ಈಡಿಗ ಸಮಾಜವನ್ನು STಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಪ್ರಣವಾನಂದಶ್ರೀ ಉಪವಾಸ ಸತ್ಯಾಗ್ರಹ

| Updated By: ಆಯೇಷಾ ಬಾನು

Updated on: Dec 10, 2023 | 12:42 PM

ಸತ್ಯಾಗ್ರಹದ ವೇಳೆ ಮಾತನಾಡಿದ ಬ್ರಹ್ಮಶ್ರೀ ನಾರಾಯಣ ಗುರು ಪೀಠದ ಪ್ರಣವಾನಂದಶ್ರೀ, ಬಿ.ಕೆ.ಹರಿಪ್ರಸಾದ್​ರನ್ನು​​​ ಮೂಲೆಗುಂಪು ಮಾಡಲಾಗುತ್ತಿದೆ. ಹಿಂದುಳಿದ ವರ್ಗದ ನಾಯಕನಾಗಿ ಬೆಳೆಯದಂತೆ ಮೂಲೆಗುಂಪು ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ, ಸಚಿವ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಈಡಿಗ ಸಮಾಜವನ್ನು STಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಪ್ರಣವಾನಂದಶ್ರೀ ಉಪವಾಸ ಸತ್ಯಾಗ್ರಹ
ಪ್ರಣವಾನಂದಶ್ರೀ ಉಪವಾಸ ಸತ್ಯಾಗ್ರಹ
Follow us on

ಕೊಪ್ಪಳ, ಡಿ.10: ಬೆಂಗಳೂರಿನಲ್ಲಿ ಈಡಿಗ ಸಮಾವೇಶವನ್ನು ಆಯೋಜಿಸಲಾಗಿದೆ. ಆದರೆ ಸ್ವತಃ ಈಡಿಗರೇ ಆಗಿರುವ ಪರಿಷತ್ ಸದಸ್ಯ ಹರಿಪ್ರಸಾದ್ (BK Hariprasad) ಅವರು ಇದರ ವಿರುದ್ಧ ತಿರುಗಿಬಿದ್ದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಇದು ರಾಜಕೀಯ ಪ್ರೇರಿತ ಮತ್ತು ರಾಜಕೀಯ ಕುತಂತ್ರದಿಂದ ಸಮಾವೇಶ ಆಯೋಜಿಸಲಾಗಿದೆ ಎಂದು ಗುಡುಗಿದ್ದಾರೆ. ಇದರ ನಡುವೆ ಮತ್ತೊಂದೆಡೆ ಈ ಸಮಾವೇಶಕ್ಕೆ ಪರ್ಯಾಯವಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಕೃಷ್ಣದೇವರಾಯ ವೃತ್ತದಲ್ಲಿ ಆರ್ಯ ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿಗಳು (Pranavananda Swamiji) ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಪ್ರಣವಾನಂದಶ್ರೀ ಕೈಗೊಂಡ ಉಪವಾಸ ಸತ್ಯಾಗ್ರಹದಲ್ಲಿ ಈಡಿಗ ಸಮುದಾಯದ ಅನೇಕ ಮುಖಂಡರು ಭಾಗಿಯಾಗಿದ್ದಾರೆ. ಈಡಿಗ ಸಮಾಜವನ್ನು STಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಆರ್ಯ ಈಡಿಗ ನಿಗಮಕ್ಕೆ ಘೋಷಿಸಿದ್ದ ಅನುದಾನ ಬಿಡುಗಡೆ ಮಾಡಬೇಕು. ಹಿಂದಿನ ಸರ್ಕಾರ ಘೋಷಿಸಿದ್ದ 500 ಕೋಟಿ ಹಣ ಬಿಡುಗಡೆ ಮಾಡಬೇಕು. ತ್ವರಿತಗತಿಯಲ್ಲಿ ಕುಲಶಾಸ್ತ್ರ ಅಧ್ಯಯನ ಮುಗಿಸಬೇಕೆಂದು ಪ್ರಣವಾನಂದಶ್ರೀ ಆಗ್ರಹಿಸಿದ್ದಾರೆ.

