ಭಾವೈಕ್ಯತೆಗೆ ಸಾಕ್ಷಿಯಾದ ಹನುಮ ಮಾಲೆ; ಶ್ರೀರಾಮನ ಪೂಜೆ, ಹನುಮಾನ್ ಚಾಲೀಸಾ ಪಠಣೆಯಲ್ಲಿ ಮುಸ್ಲಿಮರು ಭಾಗಿ

ಶ್ರೀರಾಮನಿಗೆ ಪೂಜೆ ಸಲ್ಲಿಸುವ ಮೂಲಕ ಮುಸ್ಲಿಂ ಸಮುದಾಯದ ಭಕ್ತರು ಭಾವೈಕ್ಯತೆ ಮೆರೆದಿದ್ದಾರೆ. ಜೈ ಶ್ರೀರಾಮ ಎಂದು ಘೋಷಣೆ ಕೂಗಿ ಪೂಜೆ ಸಲ್ಲಿಸಿದ್ದಾರೆ. ಮಾಜಿ ಸಚಿವ ಶಿವರಾಜ್ ತಂಗಡಗಿಯ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಗಳು ಹನುಮ ವ್ರತ ಆಚರಣೆಯಲ್ಲಿ ಮಾಡಿದ್ದಾರೆ.

ಭಾವೈಕ್ಯತೆಗೆ ಸಾಕ್ಷಿಯಾದ ಹನುಮ ಮಾಲೆ; ಶ್ರೀರಾಮನ ಪೂಜೆ, ಹನುಮಾನ್ ಚಾಲೀಸಾ ಪಠಣೆಯಲ್ಲಿ ಮುಸ್ಲಿಮರು ಭಾಗಿ
ಭಾವೈಕ್ಯತೆಗೆ ಸಾಕ್ಷಿಯಾದ ಹನುಮ ಮಾಲೆ; ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಶ್ರೀರಾಮನ ಪೂಜೆ, ಹನುಮಾನ್ ಚಾಲೀಸಾ ಪಠಣೆಯಲ್ಲಿ ಮುಸ್ಲಿಮರು ಭಾಗಿ
Follow us
TV9 Web
| Updated By: ಆಯೇಷಾ ಬಾನು

Updated on:Apr 13, 2022 | 8:08 AM

ಕೊಪ್ಪಳ: ಏಪ್ರಿಲ್ 10ರಂದು ನಡೆದ ಶ್ರೀ ರಾಮನವಮಿಯಂದು ಹಿಂದೂ ಮುಸ್ಲಿಂ ಯುವಕರು ಒಟ್ಟಾಗಿ ಸೇರಿ ಪಾನಕ, ಮಜ್ಜಿಗೆ ಹಂಚಿ ಹಬ್ಬ ಆಚರಿಸಿದ್ದರು. ಸದ್ಯ ಈಗ ಮತ್ತೊಮ್ಮೆ ಶ್ರೀರಾಮನಿಗೆ ಪೂಜೆ ಸಲ್ಲಿಸುವ ಮೂಲಕ ಮುಸ್ಲಿಂ ಸಮುದಾಯದ ಭಕ್ತರು ಭಾವೈಕ್ಯತೆ ಮೆರೆದಿದ್ದಾರೆ. ಜೈ ಶ್ರೀರಾಮ ಎಂದು ಘೋಷಣೆ ಕೂಗಿ ಪೂಜೆ ಸಲ್ಲಿಸಿದ್ದಾರೆ. ಮಾಜಿ ಸಚಿವ ಶಿವರಾಜ್ ತಂಗಡಗಿಯ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಗಳು ಹನುಮ ವ್ರತ ಆಚರಣೆಯಲ್ಲಿ ಮಾಡಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ದೇವಿಗುಡ್ಡದಲ್ಲಿ ವ್ರತ ಆಚರಣೆ ಮಾಡಲಾಗಿದೆ. ಹನುಮಾನ್ ಚಾಲೀಸಾ ಪಠಣದಲ್ಲಿಯೂ ಮುಸ್ಲಿಂ ಮಹಿಳೆಯರು ಭಾಗಿಯಾಗಿ ಭಾವೈಕ್ಯತೆಗೆ ಸಾಕ್ಷಿಯಾದ್ರು.

koppal hanuma male 2

ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಶ್ರೀರಾಮನ ಪೂಜೆ, ಹನುಮಾನ್ ಚಾಲೀಸಾ ಪಠಣೆಯಲ್ಲಿ ಮುಸ್ಲಿಮರು ಭಾಗಿ

