಪ್ಪಳ, ಮಾರ್ಚ್​ 02: ಕನಕಗಿರಿ (Kanakagiri) ಪಟ್ಟಣದಲ್ಲಿ ಕನಕಗಿರಿ ಉತ್ಸವ (Kanakagiri Utsava) ನಡೆಯುತ್ತಿದೆ. ಇಂದು (ಮಾ.02) ಸಂಜೆ ನಡೆಯಲಿರುವ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅವರ ಸ್ವಕ್ಷೇತ್ರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಉತ್ಸವ ಅನೇಕ ವಿಶೇಷಗಳಿಗೆ ಸಾಕ್ಷಿಯಾಗಿದೆ. ಇನ್ನು ಕನಕಗಿರಿ, ಐತಿಹಾಸಿಕ ಸ್ಥಳವಾಗಿದ್ದು ಅನೇಕ ವಿಶೇಷತೆಗಳನ್ನೊಳಗೊಂಡಿದೆ.

ತಾಲೂಕು ಕೇಂದ್ರವಾಗಿರುವ ಕನಕಗಿರಿ ಪಟ್ಟಣ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಸುವರ್ಣಗಿರಿ ಅಂತ ಕೂಡ ಕನಕಗಿರಿಯನ್ನು ಕರೆಯುತ್ತಿದ್ದು, ಮೌರ್ಯ ಸಾಮ್ರಾಜ್ಯದ ಸಮಯದಲ್ಲಿಯೇ ಕನಕಗಿರಿ, ಪ್ರಾಂತೀಯ ರಾಜಧಾನಿಯಾಗಿತ್ತಂತೆ. ನಂತರ ವಿಜಯನಗರ ಅರಸರ ಕಾಲದಲ್ಲಿ, ವಿಜಯನಗರ ಪಾಳೆಗಾರರಾಗಿದ್ದ ಗುಜ್ಜಲ ವಂಶದ ರಾಜಧಾನಿಯಾಗಿತ್ತು. ಹೌದು ವಿಜಯನಗರ ಸಾಮ್ರಾಜ್ಯದಲ್ಲಿ ಮಾಂಡಲಿಕರಾಗಿದ್ದ ಗುಜ್ಜಲ ವಂಶ ಕನಕಗಿರಿಯಲ್ಲಿ ನೂರರು ವರ್ಷಗಳ ಕಾಲ ಆಳ್ವಿಕೆ ಮಾಡಿದೆ. 1436 ರಿಂದ ಸ್ವತಂತ್ರ ಸಿಗುವವರಗೂ ಗುಜ್ಜಲ ವಂಶದ ಅನೇಕ ದೊರೆಗಳು ಕನಕಗಿರಿಯನ್ನು ತಮ್ಮ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಅಧಿಕಾರ ನಡೆಸಿದ್ದರು.

ಕನಕಗಿರಿ ದೇವಸ್ಥಾನ ಕಲ್ಯಾಣಿ

ಗುಜ್ಜಲ ವಂಶದ ರಾಜ ಉಡಚಪ್ಪ ನಾಯಕನ ಆಳ್ವಿಕೆಯಲ್ಲಿ ಕನಕಗಿರಿಯಲ್ಲಿ ಅನೇಕ ದೇವಸ್ಥಾನಗಳು, ಕೋಟೆಗಳು ನಿರ್ಮಾಣವಾಗಿದ್ದು, ತನ್ನ ಅನೇಕ ಕೊಡುಗೆಗಳಿಂದ ಉಡಚಪ್ಪ ನಾಯಕ ಹೆಸರುಗಳಿಸಿದ್ದನು. ಇನ್ನು ನವಾಬ್ ಉಡಚ ನಾಯಕನಿಗೂ, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ನಡುವೆ ಅನೋನ್ಯ ಸಂಬಂಧವಿತ್ತಂತೆ. ಹೀಗಾಗಿ ಹಂಪೆಯಲ್ಲಿ ಹೇಗೆ ಅನೇಕ ದೇವಾಲಯಗಳು ನಿರ್ಮಾಣವಾದವೋ ಅದೇ ರೀತಿ, ಕನಕಗಿರಿಯಲ್ಲಿ ಕೂಡಾ ಅನೇಕ ದೇವಾಲಯಗಳ ನಿರ್ಮಾಣ ಮಾಡುವದರ ಜೊತೆಗೆ, ಈ ಭಾಗದಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ಕೂಡ ಮಾಡಲಾಯಿತು ಅಂತ ಇತಿಹಾಸಕಾರರು ಹೇಳುತ್ತಾರೆ.

