ಕೊಪ್ಪಳದಲ್ಲಿ ವಿವಾದಕ್ಕೆ ಕಾರಣವಾದ ಬೀದಿದೀಪಗಳು; ಕಂಬಗಳ ಮೇಲೆ ಗದೆ, ಬಿಲ್ಲುಬಾಣ, ತಿಮ್ಮಪ್ಪನ ನಾಮದ ಚಿತ್ರ

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಅಳವಡಿಸಲಾಗಿರುವ ಬೀದಿ ದೀಪದ ಕಂಬಗಳ (Street Lights) ಮೇಲೆ ಗದೆ, ಬಿಲ್ಲುಬಾಣ, ತಿರುಪತಿ ತಿಮ್ಮಪ್ಪನ ನಾಮದ ಚಿತ್ರಗಳಿವೆ. ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಎಸ್​ಡಿ‌ಪಿಐ ವಿದ್ಯುತ್ ಕಂಬಗಳ ತೆರವಿಗೆ ಆಗ್ರಹಿಸಿದೆ. ಕಂಬಗಳ ಅಳವಡಿಕೆಗೆ KRIDL ಏಜೆನ್ಸಿಗೆ KKRDB ಗುತ್ತಿಗೆ ನೀಡಿತ್ತು.

ಕೊಪ್ಪಳದಲ್ಲಿ ವಿವಾದಕ್ಕೆ ಕಾರಣವಾದ ಬೀದಿದೀಪಗಳು; ಕಂಬಗಳ ಮೇಲೆ ಗದೆ, ಬಿಲ್ಲುಬಾಣ, ತಿಮ್ಮಪ್ಪನ ನಾಮದ ಚಿತ್ರ
ಕೊಪ್ಪಳದಲ್ಲಿ ವಿವಾದಕ್ಕೆ ಕಾರಣವಾದ ಬೀದಿದೀಪಗಳು
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಆಯೇಷಾ ಬಾನು

Updated on: Aug 24, 2024 | 8:19 AM

ಕೊಪ್ಪಳ, ಆಗಸ್ಟ್​.24: ಕೊಪ್ಪಳ (Koppal) ಜಿಲ್ಲೆಯಲ್ಲಿ ಬೀದಿದೀಪ ಕಂಬಗಳ ಅಳವಡಿಕೆ ವಿವಾದದ ಸ್ವರೂಪ ಪಡೆದಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಅಳವಡಿಸಲಾಗಿರುವ ಬೀದಿ ದೀಪದ ಕಂಬಗಳ (Street Lights) ಮೇಲೆ ಗದೆ, ಬಿಲ್ಲುಬಾಣ, ತಿರುಪತಿ ತಿಮ್ಮಪ್ಪನ ನಾಮದ ಚಿತ್ರಗಳಿವೆ. ಒಂದೇ ಸಮುದಾಯದ ದೇವರ ಚಿತ್ರಗಳ ಅಳವಡಿಕೆಗೆ ವಿರೋಧ ವ್ಯಕ್ತವಾಗಿದ್ದು ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಎಸ್​ಡಿ‌ಪಿಐ ವಿದ್ಯುತ್ ಕಂಬಗಳ ತೆರವಿಗೆ ಆಗ್ರಹಿಸಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ನಾಲ್ಕೈದು ದಿನಗಳ ಹಿಂದೆ ಪಟ್ಟಣದ ಜುಲೈ ನಗರ ಕ್ರಾಸ್ ನಿಂದ ಸಿಬಿಎಸ್ ಸರ್ಕಲ್ ವರೆಗೆ ರಸ್ತೆಯ ಮಧ್ಯಭಾಗದಲ್ಲಿ ಕಂಬಗಳನ್ನು ಅಳವಡಿಸಲಾಗಿತ್ತು. ಕೆಕೆಆರ್​ಡಿಬಿ ಅನುದಾನದಲ್ಲಿ ಕಂಬಗಳನ್ನು ಹಾಕಲಾಗಿತ್ತು. ಆದರೆ ಕಂಬಗಳ ಮೇಲೆ ಗದೆ, ಬಿಲ್ಲುಬಾಣ, ತಿರುಪತಿ ತಿಮ್ಮಪ್ಪನ ನಾಮದ ಚಿತ್ರಗಳಿದ್ದು ವಿದ್ಯುತ್ ಕಂಬಗಳ ತೆರವು ಮಾಡಲು SDPI ಮುಖಂಡರು ಆಗ್ರಹಿಸಿದ್ದಾರೆ.

ಕಂಬಗಳ ಅಳವಡಿಕೆಗೆ KRIDL ಏಜೆನ್ಸಿಗೆ KKRDB ಗುತ್ತಿಗೆ ನೀಡಿತ್ತು. ಕೂಡಲೇ ವಿದ್ಯುತ್ ಕಂಬ ತೆರವು ಮಾಡುವಂತೆ ಎಸ್‌ಡಿಪಿಐ ಆಗ್ರಹಿಸಿದೆ. ಈ ಬಗ್ಗೆ ಗಂಗಾವತಿ ನಗರಸಭೆ ಆಯುಕ್ತರಿಗೆ ಎಸ್​ಡಿಪಿಐ ಮನವಿ‌ ಸಲ್ಲಿಸಿದೆ. ಆದರೆ ಯಾವುದೇ ಸಮಸ್ಯೆ ಇಲ್ಲ, ತೆರವುಗೊಳಿಸಬಾರದು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ರಾಮನ ಭಂಟ‌ ಹನುಮನ ಜನ್ಮಸ್ಥಳ ಇರೋದು ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ. ಧಾರ್ಮಿಕ ಸ್ಥಳಗಳಲ್ಲಿ ಈ ರೀತಿಯ ಚಿತ್ರಗಳು ಸಾಮಾನ್ಯ. ಯಾವುದೇ ಕಾರಣಕ್ಕೂ ತೆರವು ಮಾಡಬಾರದು ಎಂದು ಹಿಂದೂ ಸಂಘಟನೆಗಳ ಮುಖಂಡರು ನಗರಸಭೆಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚಾಲಕನ ನಿರ್ಲಕ್ಷ್ಯ: ಚಿಕ್ಕಬಾಣಾವರ-ಹೆಸರಘಟ್ಟ ಮುಖ್ಯರಸ್ತೆಯಲ್ಲಿ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ

ಬಿಸಿಯೂಟ ಸೇವಿಸಿದ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬೀಜಕಲ್ ಗ್ರಾಮದಲ್ಲಿ ಬಿಸಿಯೂಟ ಸೇವಿಸಿದ್ದ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ ರಾಗಿದ್ದಾರೆ. ಮಧ್ಯಾಹ್ನ ಬಿಯೂಟ ಸೇವಿಸಿದ್ದ ಮಕ್ಕಳಿಗೆ ಸಂಜೆ 4 ಗಂಟೆ ನಂತರ ವಾಂತಿ ಭೇದಿ ಕಾಣಿಸಿಕೊಂಡಿದೆ. ಅಸ್ವಸ್ಥ ಮಕ್ಕಳಿಗೆ ದೋಟಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