koppal hanuma male 2

ಭಾವೈಕ್ಯತೆಗೆ ಸಾಕ್ಷಿಯಾದ ಹನುಮ ಮಾಲೆ

ಕೊಪ್ಪಳದಲ್ಲಿ ಹನುಮ ಮಾಲೆ ಪಾಲಿಟಿಕ್ಸ್ ಕೊಪ್ಪಳ: ಸಾಕ್ಷಾತ್‌ ಆಂಜನೇಯ(Lord Hanuman) ಜನ್ಮತಾಳಿದ ಪವಿತ್ರ ಕ್ಷೇತ್ರದಲ್ಲಿ ಮಾಲೆ ಪಾಲಿಟಿಕ್ಸ್ ಶುರುವಾಗಿದೆ. ದೇವರನ್ನ ಒಲಿಸಿಕೊಳ್ಳಲು ಭಕ್ತರು ಮಾಲೆ ಧರಿಸಿದ್ರೆ, ಮತದಾರರನ್ನ ಒಲಿಸಿಕೊಳ್ಳಲು ರಾಜಕಾರಣಿಗಳು ಮಾಲೆಯ ಮೊರೆ ಹೋಗಿದ್ದಾರೆ. ಚುನಾವಣೆಗೆ ಒಂದು ವರ್ಷ ಬಾಕಿ ಇರೋವಾಗ್ಲೇ ರಾಜಕಾರಣಿಗಳು ದೇವರ ಮೊರೆ ಹೋಗಿದ್ದಾರೆ. ಅಂಜನಾದ್ರಿ ಬೆಟ್ಟ. ಹಿಂದೂಗಳ ಆರಾಧ್ಯದೈವ ಹನುಮಾನ್‌ ಹುಟ್ಟಿದ ಸ್ಥಳ. ಇದೇ ಆಂಜನೇಯನ ಹೆಸರಲ್ಲಿ ರಾಜ್ಯದ ಉದ್ದಗಲಕ್ಕೂ ಭಕ್ತರು ಮಾಲೆ ಹಾಕ್ತಾರೆ. ಆದ್ರೆ ರಾಮನವಮಿಯಂದು(Rama Navami) ಕೊಪ್ಪಳ ಜಿಲ್ಲೆ ಕನಕಗಿರಿ ಶಾಸಕ ಬಿಜೆಪಿಯ ಬಸವರಾಜ್‌ ದಡೇಸಗೂರು(Basavaraj Dadesugur) ಕೂಡಾ ಹನುಮಾಲೆ ಹಾಕಿದ್ದಾರೆ. ಇದರ ಬೆನ್ನಲ್ಲೆ ಗಂಗಾವತಿಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ(Shivaraj Tangadagi) ಹನುಮ ಮಾಲೆ ಧರಿಸಿದ್ದಾರೆ. ಕೊಪ್ಪಳದಲ್ಲೀಗ ಹನುಮ ಮಾಲೆ ಹೆಸರಿನಲ್ಲಿ ರಾಜಕಾರಣ ಶುರುವಾಗಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲೇ ಆಂಜನೇಯನ ಜನ್ಮ ಸ್ಥಳ ಇರೋದ್ರಿಂದ ಕೊಪ್ಪಳ ಜಿಲ್ಲೆಯಲ್ಲಿ ಮಾಲೆ ಹಾಕೋ ಭಕ್ತರ ಸಂಖ್ಯೆ ಹೆಚ್ಚಿದೆ. ಏಪ್ರಿಲ್‌ 16 ರಂದು ಹನುಮ ಜಯಂತಿ ಇರೋದ್ರಿಂದ ಹನುಮ ಮಾಲೆ ಹಾಕೋ ಭಕ್ತರು, ಅಂಜನಾದ್ರಿ ಬೆಟ್ಟ ಏರಿ ಹರಕೆ ತೀರಿಸಿ ಬರ್ತಾರೆ. ಅಂದ್ರೆ ಕೊಪ್ಪಳ ಜಿಲ್ಲೆ ಕನಕಗಿರಿ ಶಾಸಕ ಬಿಜೆಪಿಯ ಬಸವರಾಜ್‌ ದಡೇಸಗೂರು ಕೂಡಾ ಹನುಮಾಲೆ ಹಾಕಿದ್ದಾರೆ. ಕನಕಗಿರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೆಲ ಆಪ್ತರೊಂದಿಗೆ ಹನುಮ ಮಾಲೆ ಧರಿಸಿದ್ದಾರೆ. ಇಷ್ಟು ವರ್ಷ ಮಾಲೆ ಹಾಕದ ಶಾಸಕರು ಚುನಾವಣೆ ಹೊಸ್ತಿಲಲ್ಲಿ ಮಾಲೆ ಹಾಕಿರೋದು ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಶಾಸಕರು ಮಾತ್ರ ನಾವು ಹನುಮನ ಪರಮಭಕ್ತರು ಅಂತಾರೆ.

ಇದನ್ನೂ ಓದಿ: ನಿನ್ನೆ ಬಸವರಾಜ್‌ ದಡೇಸಗೂರು ಇಂದು ಶಿವರಾಜ್ ತಂಗಡಗಿ; ಕೊಪ್ಪಳದಲ್ಲಿ ಹನುಮ ಮಾಲೆ ಪಾಲಿಟಿಕ್ಸ್, ಯಾರ ಕೈ ಹಿಡಿಯುತ್ತಾನೆ ಆಂಜನೇಯ?

ಸಂತೋಷ್ ಆತ್ಮಹತ್ಯೆಗೆ ಹೊಸ ಟ್ವಿಸ್ಟ್; ರಮೇಶ್ ಜಾರಕಿಹೊಳಿ‌ ಬೆಂಬಲದಿಂದ ಕಾಮಗಾರಿ ಮಾಡಿಸಿದ್ದಾರೆಂದು ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷ ಹೇಳಿಕೆ

Published On - 8:06 am, Wed, 13 April 22

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