ಕೊಪ್ಪಳ, ಏ.07: ಜಿಲ್ಲೆಯ ಗಂಗಾವತಿ(Gangavati) ತಾಲೂಕಿನಲ್ಲಿರುವ ಆನೆಗೊಂದಿಯ ಕಡೆಬಾಗಿಲು ಬೆಟ್ಟದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆಯಾಗಿದೆ. ಕಿಷ್ಕಿಂದಾ(Kishkindha) ಯುವ ಚಾರಣ ಬಳಗ ಬೆಟ್ಟದಲ್ಲಿ ಚಾರಣ ನಡೆಸಿದ ವೇಳೆ ಈ ಶಾಸನ ಪತ್ತೆಯಾಗಿದ್ದು, ಇಂದಿನ ಕಾಲಮಾನದ ಪ್ರಕಾರ 1527 ರ ಕಾಲಾವಧಿಯ ಶಿಲಾಶಾಸನ ಇದಾಗಿದೆ. ಇದರಲ್ಲಿ ಕಿಷ್ಕಿಂದಾ ಪ್ರದೇಶದ ಸ್ಥಳಗಳನ್ನ ಉಲ್ಲೇಖಿಸಿ ಕೆತ್ತಲಾಗಿದೆ.
ಇನ್ನು ಶಾಸನದಲ್ಲಿನ ಮಹತ್ವವನ್ನ ಇತಿಹಾಸ ತಜ್ಞ ಶರಣಬಸಪ್ಪ ಕೊಲ್ಕಾರ್ ಗುರುತಿಸಿದ್ದಾರೆ. ಆನೆಗೊಂದಿಯ ಮಹಾ ಪ್ರಧಾನ ಲಕ್ಕಿಶೆಟ್ಟಿಯ ಮಗ ವಿಜಯನಾಥ, ಬೆಟ್ಟದ ಮೇಲಿನ ವೀರಭದ್ರ ದೇವರ ಆರಾಧಕನಾಗಿದ್ದರ ಬಗ್ಗೆ ಈ ಶಿಲೆಯಲ್ಲಿ ಉಲ್ಲೇಖ ಮಾಡಲಾಗಿದೆಯಂತೆ. ಜೊತೆಗೆ ಆನೆಗೊಂದಿಯನ್ನ ಹಸ್ತಿನಾತ ಎಂದು ಕರೆಯಲಾಗುತ್ತಿದ್ದರ ಬಗ್ಗೆಯೂ ಉಲ್ಲೇಖಿಸಲಾಗಿದೆ. ಮತ್ತು ಕಿಷ್ಕಿಂದೆ ಪರ್ವತದ ಬಗ್ಗೆ ಕೂಡ ಈ ಶಾಸನದಲ್ಲಿ ಕಾಣಬಹುದಾಗಿದೆ. ಈ ಶಿಲಾ ಶಾಸನದಲ್ಲಿ ರಾಮಾಯಣ ಕಾಲದ ಸ್ಥಳಗಳ ಬಗ್ಗೆ ಇರುವುದರಿಂದ ರಾಮಾಯಣ ಕಾಲದ ಸ್ಥಳಗಳನ್ನು ಪತ್ತೆ ಹಚ್ಚಲು ಅನುಕೂಲವಾಗಿದೆ.
ಇದನ್ನೂ ಓದಿ:ರಾಯಚೂರಿನಲ್ಲಿ ಶ್ರೀರಾಮನ ಕುರುಹು ಪತ್ತೆ: ಅಯೋಧ್ಯಾಪತಿ ಬಿಟ್ಟ ಬಾಣಕ್ಕೆ ಬಂಡೆಯಿಂದ ಚಿಮ್ಮಿತು ನೀರು
ತುಮಕೂರು: ಮಧುಗಿರಿ ರಸ್ತೆಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದ 4 ಲಕ್ಷದ 80 ಸಾವಿರ ಹಣ ಜಪ್ತಿ ಮಾಡಲಾಗಿದೆ. ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಬೈಕ್ನ್ನು ತಡೆದು ಪರಿಶೀಲನೆ ನಡೆಸಿದಾಗ ಆತನ ಬ್ಯಾಗ್ನಲ್ಲಿ ಪತ್ತೆಯಾಗಿದೆ. ಆದರೆ, ಇದು ಖಾಸಗಿ ಬ್ಯಾಂಕ್ಗೆ ಸೇರಿದ ಹಣ ಎಂದು ಹೇಳಲಾಗುತ್ತಿದೆ. ಈ ಕುರಿತು ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 am, Sun, 7 April 24