ಕೊಪ್ಪಳ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (Vijayanagar Srikrishna Devaraya University) ಪರೀಕ್ಷೆಯಲ್ಲಿ ಎಡವಟ್ಟು ಮಾಡಿದೆ. ವಿಶ್ವವಿದ್ಯಾಲಯವು ಪ್ರಶ್ನೆ ಪತ್ರಿಕೆಯನ್ನೇ ಅದಲು ಬದಲು ಮಾಡಿ, ಪರೀಕ್ಷೆ ನಡೆಸಿದ್ದು, ಕೊಪ್ಪಳ ಸೇರಿ ಹಲವೆಡೆ ಈ ಅವಾಂತರ ಜರುಗಿದೆ. ವಿವಿ ವ್ಯಾಪ್ತಿಯ 145 ಕಾಲೇಜುಗಳಲ್ಲಿ ಪ್ರಶ್ನೆ ಪತ್ರಿಕೆ ಅದಲು ಬದಲು ಆಗಿರುವುದು ಖಚಿತಪಡುತ್ತಿದ್ದಂತೆ, ಇಡೀ ಪರೀಕ್ಷೆಯನ್ನೇ ರದ್ದು (Cancell) ಮಾಡಲಾಗಿದೆ.
ಇಂದು ಮಂಗಳವಾರ ಬಿ ಎ ಪದವಿಯ ಮೂರನೇ ಸೆಮಿಸ್ಟರ್ ನ ಸಮಾಜಶಾಸ್ತ್ರ ಪರೀಕ್ಷೆ ನಡೆಯಬೇಕಿತ್ತು. ಮೂರನೇ ಸೆಮಿಸ್ಟರ್ ಬದಲಾಗಿ ಎರಡನೇ ಸೆಮಿಸ್ಟರ್ ನ ಪ್ರಶ್ನೆ ಪತ್ರಿಕೆ ನೀಡಿ ವಿಶ್ವವಿದ್ಯಾಲಯ ಅಚಾತುರ್ಯ ಮೆರೆದಿದೆ. ಮೂರನೇ ಸೆಮಿಸ್ಟರ್ ಪರೀಕ್ಷೆಗೆ ಸಿದ್ಧರಾಗಿ ಬಂದಿದ್ದ ವಿದ್ಯಾರ್ಥಿಗಳು ಎರಡನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ನೋಡಿ ಗಾಬರಿಗೊಂಡಿದ್ದಾರೆ. ತಕ್ಷಣವೇ, ವಿಶ್ವವಿದ್ಯಾಲಯದ ಈ ಮಹಾ ಎಡವಟ್ಟನ್ನು ವಿದ್ಯಾರ್ಥಿಗಳು ಪ್ರಾಚಾರ್ಯರ ಗಮನಕ್ಕೆ ತಂದಿದ್ದಾರೆ.
Also Read: ರಾಜ್ಯದಲ್ಲಿ ಬಹುತೇಕ ಕಡೆ ಮಳೆ: ಆದರೆ ಬೆಳಗಾವಿ-ಬಳ್ಳಾರಿಯಲ್ಲಿ ಮುಂದುವರಿದ ಬರದ ಬರೆ, ಏನಿದೆ ಚಿತ್ರಣ
ಕಾಲೇಜುಗಳ ಮುಖ್ಯಸ್ಥರು ಕೂಡ ಕೂಡಲೇ ಪ್ರಶ್ನೆ ಪತ್ರಿಕೆ ಬದಲಾವಣೆಯ ಎಡವಟ್ಟನ್ನು ವಿವಿ ಗಮನಕ್ಕೆ ತಂದಿದ್ದಾರೆ. ತತ್ಫರಿಣಾಮ ವಿಶ್ವವಿದ್ಯಾಲಯವು ಬಿಎ ಮೂರನೇ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಿದೆ. ಇದೀಗ ಇಂದು ರದ್ದಾಗಿರುವ ಪರೀಕ್ಷೆಗೆ ಮರು ದಿನಾಂಕ ನಗದಿಪಡಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