AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಗಾಭದ್ರ ಗೇಟ್​ ಕಟ್​​ನಿಂದ ಏನೆಲ್ಲಾ ಸಂಕಷ್ಟಗಳು? ಯಾವೆಲ್ಲಾ ಜಿಲ್ಲೆಗೆ ಎಫೆಕ್ಟ್?

ಕಲ್ಯಾಣ ಕರ್ನಾಟಕ ಬಾಗದ ಜನರ ಜೀವನಾಡಿ ಅಂತಲೇ ತುಂಗಭದ್ರಾ ಜಲಾಶಯವನ್ನು ಕರೆಯುತ್ತಾರೆ. ಈ ಡ್ಯಾಂ ನೀರಿನ ಮೇಲೆಯೇ ನಾಲ್ಕು ಜಿಲ್ಲೆಯ ಬಹುತೇಕ ಜನರ ಬದುಕು ನಿಂತಿರೋದು. ಈ ನೀರೆ ಕೃಷಿ ಮತ್ತು ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ. ಈ ಡ್ಯಾಂ ತುಂಬಿದ್ರೆ ನಾಲ್ಕು ಜಿಲ್ಲೆಯ ಜನರ ಸಂತಸ ಇಮ್ಮಡಿಯಾಗುತ್ತದೆ. ಡ್ಯಾಂ ನಲ್ಲಿರೋ ನೀರು ಖಾಲಿಯಾಗುತ್ತಾ ಹೋದಂತೆ ನಾಲ್ಕು ಜಿಲ್ಲೆಯ ಜನರಿಗೆ ಸಂಕಷ್ಟ ಶುರುವಾಗುತ್ತದೆ. ಆದ್ರೆ ಇದೀಗ ಜಲಾಶಯದ ಒಂದು ಗೇಟ್ ಕಿತ್ತುಕೊಂಡು ಹೋಗಿರೋದರಿಂದ ಡ್ಯಾಂ ದುರಸ್ಥಿ ಮಾಡಲು ಡ್ಯಾಂ ನಲ್ಲಿರೋ ನೀರನ್ನು ಖಾಲಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೀರು ಖಾಲಿಯಾಗೋದರಿಂದ ಯಾವೆಲ್ಲಾ ಸಂಕಷ್ಟಗಳು ಎದುರಾಗುತ್ತವೆ ಎನ್ನುವ ಮಾಹಿತಿ ಇಲ್ಲಿದೆ.

ತುಂಗಾಭದ್ರ ಗೇಟ್​ ಕಟ್​​ನಿಂದ ಏನೆಲ್ಲಾ ಸಂಕಷ್ಟಗಳು? ಯಾವೆಲ್ಲಾ ಜಿಲ್ಲೆಗೆ ಎಫೆಕ್ಟ್?
ತುಂಗಾಭದ್ರ ಗೇಟ್ ಕಟ್
ಸಂಜಯ್ಯಾ ಚಿಕ್ಕಮಠ
| Edited By: |

Updated on: Aug 12, 2024 | 10:15 PM

Share

ಕೊಪ್ಪಳ, (ಆಗಸ್ಟ್ 12): ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು 105.788 ಟಿಎಂಸಿ ಯಷ್ಟು ನೀರನ್ನು ಸಂಗ್ರಹಿಸುವ ಸಾಮಾರ್ಥ್ಯ ಡ್ಯಾಂ ಹೊಂದಿದೆ. ಮೊನ್ನೆವರಗೆ ಮಲೆನಾಡಿನಲ್ಲಿ ಸುರಿದ ಮಳೆಗೆ ಡ್ಯಾಂ ಸಂಪೂರ್ಣವಾಗಿ ಭರ್ತಿಯಾಗಿತ್ತು. ಡ್ಯಾಂ ಭರ್ತಿಯಾಗಿದ್ದು ಎಲ್ಲರ ಸಂತಸ ಇಮ್ಮಡಿಗೊಳಿಸಿತ್ತು. ಆಗಸ್ಟ್ 13 ರಂದು ಸ್ವತ ಸಿದ್ದರಾಮಯ್ಯನವರೇ ಬಾಗೀನ ಅರ್ಪಿಸಲಿಕ್ಕೆ ಆಗಮಿಸುವವರಿದ್ದರು. ಆದ್ರೆ ಸಂತಸ ಹೆಚ್ಚು ದಿನ ಉಳಿಯದೇ, ಮತ್ತೆ ಸಂಕಷ್ಟ ಎದುರಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೌದು…ತಂಗಾಭದ್ರ ಜಲಾಶಯದ 19ನೇ ಗೇಟ್​ ಕಟ್​ ಆಗಿದೆ. ಈ ಹಿನ್ನೆಲೆಯಲ್ಲಿ ಅದನ್ನು ರಿಪೇರಿ ಮಾಡಲು ಜಲಾಶಯನಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ಖಾಲಿ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇದರಿಂದ ರೈತರಿಗೆ ಭಾರೀ ಸಂಕಷ್ಟ ತಂದಿಟ್ಟಿದೆ.

