ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ದೇಗುಲದಲ್ಲಿ ಕಳಚಿಬಿದ್ದ ತ್ರಿಶೂಲ; ಸಿಸಿ ಕ್ಯಾಮರಾದಿಂದ ಅಸಲಿ ಸತ್ಯ ಬಯಲು
ಕೋತಿ ಶಿಬಾರದ ಕಲ್ಲಿನ ಮೇಲೆ ಹತ್ತಿ ತ್ರಿಶೂಲ ಬಿಳಿಸಿದೆ. ಇಲ್ಲಿನ ಮೈಲಾರಲಿಂಗೇಶ್ವರನ ಕಾರ್ಣಿಕ ಈಡಿ ದೇಶ, ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇದೆ.
ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ದೇಗುಲದಲ್ಲಿ ತ್ರಿಶೂಲ ಕಳಚಿಬಿದ್ದಿದೆ. ದೇಗುಲದ ಶಿಬಾರದ ಮೇಲೆ ಅಳವಡಿಸಿದ್ದ ತ್ರಿಶೂಲ ಕೆಳಗೆ ಬಿದ್ದಿದೆ. ಕಳೆದ ವರ್ಷ ಮೈಲಾರಲಿಂಗೇಶ್ವರ ಜಾತ್ರೆ ವೇಳೆ ಕೂಡ ಇದೇ ತ್ರಿಶೂಲ ಕಳಚಿ ಬಿದ್ದಿತ್ತು. ಆದರೆ ದೇವಾಲಯದ ಆಡಳಿತ ಮಂಡಳಿ ಈ ಬಗ್ಗೆ ಪರಿಶೀಲಿಸಲು ಸಿಸಿ ಕ್ಯಾಮರಾದಲ್ಲಿನ (CC Camera) ದೃಶ್ಯಾವಳಿಗಳನ್ನು ಗಮನಿಸಿದೆ. ಈ ವೇಳೆ ಕೋತಿಗಳು (Monkey) ತ್ರಿಶೂಲವನ್ನು ಬೀಳಿಸಿದ್ದು ಬೆಳಕಿಗೆ ಬಂದಿದೆ. ಕೋತಿ ಶಿಬಾರದ ಕಲ್ಲಿನ ಮೇಲೆ ಹತ್ತಿ ತ್ರಿಶೂಲ ಬಿಳಿಸಿದೆ. ಇಲ್ಲಿನ ಮೈಲಾರಲಿಂಗೇಶ್ವರನ ಕಾರ್ಣಿಕ ಈಡಿ ದೇಶ, ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇದೆ.
ಕಳೆದ ಬಾರಿ ಕೂಡಾ ತ್ರಿಶೂಲ ಬಿದ್ದಿತ್ತು. ಹಗ್ಗ ಅಡ್ಡ ಬಂದ ಕಾರಣ ತ್ರಿಶೂಲ ಬಿದ್ದಿತ್ತು. ಆದರೆ ಜನ ಬೇರೆ ಬೇರೆ ಕಲ್ಪಿಸಿದ್ದರು. ಇದೀಗ ಕೋತಿ ತ್ರಿಶೂಲ ಕೆಡವಿದೆ. ಸ್ಪಷ್ಟವಾಗಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಅಚಾನಕ್ ಆಗಿರೋ ಘಟನೆ. ಯಾವದೇ ಅಹಿತಕರ ಘಟನೆಗೆ ಮುನ್ಸೂಚನೆ ಅಲ್ಲ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪ ಒಡೆಯರ್ ಹೇಳಿದ್ದಾರೆ.
ಕಳೆದ ಬಾರಿ ಮೈಲಾರ ಲಿಂಗ ದೇವಸ್ಥಾನದಲ್ಲಿ ತ್ರಿಶೂಲ ಬಿದ್ದಾಗ ಅನೇಕರು ನಾನಾ ತರಹ ಮಾತನಾಡಿದ್ದರು. ಇದು ಅಪಾಯದ ಮುನ್ಸೂಚನೆ ಕಂಟಕ ಇದೆ ಎಂದರು. ಆದರೆ ಆ ಸಮಯದಲ್ಲಿ ತ್ರಿಶೂಲ ಬೀಳಲು ಕಾರಣ ಗೊತ್ತಾಗಿರಲಿಲ್ಲ. ಇದೀಗ ತ್ರಿಶೂಲ ಮತ್ತೆ ಬಿದ್ದಿದೆ. ಮತ್ತದೇ ತರಹದ ಮಾತುಗಳು ಕೇಳಿ ಬಂದವು. ಆದರೆ ಸಿಸಿ ಕ್ಯಾಮೆರಾದಲ್ಲಿ ಕೋತಿ ತ್ರಿಶೂಲ ಕೆಡವಿರುವ ದ್ರಶ್ಯ ಸಿಕ್ಕಿದೆ. ಆದರೂ ಭಕ್ತರು, ಸ್ಥಳೀಯರು ಅಪಾಯ ಇದೆ ಎಂದು ಆತಂಕಗೊಂಡಿದ್ದಾರೆ ಎಂದು ಭಕ್ತರಾದ ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ:
ವೈಕುಂಠ ಏಕಾದಶಿಯಂದು ದೇವಾಲಯಕ್ಕೆ 50 ಜನರ ಪ್ರವೇಶಕ್ಕೆ ಮಾತ್ರ ಅವಕಾಶ; ಕೊರೊನಾ ತಡೆಗೆ ಕಠಿಣ ಕ್ರಮ
Published On - 3:13 pm, Tue, 11 January 22