ಅಧಿಕಾರಿ ವರ್ಗಾವಣೆ ಬದಲಿಗೆ ಇನ್ನೊಂದು ಇಲಾಖೆ ಹೆಚ್ಚುವರಿ ಹುದ್ದೆ: ಮತ್ತೊಮ್ಮೆ ಧಗಧಗಿಸಲಿದಿಯಾ ವರ್ಗಾವಣೆ ಕಿಚ್ಚು?

ಕೊಪ್ಪಳ ಜಿಲ್ಲಾ ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆ ಮಾಡುವಂತೆ ಸಮಾಜ‌ ಕಲ್ಯಾಣ ಇಲಾಖೆ‌ ಸಚಿವ ಹೆಚ್.ಸಿ.ಮಹಾದೇವಪ್ಪ ಅವರಿಗೆ ಕೊಪ್ಪಳ ಕಾಂಗ್ರೆಸ್​ ಶಾಸಕ ರಾಘವೇಂದ್ರ ಹಿಟ್ನಾಳ, ಹಾಗೂ ಸಚಿವ ಶಿವರಾಜ ತಂಗಡಗಿ ಅವರು ಪತ್ರ ಬರೆದಿದ್ದಾರೆ. ಆದರೆ ಇದಕ್ಕೆ ಕ್ಯಾರೆ ಎನ್ನದೇ ವೈ.ಎ.ಕಾಳೆಯ ಅವರಿಗೆ ಇನ್ನೊಂದು ಇಲಾಖೆ ಹೆಚ್ಚುವರಿ ಹುದ್ದೆ ನೀಡಲಾಗಿದೆ.

ಅಧಿಕಾರಿ ವರ್ಗಾವಣೆ ಬದಲಿಗೆ ಇನ್ನೊಂದು ಇಲಾಖೆ ಹೆಚ್ಚುವರಿ ಹುದ್ದೆ: ಮತ್ತೊಮ್ಮೆ ಧಗಧಗಿಸಲಿದಿಯಾ ವರ್ಗಾವಣೆ ಕಿಚ್ಚು?
ವರ್ಗಾವಣೆಗೊಳಿಸುವಂತೆ ಸಚಿವ, ಶಾಸಕರ ಪತ್ರ
Updated By: ವಿವೇಕ ಬಿರಾದಾರ

Updated on: Sep 01, 2023 | 10:25 AM

ಕೊಪ್ಪಳ, ಸೆಪ್ಟೆಂಬರ್​​ 1: ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಕಾಂಗ್ರೆಸ್​ ಸರ್ಕಾರ (Congress Government) ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದು, ಇದಕ್ಕಾಗಿ ಲಂಚ ಪಡೆಯುತ್ತಿದೆ ಎಂದು ವಿಪಕ್ಷ ಬಿಜೆಪಿ (BJP) ಮತ್ತು ಜೆಡಿಎಸ್ (JDS)​ ಆರೋಪ ಮಾಡಿವೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ವರ್ಗಾವಣೆ ವಿಚಾರ ಕೋಲಾಹಲವನ್ನೇ ಎಬ್ಬಿಸಿತ್ತು. ಇದಾದ ಬಳಿಕ ಬೂದಿಮುಚ್ಚಿದ ಕೆಂಡದಂತಿರುವ ವರ್ಗಾವಣೆ ಕಿಚ್ಚು ಮತ್ತೊಮ್ಮೆ ಧಗಧಗಿಸುವ ಸಾಧ್ಯತೆ ಇದೆ. ಈ ವರ್ಗಾವಣೆ ಸಚಿವರ ನಡುವಿನ ಫೈಟ್​ಗೆ ಕಾರಣವಾಗುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆ  ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಪತ್ರ ಬರೆದಿದ್ದರೂ, ಸಮಾಜ‌ ಕಲ್ಯಾಣ ಇಲಾಖೆ‌ ಸಚಿವ ಹೆಚ್.ಸಿ.ಮಹಾದೇವಪ್ಪ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕೊಪ್ಪಳ ಜಿಲ್ಲಾ ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆ ಮಾಡುವಂತೆ ಸಮಾಜ‌ ಕಲ್ಯಾಣ ಇಲಾಖೆ‌ ಸಚಿವ ಹೆಚ್.ಸಿ.ಮಹಾದೇವಪ್ಪ ಅವರಿಗೆ ಕೊಪ್ಪಳ ಕಾಂಗ್ರೆಸ್​ ಶಾಸಕ ರಾಘವೇಂದ್ರ ಹಿಟ್ನಾಳ, ಹಾಗೂ ಜಿಲ್ಲಾ ಸಚಿವ ಶಿವರಾಜ ತಂಗಡಗಿ ಪತ್ರ ಬರೆದಿದ್ದಾರೆ. ಎಂಡಿ. ವೈ.ಎ.ಕಾಳೆಯ ಅವರನ್ನು ವರ್ಗಾವಣೆ ಮಾಡಿ, ಈ ಜಾಗದಲ್ಲಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪುಷ್ಪಲತಾ ಅವರನ್ನು ಕೂಡಿಸಿ ಎಂದು ಶಿಫಾರಸ್ಸು ಮಾಡಿದ್ದಾರೆ.

ಆದರೆ ಶಾಸಕರ ಹಾಗೂ ಸಚಿವರ ಪತ್ರಕ್ಕೆ ಹೆಚ್.ಸಿ.ಮಹಾದೇವಪ್ಪ ಡೋಂಟ್ ಕೇರ್ ಎಂದಿದ್ದು, ವೈ.ಎ.ಕಾಳೆಯ ಅವರಿಗೆ ಇನ್ನೊಂದು ಇಲಾಖೆ ಹೆಚ್ಚುವರಿ ಹುದ್ದೆ ನೀಡಿ ಟಾಂಗ್​ಕೊಟ್ಟಿದ್ದಾರೆ. ಇದರಿಂದ ಕೊಪ್ಪಳ‌‌ ಕೈ ನಾಯಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.

ಇದನ್ನೂ  ಓದಿ: 21 ಜನ ಡಿವೈಎಸ್‌ಪಿ, 64 ಇನ್ಸ್‌ಪೆಕ್ಟರ್‌ಗಳನ್ನ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ವೈ.ಎ.ಕಾಳೆ  ವಿರುದ್ಧ ಜಿಲ್ಲಾಧಿಕಾರಿಯ ಸಹಿಯನ್ನು ಪೊರ್ಜರಿ ಮಾಡಿ ಭ್ರಷ್ಟಾಚಾರ ಮಾಡಿರುವ ಆರೋಪ ಕೇಳಿಬಂದಿದ್ದು, ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್​ ನಾಯಕರು ಅಂತಹ ಭ್ರಷ್ಟ ಅಧಿಕಾರಿ ಸೇವೆ ನಮ್ಮ ಜಿಲ್ಲೆಯಲ್ಲಿ ಬೇಡ ಎಂದು ಪತ್ರ ಬರೆದಿದ್ದಾರೆ. ಇನ್ನು ಈ ಭ್ರಷ್ಟ ಅಧಿಕಾರಿಯ ಬೆನ್ನಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವರು ನಿಂತರಾ ಎಂಬ ಪ್ರಶ್ನೆ ಉದ್ಭವವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:09 am, Fri, 1 September 23