ಹೌದು ಡ್ಯಾಂನಲ್ಲಿನ ನೀರು ಖಾಲಿಯಾಗುತ್ತಿದೆ. ಇದು ನದಿ ಪಾತ್ರದ ಕೆಳಬಾಗದ ಜನರಿಗೆ ಸಂಕಷ್ಟವನ್ನು ತಂದೊಡ್ಡಿದೆ. ತುಂಗಭದ್ರಾ ಜಲಾಶಯದಿಂದ ಒಟ್ಟು ಹನ್ನೆರಡು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಆ ಪೈಕಿ ಕರ್ನಾಟಕದ, ಕೊಪ್ಪಳ,ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿಯೇ ಸರಿಸುಮಾರು ಏಳು ಲಕ್ಷ ಎಕರೆ ಪ್ರದೇಶದಲ್ಲಿ ಡ್ಯಾಂ ನೀರನ್ನು ನಂಬಿ ರೈತರು ಕೃಷಿ ಮಾಡುತ್ತಾರೆ. ಇನ್ನು ತುಂಗಭದ್ರಾ ಜಲಾಶಯದ ನೀರನ್ನು ಬಳಸಿಕೊಂಡು ಹೆಚ್ಚಿನ ರೈತರು ಭತ್ತವನ್ನು ಬೆಳೆಯುತ್ತಾರೆ. ಇದೇ ಕಾರಣಕ್ಕೆ ಕೊಪ್ಪಳ,ರಾಯಚೂರು ಜಿಲ್ಲೆಗಳನ್ನು ಭತ್ತದ ಕಣಜ ಅಂತ ಕೂಡಾ ಕರೆಯುತ್ತಾರೆ. ಕಳೆದ ವರ್ಷ ಬರಗಾಲದಿಂದ ಡ್ಯಾಂ ತುಂಬಿರಲಿಲ್ಲ. ಹೀಗಾಗಿ ರೈತರಿಗೆ ಎರಡನೇ ಬೆಳೆಗೆ ಕೂಡಾ ನೀರು ಬಿಟ್ಟಿರಲಿಲ್ಲ. ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದರು.

ಇದನ್ನೂ ಓದಿ: ತುಂಗಭದ್ರಾ ಡ್ಯಾಂನ ಹೊಸ ಕ್ರಸ್ಟ್​ ಗೇಟ್​ ನಿರ್ಮಾಣದ ಎಕ್ಸ್​ಕ್ಲೂಸಿವ್​ ದೃಶ್ಯ!

ಈ ಬಾರಿ ಕೂಡಾ ನಾಲ್ಕು ಜಿಲ್ಲೆಯಲ್ಲಿ ಮುಂಗಾರು ಮಳೆ ಆಗಿದ್ದು ಅಷ್ಟಕಷ್ಟೇ. ಇನ್ನು ಜುಲೈ ಮೊದಲ ವಾರದಲ್ಲಿ ಕೂಡಾ ಡ್ಯಾಂ ನಲ್ಲಿ ನೀರಿರಲಿಲ್ಲಾ. ಡ್ಯಾಂ ಡೆಡ್ ಸ್ಟೋರೆಜ್ ತಲುಪಿತ್ತು. ಹೀಗಾಗಿ ಜೂನ್, ಜುಲೈ ತಿಂಗಳಲ್ಲಿ ಕೂಡ ಡ್ಯಾಂ ಕೆಳಬಾಗದ ಜನರು ಭತ್ತವನ್ನು ನಾಟಿ ಮಾಡಿರಲಿಲ್ಲಾ. ಆದ್ರೆ ಜುಲೈ ಮೊದಲ ವಾರದ ನಂತರ ಮಲೆನಾಡ ಮಳೆಗೆ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು. ಹೀಗಾಗಿ ಜುಲೈ ತಿಂಗಳ ಅಂತ್ಯಕ್ಕೆ ಡ್ಯಾಂ ತುಂಬಿತ್ತು. ಡ್ಯಾಂಗೆ ನೀರು ಬರ್ತಾಯಿದ್ದಂತೆ, ಕೃಷಿಕರ ಮೊಗದಲ್ಲಿ ಮಂದಹಾಸ ಹೆಚ್ಚಾಗಿತ್ತು. ರೈತರು ಸಂತಸದಿಂದ ಭತ್ತ ನಾಟಿ ಆರಂಭಿಸಿದ್ದರು. ಆದ್ರೆ ಇದೀಗ ಮತ್ತೆ ಡ್ಯಾಂ ನಲ್ಲಿನ ನೀರು ಖಾಲಿ ಮಾಡುತ್ತಿರುವದರಿಂದ ಕೃಷಿಕರಿಗೆ ಸಂಕಷ್ಟ ಆರಂಭವಾಗುತ್ತದೆ.

