ರಾಯಚೂರಿನಲ್ಲಿ ಶ್ರೀರಾಮನ ಕುರುಹು ಪತ್ತೆ: ಅಯೋಧ್ಯಾಪತಿ ಬಿಟ್ಟ ಬಾಣಕ್ಕೆ ಬಂಡೆಯಿಂದ ಚಿಮ್ಮಿತು ನೀರು
ಪ್ರಭು ಶ್ರೀರಾಮಚಂದ್ರ ಕರ್ನಾಟಕದಲ್ಲೂ ಸಂಚರಿಸಿದ್ದಾನೆ ಎಂಬುವುದಕ್ಕೆ ಅನೇಕ ಕುರುಹುಗಳು ಈಗಾಗಲೆ ಪತ್ತೆಯಾಗಿವೆ. ಇದೀಗ ಮತ್ತೊಂದು ಕುರಹು ಪತ್ತೆಯಾಗಿದೆ. ಹೌದು ಶ್ರೀರಾಮನಿಗೂ ರಾಯಚೂರಿಗು ನಂಟು ಇರುವ ಕುರುಹು ಬೆಳಕಿಗೆ ಬಂದಿದೆ.
Updated on:Jan 16, 2024 | 11:55 AM

ಪ್ರಭು ಶ್ರೀರಾಮಚಂದ್ರ ಕರ್ನಾಟಕದಲ್ಲೂ ಸಂಚರಿಸಿದ್ದಾನೆ ಎಂಬುವುದಕ್ಕೆ ಅನೇಕ ಕುರುಹುಗಳು ಈಗಾಗಲೆ ಪತ್ತೆಯಾಗಿವೆ. ಇದೀಗ ಮತ್ತೊಂದು ಕುರಹು ಪತ್ತೆಯಾಗಿದೆ. ಹೌದು ಶ್ರೀರಾಮನಿಗೂ ರಾಯಚೂರಿಗು ನಂಟು ಇರುವ ಕುರುಹು ಬೆಳಕಿಗೆ ಬಂದಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಯರಡೋಣಿ ಗ್ರಾಮದ ದಟ್ಟ ಅರಣ್ಯದಲ್ಲಿ ಶ್ರೀರಾಮಚಂದ್ರನ ಕುರುಹು ಪತ್ತೆಯಾಗಿದ್ದು, ಈ ಸ್ಥಳಕ್ಕೆ ರಾಮತೀರ್ಥ ಅಂತ ಕರೆಯುತ್ತಾರೆ.

ವನಸವಾಸದ ಸಂದರ್ಭದಲ್ಲಿ ಸೀತಾ ಮಾತೆಯ ಅಪಹರಣವಾಗುತ್ತದೆ. ಸೀತಾ ಮಾತೆಯನ್ನು ಅರಸುತ್ತಾ ಶ್ರೀರಾಮಚಂದ್ರ ಈ ಸ್ಥಳಕ್ಕೆ ಬಂದಿದ್ದಾನೆ.

ಇಲ್ಲಿಗೆ ಬಂದ ರಾಮನಿಗೆ ಬಾಯಾರಿಕೆಯಾಗಿ ನೀರು ಹುಡುಕುತ್ತಾನೆ. ನೀರು ಸಿಗದೆ ಇದ್ದಾಗ, ಅಲ್ಲೇ ಇದ್ದ ಬೃಹತ್ ಬಂಡೆಗೆ ಬಾಣ ಬಿಡುತ್ತಾನೆ.

ರಾಮ ಬಿಟ್ಟ ಬಾಣದಿಂದ ಬಂಡೆಗಲ್ಲಿನಿಂದ ನೀರು ಚಿಮ್ಮುತ್ತದೆ. ಈ ನೀರನ್ನು ಕುಡಿದು ರಾಮ ಬಾಯಾರಿಕೆ ನೀಗಿಸಿಕೊಂಡಿದ್ದಾನೆ.

ಬಳಿಕ ಶ್ರೀರಾಮ ಇದೇ ಸ್ಥಳದಲ್ಲಿ 11 ದಿನ ತಪ್ಪಸ್ಸು ಮಾಡಿದ್ದಾನೆ ಎಂಬುವುದು ಪ್ರತೀತಿ. ನಂತರ ಶ್ರೀರಾಮ ಇಲ್ಲಿಂದ ಕೊಪ್ಪಳದ ಅಂಜನಾದ್ರಿಗೆ ಪ್ರಯಾಣ ಬೆಳಸಿದ್ದಾನೆ.

ರಾಮ ಬಿಟ್ಟ ಸ್ಥಳದಲ್ಲಿ ಕಂದಕವಿದ್ದು, ಅಲ್ಲಿಂದ ಇನ್ನೂ ನೀರು ಜಿನಗುತ್ತದೆ. ಬರಗಾಲವಿದ್ದರೂ ವರ್ಷ ಪೂರ್ತಿ ಈ ಸ್ಥಳದಲ್ಲಿ ಬಂಡೆಗಲ್ಲಿನ ಆಳದಿಂದ ನೀರು ಬರುತ್ತದೆ.

ಕಾಲಾ ನಂತರ ಅಮರಶಿಲ್ಪಿ ಜಕಣಾಚಾರಿ ಈ ಸ್ಥಳಕ್ಕೆ ಬಂದು, ನೀರು ಜಿನುಗುವ ಬಂಡೆ ಪಕ್ಕದಲ್ಲಿ ಆಂಜನೇಯನ ಮೂರ್ತಿ ಕೆತ್ತನೆ ಮಾಡಿದ್ದಾರೆ.

ಬಂಡೆಯಿಂದ ಜಿನುಗುವ ನೀರು ಆಂಜನೇಯನ ಪಾದ ಸೇರುತ್ತದೆ. ಈ ನೀರು ಸೇವನೆಯಿಂದ ರೋಗಗಳು ವಾಸಿಯಾಗುತ್ತವೆ ಅನ್ನುವುದು ಪ್ರತೀತಿ.

ಇನ್ನು ತ್ರೇತಾಯುಗದಲ್ಲಿ ಈ ಪ್ರದೇಶಕ್ಕೆ ಜಟ್ಟಿಂಗಮಹಾರಾಜನ ಪಟ್ಟಣ ಅನ್ನೋ ಹೆಸರು ಇತ್ತು.

ಈ ಅರಣ್ಯದ ಪಕ್ಕದಲ್ಲೇ ಅಮರೇಶ್ವರ ಪುಣ್ಯ ಕ್ಷೇತ್ರದ ಬಳಿಯ ಬೆಟ್ಟದಲ್ಲಿ ನೂರಾರು ಖುಷಿಮುನಿಗಳು, ಸಾಧುಸಂತರು ತಪಸ್ಸು ಮಾಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ರಾಮ ಇಲ್ಲಿಗೆ ಬಂದು ತಪಸ್ಸು ಮಾಡಿದ್ದನು.
Published On - 11:51 am, Tue, 16 January 24



