ಕುಟುಂಬಕ್ಕೆ ಸಂಕಷ್ಟ ತಂದಿಟ್ಟ ವೈರಲ್ ವಿಡಿಯೋ: ಕೊಪ್ಪಳ ಗವಿಮಠ ಜಾತ್ರೆಯಲ್ಲಿ ಅವಳಲ್ಲ ಅವನಾದ ಕಥೆ
ಅಲೆಮಾರಿ ಕುಟುಂಬವೊಂದು ಜಾತ್ರೆ ಜಾತ್ರೆ ಅಲೆದಾಡಿ ಸಾಹಸ ಪ್ರದರ್ಶನಗಳನ್ನ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು.ಸಾಹಸ ಪ್ರದರ್ಶನಕ್ಕೆ ಆ ಕುಟುಂಬ ಪುಟ್ಟ ಬಾಲಕಿಯನ್ನ ಬಳಕೆ ಮಾಡಿಕೊಳ್ಳುತ್ತಿತ್ತು.10 ವರ್ಷದ ಪುಟ್ಟ ಬಾಲಕಿಯನ್ನ ಬಳಕೆ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು.ಆ ಪುಟ್ಟ ಬಾಲಕಿಯ ಸಾಹಸ ದೃಶ್ಯಗಳನ್ನ ನೋಡಿ ಅದೆಷ್ಟೋ ಜನ ಬೆರಗಾಗಿದ್ರು.ಸಾಮಾಜಿಕ ಜಾಲತಾಣದಲ್ಲಿ ಆ ಪುಟ್ಟ ಬಾಲಕಿ ವಿಡಿಯೋಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಇದೀಗ ಆ ವಿಡಿಯೋ ಆ ಬಾಲಕಿ ಹಾಗೂ ಕುಟುಂಬಕ್ಕೆ ಸಂಕಷ್ಟ ತಂದಿಟ್ಟಿದೆ.ಆ ವಿಡಿಯೋ ವೈರಲ್ ಬಳಿಕ ವಿಡಿಯೋದಲ್ಲಿರೋದು ಅವಳಲ್ಲ,ಅವನು ಎನ್ನುವ ಸತ್ಯ ಬಯಲಾಗಿದೆ.ಅರೇ ಇದೇನಿದು ಅವಳಲ್ಲ ಅವನಾದ ಕಥೆ ಅಂತೀರಾ ಈ ಸ್ಟೋರಿ ಓದಿ.

ಕೊಪ್ಪಳ, (ಜನವರಿ 13): ಜೀವ ಪಣಕ್ಕಿಟ್ಟು ಸಾಹಸ ಪ್ರದರ್ಶನಗಳನ್ನ ಮಾಡುವ ಮಗುವಿನ ವಿಡಿಯೋ ವೈರಲ್ ಆಗಿದ್ದು, ಇದೀಗ ಅದೇ ವೈರಲ್ ವಿಡಿಯೋ ಕುಟುಂಬಕ್ಕೆ ಸಂಕಷ್ಟ ತಂದಿಟ್ಟಿದೆ. ಕಳೆದ ಕೆಲ ದಿನಗಳ ಹಿಂದೆ ಮದ್ಯಪ್ರದೇಶದಿಂದ ಬಂದ ಅಲೆಮಾರಿ ಕುಟುಂಬವೊಂದು ಹೊಟ್ಟೆ ಪಾಡಿಗಾಗಿ ಕೊಪ್ಪಳದ ಗವಿ ಮಠದ ಜಾತ್ರೆಯಲ್ಲಿ (Koppal GaviMath Fair) ಸಾಹಸ ದೃಶ್ಯಗಳನ್ನ ಪ್ರದರ್ಶನ ಮಾಡತಿತ್ತು,ಸಾಹಸ ಪ್ರದರ್ಶನಕ್ಕೆ ಪುಟ್ಟ ಬಾಲಕಿಯನ್ನ ಬಳಕೆ ಮಾಡಿಕೊಂಡಿದ್ದರು. ಆ ಬಾಲಕಿ ಮಾಡೋ ಸಾಹಸ ಪ್ರದರ್ಶನ ವೈರಲ್ ಆಗಿತ್ತು.ಬಾಲ ಕಾರ್ಮಿಕ ಕಾಯ್ದೆಯಡಿ 14 ವರ್ಷದ ಮಕ್ಕಳನ್ನು ಯಾವ ಕೆಲಸಕ್ಕೆ ಬಳಕೆ ಮಾಡುವಂತಿಲ್ಲ. ಆದ್ರೆ, ವಿಡಿಯೋ ವೈರಲ್ ಆಗುತ್ತಲೇ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಆ ಬಾಲಕಿಯನ್ನ ರಕ್ಷಣೆ ಮಾಡಿದ್ದಾರೆ.ಆದ್ರೆ ಇಡೀ ಕಥೆಗೆ ಟ್ವಿಸ್ಟ್ ಸಿಕ್ಕಿದ್ದು ಇಲ್ಲೆ.ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಣೆ ಮಾಡಿದ ಬಾಲಕಿ ಬಾಲಕಿ ಅಲ್ಲ,ಬದಲಾಗಿ ಆಕೆ ಬಾಲಕ.
