AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನೆ ಬಸವರಾಜ್‌ ದಡೇಸಗೂರು ಇಂದು ಶಿವರಾಜ್ ತಂಗಡಗಿ; ಕೊಪ್ಪಳದಲ್ಲಿ ಹನುಮ ಮಾಲೆ ಪಾಲಿಟಿಕ್ಸ್, ಯಾರ ಕೈ ಹಿಡಿಯುತ್ತಾನೆ ಆಂಜನೇಯ?

ಆದ್ರೆ ನಿನ್ನೆ ರಾಮನವಮಿಯಂದು(Rama Navami) ಕೊಪ್ಪಳ ಜಿಲ್ಲೆ ಕನಕಗಿರಿ ಶಾಸಕ ಬಿಜೆಪಿಯ ಬಸವರಾಜ್‌ ದಡೇಸಗೂರು(Basavaraj Dadesugur) ಕೂಡಾ ಹನುಮಾಲೆ ಹಾಕಿದ್ದಾರೆ. ಇದರ ಬೆನ್ನಲ್ಲೆ ಇಂದು ಗಂಗಾವತಿಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ(Shivaraj Tangadagi) ಹನುಮ ಮಾಲೆ ಧರಿಸಿದ್ದಾರೆ.

ನಿನ್ನೆ ಬಸವರಾಜ್‌ ದಡೇಸಗೂರು ಇಂದು ಶಿವರಾಜ್ ತಂಗಡಗಿ; ಕೊಪ್ಪಳದಲ್ಲಿ ಹನುಮ ಮಾಲೆ ಪಾಲಿಟಿಕ್ಸ್, ಯಾರ ಕೈ ಹಿಡಿಯುತ್ತಾನೆ ಆಂಜನೇಯ?
ಹನುಮ ಮಾಲೆ ಧರಿಸಿದ ಶಿವರಾಜ್ ತಂಗಡಗಿ
TV9 Web
| Edited By: |

Updated on: Apr 11, 2022 | 8:26 AM

Share

ಕೊಪ್ಪಳ: ಸಾಕ್ಷಾತ್‌ ಆಂಜನೇಯ(Lord Hanuman) ಜನ್ಮತಾಳಿದ ಪವಿತ್ರ ಕ್ಷೇತ್ರದಲ್ಲಿ ಮಾಲೆ ಪಾಲಿಟಿಕ್ಸ್ ಶುರುವಾಗಿದೆ. ದೇವರನ್ನ ಒಲಿಸಿಕೊಳ್ಳಲು ಭಕ್ತರು ಮಾಲೆ ಧರಿಸಿದ್ರೆ, ಮತದಾರರನ್ನ ಒಲಿಸಿಕೊಳ್ಳಲು ರಾಜಕಾರಣಿಗಳು ಮಾಲೆಯ ಮೊರೆ ಹೋಗಿದ್ದಾರೆ. ಚುನಾವಣೆಗೆ ಒಂದು ವರ್ಷ ಬಾಕಿ ಇರೋವಾಗ್ಲೇ ರಾಜಕಾರಣಿಗಳು ದೇವರ ಮೊರೆ ಹೋಗಿದ್ದಾರೆ. ಅಂಜನಾದ್ರಿ ಬೆಟ್ಟ. ಹಿಂದೂಗಳ ಆರಾಧ್ಯದೈವ ಹನುಮಾನ್‌ ಹುಟ್ಟಿದ ಸ್ಥಳ. ಇದೇ ಆಂಜನೇಯನ ಹೆಸರಲ್ಲಿ ರಾಜ್ಯದ ಉದ್ದಗಲಕ್ಕೂ ಭಕ್ತರು ಮಾಲೆ ಹಾಕ್ತಾರೆ. ಆದ್ರೆ ನಿನ್ನೆ ರಾಮನವಮಿಯಂದು(Rama Navami) ಕೊಪ್ಪಳ ಜಿಲ್ಲೆ ಕನಕಗಿರಿ ಶಾಸಕ ಬಿಜೆಪಿಯ ಬಸವರಾಜ್‌ ದಡೇಸಗೂರು(Basavaraj Dadesugur) ಕೂಡಾ ಹನುಮಾಲೆ ಹಾಕಿದ್ದಾರೆ. ಇದರ ಬೆನ್ನಲ್ಲೆ ಇಂದು ಗಂಗಾವತಿಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ(Shivaraj Tangadagi) ಹನುಮ ಮಾಲೆ ಧರಿಸಿದ್ದಾರೆ. ಕೊಪ್ಪಳದಲ್ಲೀಗ ಹನುಮ ಮಾಲೆ ಹೆಸರಿನಲ್ಲಿ ರಾಜಕಾರಣ ಶುರುವಾಗಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲೇ ಆಂಜನೇಯನ ಜನ್ಮ ಸ್ಥಳ ಇರೋದ್ರಿಂದ ಕೊಪ್ಪಳ ಜಿಲ್ಲೆಯಲ್ಲಿ ಮಾಲೆ ಹಾಕೋ ಭಕ್ತರ ಸಂಖ್ಯೆ ಹೆಚ್ಚಿದೆ. ಏಪ್ರಿಲ್‌ 16 ರಂದು ಹನುಮ ಜಯಂತಿ ಇರೋದ್ರಿಂದ ಹನುಮ ಮಾಲೆ ಹಾಕೋ ಭಕ್ತರು, ಅಂಜನಾದ್ರಿ ಬೆಟ್ಟ ಏರಿ ಹರಕೆ ತೀರಿಸಿ ಬರ್ತಾರೆ. ಅಂದ್ರೆ ಕೊಪ್ಪಳ ಜಿಲ್ಲೆ ಕನಕಗಿರಿ ಶಾಸಕ ಬಿಜೆಪಿಯ ಬಸವರಾಜ್‌ ದಡೇಸಗೂರು ಕೂಡಾ ಹನುಮಾಲೆ ಹಾಕಿದ್ದಾರೆ. ಕನಕಗಿರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೆಲ ಆಪ್ತರೊಂದಿಗೆ ಹನುಮ ಮಾಲೆ ಧರಿಸಿದ್ದಾರೆ. ಇಷ್ಟು ವರ್ಷ ಮಾಲೆ ಹಾಕದ ಶಾಸಕರು ಚುನಾವಣೆ ಹೊಸ್ತಿಲಲ್ಲಿ ಮಾಲೆ ಹಾಕಿರೋದು ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಶಾಸಕರು ಮಾತ್ರ ನಾವು ಹನುಮನ ಪರಮಭಕ್ತರು ಅಂತಾರೆ.

