ಯುವ ಮತದಾರರಿಗಾಗಿ ನೂತನ ಮತಗಟ್ಟೆ: ಬಲೂನ್, ಚಿತ್ರಗಳಿಂದ ಮತಗಟ್ಟೆ ಅಲಂಕಾರ

| Updated By: ವಿವೇಕ ಬಿರಾದಾರ

Updated on: May 07, 2024 | 8:14 AM

ಲೋಕಸಭೆ ಚುನಾವಣೆಗೆ ರಾಜ್ಯದ ಎರಡನೇ ಹಂತದ ಮತದಾನ ಇಂದು (ಮೇ 7) ಆರಂಭವಾಗಿದೆ. ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಯುವ ಮತದಾರರಿಗಾಗಿ ನೂತನ ಮತಗಟ್ಟೆ: ಬಲೂನ್, ಚಿತ್ರಗಳಿಂದ ಮತಗಟ್ಟೆ ಅಲಂಕಾರ
ಕೊಪ್ಪಳ ಯುವ ಮತಗಟ್ಟೆ
Follow us on

ಕೊಪ್ಪಳ, ಮೇ 07: ಪ್ರಜಾಪ್ರಭುತ್ವದ ಹಬ್ಬ ಚುನಾವಣೆ (Election). ಲೋಕಸಭೆ ಚುನಾವಣೆಗೆ (Lok Sabha Election) ಇಂದು (ಮೇ 07) ರಾಜ್ಯದ ಎರಡನೇ ಹಂತದ ಮತದಾನ ನಡೆಯುತ್ತಿದೆ. ಕೊಪ್ಪಳ (Koppal) ಜಿಲ್ಲೆಯಲ್ಲೂ ಕೂಡ ಅದ್ದೂರಿಯಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಯುವ ಮತದಾರರನ್ನು ಮತಗಟ್ಟೆಗೆ ಸೆಳೆಯಲು ವಿನೂತನ ಪ್ರಯತ್ನವನ್ನು ಕೊಪ್ಪಳ ಜಿಲ್ಲಾಡಳಿತ ಮಾಡಿಕೊಂಡಿದೆ. ಇಡೀ ಮತಗಟ್ಟೆಯನ್ನು ಅನೇಕ ಚಿತ್ರಗಳಿಂದ, ಬಲೂನ್​ಗಳಿಂದ ಅಲಂಕಾರ ಮಾಡಲಾಗಿದೆ.

ಎಲ್ಲರನ್ನು ಆಕರ್ಷಿಸುತ್ತಿರುವ ಯುವ ಮತಗಟ್ಟೆ

ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿರುವ ಗ್ರಾಮ ಪಂಚಾಯತ್ ಕಚೇರಿಯನ್ನು ಯುವ ಮತಗಟ್ಟೆಯನ್ನಾಗಿ ಮಾಡಲಾಗಿದ್ದು, ಇಡೀ ಮತಗಟ್ಟೆಯನ್ನು ಅಲಂಕಾರ ಮಾಡಲಾಗಿದೆ. ಮತಗಟ್ಟೆ ಹೊರಗಡೆ ದೊಡ್ಡ ಕಟೌಟ್ ಹಾಕಲಾಗಿದ್ದು, ನಮ್ಮ ಮತ ನಮ್ಮ ಹಕ್ಕು, ನಮ್ಮ ನಡೆ ಮತಗಟ್ಟೆ ಕಡೆ, ಚುನಾವಣೆ ಪರ್ವ ದೇಶದ ಗರ್ವ ಅನ್ನೋ ಬರಹಗಳನ್ನು ಬರೆಸಲಾಗಿದೆ. ಇನ್ನು ಕಟ್ಟಡದ ಒಳ ಹೋಗುತ್ತಿದ್ದಂತೆ ಬಲೂನ್​ಗಳಿಂದ ಅಲಂಕಾರ ಮಾಡಲಾಗಿದೆ. ಇಡೀ ಕಟ್ಟಡವನ್ನು ಅನೇಕ ಚಿತ್ರಗಳಿಂದ ಅಲಂಕಾರ ಮಾಡಲಾಗಿದೆ.

ಇದನ್ನೂ ಓದಿ: ಬಾಗಲಕೋಟೆ ಲೋಕಸಭೆ ಚುನಾವಣೆ: ಕಾಂಗ್ರೆಸ್-ಬಿಜೆಪಿಯ ಪ್ಲಸ್, ಮೈನಸ್ ಏನು?

ಕೊಪ್ಪಳದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಯುವಕರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಒಂದೊಂದು ಯುವ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಯುವ ಮತದಾರರನ್ನು ಸೆಳೆಯುವ ಉದ್ದೇಶದಿಂದ ಇಡೀ ಮತಗಟ್ಟೆಯನ್ನು ಅಲಂಕಾರ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಲೋಕಸಭಾ ಚುನಾವಣೆಯ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