ಯಾದಗಿರಿ, ಆ.04: ಪಿಎಸ್ಐ ಪರಶುರಾಮ(PSI Parasurama) ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್(Channareddy Patil) ಮೇಲೆ ಪರಶುರಾಮ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚೆನ್ನಾರೆಡ್ಡಿ ಶಾಸಕತ್ವ ಸ್ಥಾನದಿಂದ ವಜಾ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಎಂಬುವವರು ಸ್ಪೀಕರ್ ಯುಟಿ ಖಾದರ್ಗೆ ಪತ್ರ ಬರೆದಿದ್ದಾರೆ.
ಪರಶುರಾಮ ಸಾವಿನ ಆರೋಪ ಶಾಸಕರ ಮೇಲೆ ಇದ್ದು, ಸೂಕ್ತ ತನಿಖೆ ಆಗಬೇಕು, ತಪ್ಪಿತಸ್ಥರು ಯಾರೇ ಆದರೂ ಶಿಕ್ಷೆ ಆಗಬೇಕು. ಹೀಗಾಗಿ ಸೂಕ್ತ ಹಾಗೂ ನ್ಯಾಯಬದ್ಧ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ. ಜೊತೆಗೆ ಶಾಸಕರು ಹಾಗೂ ಪುತ್ರನ ಮೇಲೆ ಕಮೀಷನ್ ಆರೋಪಿವಿದೆ. ಉದ್ಯೋಗ ಖಾತ್ರಿ ಬಿಲ್ ಮಾಡಲು ವಡಗೇರ ತಾಲೂಕಿನಲ್ಲಿ ಕಮೀಷನ್ ಪಡೆಯುತ್ತಿದ್ದಾರೆ. ಹೀಗಾಗಿ ಸೂಕ್ತ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಯಾದಗಿರಿ ಪಿಎಸ್ಐ ಸಾವು ಪ್ರಕರಣ: ಕಡುಬಡತನದಲ್ಲಿ ಬೆಳೆದು ಒಂದಲ್ಲಾ ಎಂಟು ಸರ್ಕಾರಿ ಕೆಲಸಕ್ಕೆ ಆಯ್ಕೆಯಾಗಿದ್ದ ಪರಶುರಾಮ!
ಇನ್ನು ಈ ಕುರಿತು ಮಾತನಾಡಿದ ಮೃತ ಪರಶುರಾಮ ತಂದೆ ಜನಕಮುನಿ, ‘ನನ್ನ ಮಗನ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು. ಹಾಗೇ ನನ್ನ ಸೊಸೆಗೆ ಬದುಕಲು ದಾರಿ ಮಾಡಿಕೊಡಬೇಕು ಎಂದು ಕೇಳಿಕೊಂಡರು. ಇನ್ನು ಶುಕ್ರವಾರ ಮಧ್ಯಾಹ್ನ ನಾವಿಬ್ಬರು ಮನೆಯಲ್ಲಿ ಅಡುಗೆ ಮಾಡಿದ್ದೆವು. ಮಗ ಪರಶುರಾಮ ಕೂಡ ತಿಂದು ರೂಂಗೆ ಹೋಗಿ ಮಲಗಿದ್ದ. ಆದ್ರೆ, 8 ಗಂಟೆ ಸಮಯದಲ್ಲಿ ಎಬ್ಬಿಸಲು ಹೋದಾಗ ಏಳಲಿಲ್ಲ. ಪರಶುರಾಮ್ ಮಲಗಿದ್ದ ಬೆಡ್ ಮೇಲೆ ಸ್ವಲ್ಪ ರಕ್ತ ಬಿದ್ದಿತ್ತು. ಕೂಡಲೇ ಮಗನನ್ನು ಆಸ್ಪತ್ರೆ ಕರೆದುಕೊಂಡು ಹೋಗಿದ್ದೇವು. ಆದರೆ, ಮಗ ಪರಶುರಾಮ ಬದುಕಲಿಲ್ಲ. ಆತ ತನ್ನ ನೋವನ್ನು ಪತ್ನಿ, ತಾಯಿ ಜೊತೆ ಹಂಚಿಕೊಳ್ಳುತ್ತಿದ್ದ ಎಂದು ಕಣ್ಣಿರು ಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