ಅವಳಲ್ಲ ಅವನು: ಅಧಿಕಾರಿಗಳು ಶಾಕ್
ಪೋಷಕರು ಜನರನ್ನು ಸೆಳೆಯೋ ದೃಷ್ಟಿಯಿಂದ ಬಾಲಕನಿಗೆ ಹೆಣ್ಣಿನ ವೇಷಭೂಷಣ ಹಾಕಿದ್ರಂತೆ. ಖುದ್ದು ಪೋಷಕರೇ ಆ ಮಾತನ್ನ ಅಧಿಕಾರಿಗಳ ಮುಂದೆ ಹೇಳಿದ್ದಾರ. ಅಧಿಕಾರಿಗಳು ಸಹ ಮೊದಲು ಆ ಮಗುವನ್ನ ಬಾಲಕಿಯರ ಬಾಲ ಮಂದಿರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಫಾರಂ ನಂಬರ್ 17 ತುಂಬುವಾಗ ಪೋಷಕರು ಅಸಲಿ ಸತ್ಯ ಬಾಯಿ ಬಿಟ್ಟಿದ್ದಾರೆ.ಒಂದು ಕ್ಷಣ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳೇ ಗಾಬರಿಯಾಗಿದ್ದಾರೆ.ಬಳಿಕ ಬಾಲಕಿಯರ ಬಾಲ ಮಂದಿರದಿಂದ ಬಾಲಕರ ಬಾಲ ಮಂದಿರಕ್ಕೆ ಶಿಫ್ಟ್ ಮಾಡಿದ್ದಾರೆ.
ಇದನ್ನೂ ನೋಡಿ: ಕೊಪ್ಪಳ: ಬಸ್ಸಿಗಾಗಿ ನೂಕುನುಗ್ಗಲು, ಶಕ್ತಿ ಯೋಜನೆ ಎಫೆಕ್ಟ್ಗೆ ಮಹಿಳೆಯರು ಸುಸ್ತೋ ಸುಸ್ತು
ಹೆಣ್ಣಿನ ವೇಷಭೂಷಣ ಹಾಕಿ ಸಾಹಸ ಪ್ರದರ್ಶನ
ಜನರನ್ನು ತಮ್ಮತ್ತ ಸೆಳೆದ ನಾಲ್ಕು ರೂಪಾಯಿ ಹಣ ಮಾಡಬೇಕು ಎನ್ನುವುದು ಅಲೆಮಾರಿ ಕುಟುಂಬದ ಕಾಯಕ. ಅದೇ ರೀತಿ ಕೊಪ್ಪಳದ ಗವಿ ಮಠದ ಜಾತ್ರೆಯಲ್ಲೂ ಹತ್ತು ವರ್ಷದ ಬಾಲಕನಿಗೆ ಹೆಣ್ಣಿನ ವೇಷಭೂಷಣ ಹಾಕಿ ಸಾಹಸ ಪ್ರದರ್ಶನ ಮಾಡತಿದ್ರು,ಆದ್ರೆ ಯಾವಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತೋ,ಆಗ ಆ ಅಲೆಮಾರಿ ಕುಟುಂಬಕ್ಕೆ ಸಂಕಷ್ಟ ಎದುರಾಯ್ತು.
ಬಾಲಕನ ರಕ್ಷಣೆ
ಸದ್ಯ ಮಕ್ಕಳ ರಕ್ಷಣಾ ಘಟಕದ ಆಧಿಕಾರಿಗಳು ಹತ್ತು ವರ್ಷದ ಮಗುವನ್ನ ರಕ್ಷಣೆ ಮಾಡಿದ್ದಾರೆ.ಮಕ್ಕಳ ಭವಿಷ್ಯ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಯಾರೂ ಕೂಡಾ ಮಕ್ಕಳನ್ನ ವಾಣಿಜ್ಯ ಚಟುವಟಿಕೆಗೆ ಬಳಕೆ ಮಾಡಿಕೊಳ್ಳಲು ಅವಕಾಶ ವಿಲ್ಲ. ಅಲ್ಲದೇ ಸಂವಿಧಾನದ ಕಲಂ 1 ಎ ಪ್ರಕಾರ 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿರೋದು ಸರ್ಕಾರದ ಕೆಲಸ. ಹೀಗಾಗಿ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಮಗುವನ್ನ ರಕ್ಷಣೆ ಮಾಡಿದ್ದು, ಇದೀಗ ಆ ಮಗುವನ್ನ ಮೂಲ ಸ್ಥಳಕ್ಕೆ ಕಳಿಸುವುದಾಗಿ ಹೇಳುತ್ತಿದ್ದಾರೆ.
ಒಟ್ಟಾರೆ ಹೊಟ್ಟೆಪಾಡಿಗಾಗಿ ಕೊಪ್ಪಳಕ್ಕೆ ಬಂದ ಅಲೆಮಾರಿ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.ಸಾಮಾಜಿಕ ಜಾಲತಾಣದಿಂದ ಆ ಕುಟುಂಬ ಇದೀಗ ಮಗುವನ್ನ ಬಿಟ್ಟಿರಬೇಕಾಯ್ತು,ಅಧಿಕಾರಿಗಳು ಕೂಡಾ ತಮ್ಮ ಕೆಲಸ ಮಾಡಿದ್ದಾರೆ.ಆದ್ರೆ ಒಂದು ವಿಡಿಯೋ ಏನೆಲ್ಲಾ ಸಮಸ್ಯೆ ಉಂಟು ಮಾಡತ್ತೆ ಎನ್ನುವುದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.