ಇನ್ನು ಬಿಜೆಪಿ ಶಾಸಕ ಬಸವರಾಜ್ ದಡೇಸಗೂರು ಒಬ್ರೇ ಹನುಮ ಮಾಲೆ ಹಾಕಿದ್ರೆ ಸುದ್ದಿ ಆಗ್ತಿರಲಿಲ್ಲ. ಆದ್ರೆ ಇಲ್ಲಿ ಮಾಜಿ ಸಚಿವ ಇದೇ ಕ್ಷೇತ್ರದ ಮಾಜಿ ಶಾಸಕ ಕಾಂಗ್ರೆಸ್‌ನ ಶಿವರಾಜ್ ತಂಗಡಗಿ ಕೂಡಾ ಹನುಮ ಮಾಲೆ ಹಾಕಿದ್ದಾರೆ. ತಂಗಡಗಿ ಇವತ್ತು ಅಂದ್ರೆ ಸೋಮವಾರ ಹನುಮ ಮಾಲೆ ಹಾಕಿದ್ದಾರೆ. ಕಾಂಗ್ರೆಸ್‌ ನಾಯಕರು ಹಿಂದುತ್ವದ ವಿರೋಧಿಗಳು ಅನ್ನೋ ಆರೋಪ ಇರೋವಾಗ್ಲೇ, ಮಾಜಿ ಸಚಿವರು ಹನುಮ ಮಾಲೆ ಧರಿಸಿ ಬೆಟ್ಟ ಏರಲು ಮುಂದಾಗಿದ್ದಾರೆ. ಈ ಬಗ್ಗೆ ಅವರನ್ನೇ ಕೇಳಿದ್ರೆ, ನಾನು ಕೂಡಾ ಹನುಮನ ಭಕ್ತ. ಇದ್ರಲ್ಲಿ ರಾಜಕೀಯ ಇಲ್ಲಾ ಅಂತಾರೆ.

ಒಟ್ನಲ್ಲಿ ಇಷ್ಟು ವರ್ಷ ಹನುಮದಿಂದ ದೂರವೇ ಇದ್ದ ನಾಯಕರು, ಚುನಾವಣೆ ಹತ್ತಿರವಾಗ್ತಿದ್ದಂತೆ ಹನುಮನ ಜಪ ಮಾಡ್ತಿದ್ದಾರೆ. ನಿನ್ನೆ ಹಾಲಿ ಶಾಸಕರು ಹನುಮಮಾಲೆಹಾಕಿದ್ರೆ, ಇವತ್ತು ಮಾಜಿ ಶಾಸಕರು ಮಾಲೆ ಧರಿಸಿದ್ದಾರೆ. ಇಬ್ರೂ ಹೀಗೆ ಮಾಲೆ ಹಾಕ್ತಿರೋದ್ರಿಂದ ಮುಂದಿನ ಚುನಾವಣೆಯಲ್ಲಿ ಆಂಜನೇಯ ಯಾರ ಮೇಲೆ ಕೃಪೆ ತೋರುತ್ತಾನೋ ಅಂತಾ ಕ್ಷೇತ್ರದ ಜನ ಮಾತನಾಡಿಕೊಳ್ತಿದ್ದಾರೆ.

ಇದನ್ನೂ ಓದಿ: 2+2 ಸಚಿವರ ಸಂವಾದಕ್ಕೂ ಪೂರ್ವ ಇಂದು ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಜೋ ಬೈಡನ್​ ವರ್ಚ್ಯುವಲ್​ ಮಾತುಕತೆ

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!