ಎರಡನೇ ಬೆಳೆಗಿಂತ ಮೊದಲ ಬೆಳೆಗೆ ಸರಿಯಾಗಿ ನೀರು ಸಿಗುತ್ತಾ ಅನ್ನೋ ಆತಂಕ ರೈತರನ್ನು ಕಾಡುತ್ತಿದೆ. ಯಾಕಂದ್ರೆ ಡ್ಯಾಂ ಗೇಟ್ ರಿಪೇರಿ ಮಾಡಬೇಕಾದ್ರೆ ಸರಿಸುಮಾರು ಆರವತ್ತರಿಂದ ಆರವತ್ತೈದು ಟಿಎಂಸಿ ನೀರು ಖಾಲಿಯಾಗಬೇಕು. 65 ಟಿಎಂಸಿ ನೀರು ಖಾಲಿಯಾದ್ರೆ ಡ್ಯಾಂ ನಲ್ಲಿ ಉಳಿಯೋದು ಕೇವಲ ನಲವತ್ತು ಟಿಎಂಸಿ ನೀರು ಮಾತ್ರ. ಇದರಲ್ಲಿ ಆಂದ್ರಪ್ರದೇಶದ ಕೋಟಾ ಕೂಡಾ ಇದೆ. ಹೀಗಾಗಿ ಕರ್ನಾಟಕ ಕೋಟಾ ಉಳಿಯೋದು ಕೇವಲ ಇಪ್ಪತ್ತೈದು ಟಿಎಂಸಿ ನೀರು ಮಾತ್ರ. ಇದರಲ್ಲಿಯೇ ಕುಡಿಯುವ ನೀರಿಗೆ ಹೆಚ್ಚಿನ ನೀರು ಇಟ್ಟುಕೊಳ್ಳೋದರಿಂದ ರೈತರಿಗೆ ಇದೀಗ ಬೆಳೆಗೆ ನೀರು ಸಿಗುತ್ತಾ ಇಲ್ಲವೋ ಅನ್ನೋ ಆತಂಕ ಎದುರಾಗಿದೆ.

ಇದನ್ನೂ ಓದಿ: ಭರದಿಂದ ಸಾಗಿದ ತುಂಗಭದ್ರಾ ಡ್ಯಾಂ ಗೇಟ್​ ನಿರ್ಮಾಣದ ಕಾರ್ಯ: ಗೇಟಿನ ಅಗಲ-ಉದ್ದ ಎಷ್ಟು? ಇಲ್ಲಿದೆ ವಿವರ

ಕುಡಿಯುವ ನೀರಿಗೆ ಕೂಡಾ ತತ್ವಾರ ಸಾಧ್ಯತೆ

ಇನ್ನು ತುಂಗಭದ್ರಾ ಜಲಾಶಯದ ನೀರಿನ ಮೇಲೆಯ ನಾಲ್ಕು ಜಿಲ್ಲೆಗಳ ಅನೇಕ ಪಟ್ಟಣ,ಮತ್ತು ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ. ಆದ್ರೆ ಇದೀಗ ಡ್ಯಾಂ ನಲ್ಲಿರೋ ನೀರು ಖಾಲಿಯಾದ್ರೆ ಕುಡಿಯುವ ನೀರಿಗೆ ಕೂಡಾ ತತ್ವಾರವಾಗುತ್ತದೆ. ಕಳೆದ ಬೇಸಿಗೆಯಲ್ಲಿ ಅನೇಕ ಕಡೆ ಕುಡಿಯಲು ಕೂಡಾ ನೀರು ಬಿಡದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮತ್ತೆ ಡ್ಯಾಂ ಖಾಲಿಯಾಗುತ್ತಿರವುದರಿಂದ ಬೇಸಿಗೆಯಲ್ಲಿ ಈ ಬಾರಿ ಕೂಡಾ ತತ್ವಾರವಾಗೋ ಸಾಧ್ಯತೆ ಹೆಚ್ಚಾಗಿದೆ.

