Raghavendra Hitnal: ‘ಈಗಿನ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ’; ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿಕೆ
ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದರೊಂದಿಗೆ ಬಿಜೆಪಿ ಆಡಳಿತವನ್ನೂ ಅವರು ಕುಟುಕಿದ್ದಾರೆ.
ಕೊಪ್ಪಳ: ಈಗಿನ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿಕೆ ನೀಡಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿರುವ ಅವರು ಆರ್ಥಿಕ ವ್ಯವಸ್ಥೆಯನ್ನು ಸರಳೀಕರಣ ಮಾಡಬೇಕು. ಅದಕ್ಕೆ ಶಕ್ತಿ ಇರುವುದು ಸಿದ್ದರಾಮಯ್ಯನವರಿಗೆ ಮಾತ್ರ ಎಂದು ನುಡಿದಿದ್ದಾರೆ. ಸಿದ್ದರಾಮಯ್ಯನವರು ಜನಪರ ಯೋಜನೆಗಳನ್ನ ಜಾರಿಗೆ ತಂದಿದ್ದರು. ಹಲವು ಯೋಜನೆಗಳು ಇನ್ನೂ ಜನರ ಮನಸ್ಸಿನಲ್ಲಿವೆ. ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಇರಬೇಕು ಹಾಗೂ ಮತ್ತೊಮ್ಮೆ ಸಿಎಂ ಆಗಬೇಕು ಎಂದು ಹಿಟ್ನಾಳ್ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇದೇ ವೇಳೆ ಅವರು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಕೊವಿಡ್ನಿಂದ ನಿಧನರಾದವರಿಗೆ ಪರಿಹಾರ ಕೊಡುತ್ತೇವೆ ಎಂದಿದ್ದರು. ಆದರೆ ಏನನ್ನೂ ನೀಡಿಲ್ಲ. ರಾಜ್ಯದಲ್ಲಿ ಬಿಜೆಪಿ ದುರಾಡಳಿತ ಹೆಚ್ಚಾಗಿದೆ. ಬೆಲೆ ಏರಿಕೆಯಿಂದ ಬಡ ಜನರಿಗೆ ಹಲವು ಸಮಸ್ಯೆಯಾಗಿದೆ. ಎಂದು ಅವರು ಕಿಡಿಕಾರಿದ್ಧಾರೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯನವರು ರಾಜ್ಯ ರಾಜಕಾರಣದ ನೇತೃತ್ವ ವಹಿಸಬೇಕು ಎನ್ನುವುದು ಜನರ ಕೂಗಾಗಿದೆ ಎಂದು ಅವರು ನುಡಿದಿದ್ದಾರೆ.
ಇದನ್ನೂ ಓದಿ:
Russian Plane Crash: ರಷ್ಯಾದಲ್ಲಿ 23 ಪ್ರಯಾಣಿಕರಿದ್ದ ವಿಮಾನ ಅಪಘಾತ; 16 ಮಂದಿ ಸಾವು, 7 ಜನರ ರಕ್ಷಣೆ
ಬಿಗ್ ಬಾಸ್ನಲ್ಲಿ ರಾಜ್ ಕುಂದ್ರಾ ಬಗ್ಗೆ ಜೋಕ್ ಮಾಡಿದ ಸಲ್ಮಾನ್; ಮುಜುಗರಕ್ಕೊಳಗಾದ ಶಮಿತಾ ಶೆಟ್ಟಿ
Published On - 3:15 pm, Sun, 10 October 21