ಇದನ್ನೂ ಓದಿ: ಮಾರ್ಚ್​ 11, 12ರಂದು ಕೊಪ್ಪಳ ಜಿಲ್ಲೆಯ ಆನೆಗೊಂದಿ ಉತ್ಸವ: ಶಾಸಕ ಜನಾರ್ದನ ರೆಡ್ಡಿ ಮಾಹಿತಿ

ಕನಗಿರಿ ಉತ್ಸವ

ಕಾಲಿದ್ದವರು ಹಂಪೆ ನೋಡಬೇಕು- ಕಣ್ಣಿದ್ದವರು ಕನಕಗಿರಿ ನೋಡಬೇಕು

ಕಾಲಿದ್ದವರು ಹಂಪೆ ನೋಡಬೇಕು. ಕಣ್ಣಿದ್ದವರು ಕನಕಗಿರಿ ನೋಡಬೇಕು ಅನ್ನೋ ಪ್ರತಿತಿ ಇದೆ. ಇದಕ್ಕೆ ಕಾರಣ, ಕನಕಗಿರಿಯಲ್ಲಿರುವ ಐತಿಹಾಸಿಕ ಸ್ಥಳಗಳು. ಹೌದು ಹಿಂದೆ ಕನಕಗಿರಿಯಲ್ಲಿ ಏಳು ನೂರು ಬಾವಿಗಳು, ಏಳು ನೂರು ಗುಡಿಗಳು, ಏಳು ನೂರು ಗೊಲ್ಲರ ಮನೆಗಳು ಇದ್ದವಂತೆ. ಇದನ್ನು ನೋಡಿಯೇ ಜನರು ಕಣ್ಣಿದ್ದವರು ಕನಕಗಿರಿ ನೋಡಬೇಕು ಅನ್ನೋ ಪ್ರತಿತಿ ಬಂದಿದೆ ಅಂತ ಹೇಳಲಾಗುತ್ತಿದೆ. ಇನ್ನು ಕನಕಗಿರಿ ಪಟ್ಟಣದಲ್ಲಿನ ಕನಕಾಚಲಪತಿ ದೇವಸ್ಥಾನವನ್ನು ಗುಜ್ಜಲ್ ವಂಶಸ್ಥರು ನಿರ್ಮಿಸಿದ್ದಾರೆ. ಈ ದೇವಸ್ಥಾನವು ವಿಜಯನಗರ ಕಾಲದಲ್ಲಿ ನಿರ್ಮಾಣವಾಗಿರುವ ದಕ್ಷಿಣ ಭಾರತದ ವಾಸ್ತುಶಿಲ್ಪದ ವಿಶಿಷ್ಟ ಉಧಾಹರಣೆಯಾಗಿದೆ. ಗೋಡೆ ಮತ್ತು ಗೋಪುರುಗಳು ಅನೇಕ ಶಿಲ್ಪಕಲೆಗಳಿಂದ ಅಲಂಕೃತಗೊಂಡಿದ್ದರೆ, ದೇವಸ್ಥಾನದಲ್ಲಿನ ಅನೇಕ ಕೆತ್ತನೆಗಳು ಆಕರ್ಷಕವಾಗಿವೆ.

ವಾದ್ಯಮೇಳ

ಇಂತಹ ಐತಿಹಾಸಿಕ ಸ್ಥಳದಲ್ಲಿ ಕಳೆದ ಅನೇಕ ವರ್ಷಗಳಿಂದ ಕನಕಗಿರಿ ಉತ್ಸವನ್ನು ಸರ್ಕಾರದಿಂದ ಆಚರಿಸಲಾಗುತ್ತಿದೆ. ಈ ವರ್ಷ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರೇ ಇರುವದರಿಂದ, ಸ್ವಕ್ಷೇತ್ರದಲ್ಲಿ ನಡೆಯುತ್ತಿರುವ ಉತ್ಸವವನ್ನು ಅದ್ದೂರಿಯಾಗಿ ಆಯೋಜಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್