ತುಂಗಭದ್ರಾ ಜಲಾಶಯದ ಕೆಳಬಾಗವನ್ನು ನೀರುನಾಯಿ ಸಂರಕ್ಷಿತ ಪ್ರದೇಶ ಅಂತ ಘೋಷಣೆ ಮಾಡಲಾಗಿದೆ. ಈ ಬಾಗದಲ್ಲಿ ನೀರುನಾಯಿ ಸೇರಿದಂತೆ ಅನೇಕ ಜಲಚರಗಳಿವೆ. ಕಳೆದ ಬಾರಿ ಬೇಸಿಗೆಯಲ್ಲಿ ನದಿ ಸಂಪೂರ್ಣವಾಗಿ ಬತ್ತಿತ್ತು. ಹೀಗಾಗಿ ನೀರುನಾಯಿಗಳು ಸೇರಿದಂತೆ ಅನೇಕ ಜಲಚರಗಳು ಕೂಡಾ ಸಾಕಷ್ಟು ತೊಂದರೆ ಅನುಭವಿಸಿದ್ದವು. ಡ್ಯಾಂ ನಿಂದ ಮೊನ್ನೆ ನೀರನ್ನು ಬಿಟ್ಟ ನಂತರ, ನೀರುನಾಯಿಗಳು ಪ್ರತ್ಯಕ್ಷವಾಗಿದ್ದವು. ಬೇಸಿಗೆಯಲ್ಲಿ ನೀರು ಖಾಲಿಯಾದ್ರೆ ಮತ್ತೆ ಬೇಸಿಗೆಯಲ್ಲಿ ಜಲಚರಗಳು ತೊಂದರೆ ಅನುಭವಿಸುತ್ತವೆ.

ಸದ್ಯ ಡ್ಯಾಂ ಗೇಟ್ ದುರಸ್ಥಿಯಾದ ನಂತರ ಮಲೆನಾಡಿನಲ್ಲಿ ಮಳೆಯಾದ್ರೆ ಮಾತ್ರ ತುಂಗಭದ್ರಾ ಜಲಾಶಯಕ್ಕೆ ನೀರು ಬರುತ್ತದೆ. ಹಿಂಗಾರು ಮಳೆ ಕೈಕೊಟ್ಟರೆ ತುಂಗಭದ್ರಾ ಜಲಾಶಯ ಬೇಸಿಗೆ ಆರಂಭದಲ್ಲಿಯೇ ಬತ್ತಿದ್ರು ಅಚ್ಚರಿಯಿಲ್ಲ. ಕಳೆದ ವರ್ಷ ಡ್ಯಾಂ ಡೆಡ್ ಸ್ಟೋರೆಜ್ ಹಂತ ತಲುಪಿತ್ತು. ಆದ್ರೆ ಈ ಬಾರಿ ಡ್ಯಾಂ ತುಂಬಿದ್ರು ಕೂಡಾ ನೀರು ಖಾಲಿಯಾಗುತ್ತಿರುವದು ಸಂಕಷ್ಟಕ್ಕೆ ಕಾರಣವಾಗಿದೆ.

ಇನ್ನು ಗೇಟ್ ರಿಪೇರಿಯಿಂದ 105 ಟಿಎಂಸಿಯಲ್ಲಿ 50ರಿಂದ 50 ಟಿಎಂಸಿ ನೀರು ಖಾಲಿ ಮಾಡಬೇಕಿದೆ, ಹೀಗಾಗಿ ಅರ್ಧ ಡ್ಯಾಂ ಖಾಲಿಯಾಗಲಿದೆ. ಇನ್ನೊಂದೆಡೆ ಡ್ಯಾಂನ ಒಳಹರಿವು ಸಹ ಇಲ್ಲ. ಯಾಕಂದ್ರೆ ಮಲೆನಾಡು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ತುಂಗಾಭದ್ರ ಡ್ಯಾಂ ಭಾಗದ ರೈತರ ಜೀವನ ಇದೀಗ ಪ್ರಕೃತಿಯಲ್ಲಿದೆ. ಎಲ್ಲಾ ರಿಪೇರಿ ಮುಗಿದ ಬಳಿಕ ಮಳೆಯಾದರೆ ತುಂಗಾಭದ್ರ ಒಡಲು ಮತ್ತೊಮ್ಮೆ ಭರ್ತಿಯಾಗಲಿದೆ. ಇಲ್ಲ ಅಂದರೆ ಈಗ ರೈತರು ಬೆಳೆದಿರುವ ಬೆಳೆಗೂ ನೀರಿನ ಅಭಾವ ಉಂಟಾಗಲಿದೆ.

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