ಬಿ.ಕೆ.ಹರಿಪ್ರಸಾದ್​ರನ್ನು​​​ ಮೂಲೆಗುಂಪು ಮಾಡಲಾಗುತ್ತಿದೆ

ಇನ್ನು ಸತ್ಯಾಗ್ರಹದ ವೇಳೆ ಮಾತನಾಡಿದ ಬ್ರಹ್ಮಶ್ರೀ ನಾರಾಯಣ ಗುರು ಪೀಠದ ಪ್ರಣವಾನಂದಶ್ರೀ, ಬಿ.ಕೆ.ಹರಿಪ್ರಸಾದ್​ರನ್ನು​​​ ಮೂಲೆಗುಂಪು ಮಾಡಲಾಗುತ್ತಿದೆ. ಹಿಂದುಳಿದ ವರ್ಗದ ನಾಯಕನಾಗಿ ಬೆಳೆಯದಂತೆ ಮೂಲೆಗುಂಪು ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ, ಸಚಿವ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಉದ್ದೇಶಪೂರ್ವಕವಾಗಿ ಹರಿಪ್ರಸಾದ್​ರನ್ನು ಸಮಾವೇಶದಿಂದ ದೂರವಿಡಲಾಗಿದೆ. ಮಧು ಬಂಗಾರಪ್ಪ ಬಳಸಿಕೊಂಡು ಈಡಿಗ ಸಮಾಜ ಒಡೆಯಲು ಸಿಎಂ ಯತ್ನ ಮಾಡ್ತಿದ್ದಾರೆ. ಮಧು ಮೊದಲು ಸೋದರ ಕುಮಾರ್​​​​​ರನ್ನು ವೇದಿಕೆಗೆ ಕರೆದುಕೊಂಡು ಬರಲಿ ಎಂದರು.

ಇದನ್ನೂ ಓದಿ: ಈಡಿಗ ಸಮಾವೇಶ: ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಭುಸುಗುಟ್ಟಿದ ಬಿಕೆ ಹರಿಪ್ರಸಾದ್

ಸಿಎಂ ಈಡಿಗ ಸಮುದಾಯ ಒಡೆಯಲು ಷಡ್ಯಂತ್ರ ಮಾಡಿದ್ದಾರೆ

ಸಿಎಂ ಸಿದ್ದರಾಮಯ್ಯನವರು ಈಡಿಗ ಸಮುದಾಯವನ್ನೆ ಒಡೆಯಬೇಕು ಎಂದು ಷಡ್ಯಂತ್ರ ಮಾಡಿದ್ದಾರೆ. ಅದರ ಭಾಗವಾಗಿ ಮಧುಬಂಗಾರಪ್ಪನ್ನು ಮುಂದೆ ಬಿಟ್ಟಿದ್ದಾರೆ. ಈಡಿಗ ಸಮಯದಾಯವನ್ನು ಒಡೆಯುವ ಸಲುವಾಗಿ ಬೆಂಗಳೂರಿನಲ್ಲಿ ಸಮಾವೇಶ ಮಾಡ್ತಿದ್ದಾರೆ. ಬಿ.ಕೆ. ಹರಿಪ್ರಸಾದ್ ರನ್ನು ಮೂಲೆಗುಂಪು ಮಾಡಲು ಮಧು ಬಂಗಾರಪ್ಪ ಮೂಲಕ ಬೆಂಗಳೂರಿನಲ್ಲಿ ಸಮಾವೇಶ ಮಾಡ್ತಿದ್ದಾರೆ. ಬೆಂಗಳೂರಿನ ಸಮಾವೇಶಕ್ಕೆ ಬಹಳಷ್ಟು ಈಡಿಗ ಸಮುದಾಯದವರು ಸ್ಪಂದಿಸುತ್ತಿಲ್ಲ. ಮನೆ ಒಡೆದ ಮಧುಬಂಗಾರಪ್ಪನವರಿಗೆ ಸಮಾಜ ಒಡೆಯುವುದು ದೊಡ್ಡದಲ್ಲ. ಲಿಂಗಾಯತ ಸಮಾಜ ಒಡೆದ ಸಿದ್ದರಾಮಯ್ಯ, ಈಡಿಗ ಸಮುದಾಯ ಒಡೆಯುತ್ತಿದ್ದಾರೆ. ಬಿ‌.ಕೆ ಹರಿಪ್ರಸಾದ್​ ಅವರನ್ನು ಮೂಲೆಗುಂಪು ಮಾಡಲು ಮಧುಬಂಗಾರಪ್ಪ, ಸಿಎಂ ಸಿದ್ದರಾಮಯ್ಯ ಈಡಿಗ ಸಮಾಜವನ್ನು ಒಡೆಯುತ್ತಿದ್ದಾರೆ. ಬೆಂಗಳೂರಿನ ಸಮಾವೇಶಕ್ಕೆ ಸರ್ಕಾರ ನೆರವು ನೀಡ್ತಿದೆ. ಇನ್ನೂ ಈಡಿಗ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಸೇರಿ ಹಲವಾರು ಬೇಡಿಕೆ ಸರ್ಕಾರ ಈಡೇರಿಸಬೇಕು ಎಂದರು.

ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:42 pm, Sun, 10 December 23