ಸಚಿವರಷ್ಟೇ ಅಲ್ಲ; ಈಗ ಅಧಿಕಾರಿಗಳೂ ಕ್ಯಾರೇ ಅಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಮತ್ತೆ ಪತ್ರ ಬರೆದ ಶಾಸಕ ಬಸವರಾಜ ರಾಯರೆಡ್ಡಿ

| Updated By: ಸಾಧು ಶ್ರೀನಾಥ್​

Updated on: Sep 02, 2023 | 9:47 AM

ಹಾಗೆ ನೋಡಿದರೆ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಬಂಡೆದ್ದಿರುವ ಶಾಸಕ ರಾಯರೆಡ್ಡಿ, ಜೆಸ್ಕಾಂ ಅಧಿಕಾರಿಗಳು ಹಾಗೂ ಇಂಧನ ಸಚಿವರ ಸಭೆ ಕರೆಯಲು ಒತ್ತಾಯಿಸಿದ್ದಾರೆ. ಹಿರಿಯ ಅಧಿಕಾರಿಗಳು ನನ್ನ ಮಾತು ಕೇಳ್ತಿಲ್ಲ. ತಮ್ಮ ಅಧೀನ ಕಿರಿಯ ಅಧಿಕಾರಿಗಳ ಮಾತನ್ನೂ ಕೇಳುತ್ತಿಲ್ಲ ಅವರು. ಕೆಲಸಗಳು ಆಗದೆ ಕಿರಿಯರು ಕಿರಿಕಿರಿ ಅನುಭವಿಸುತ್ತಿದ್ದಾರೆ. ನನ್ನ ಸೂಚನೆಗೂ ಹಿರಿಯರು ಕ್ಯಾರೇ ಅನ್ನುತ್ತಿಲ್ಲ ಎಂಬುದಾಗಿ ಶಾಸಕ ರಾಯರೆಡ್ಡಿ ಪತ್ರ ಮುಖೇನ ಸಿಎಂ ಗಮನ ಸೆಳೆದಿದ್ದಾರೆ.

ಸಚಿವರಷ್ಟೇ ಅಲ್ಲ; ಈಗ ಅಧಿಕಾರಿಗಳೂ ಕ್ಯಾರೇ ಅಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಮತ್ತೆ ಪತ್ರ ಬರೆದ ಶಾಸಕ ಬಸವರಾಜ ರಾಯರೆಡ್ಡಿ
ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಶಾಸಕ ಬಸವರಾಜ ರಾಯರೆಡ್ಡಿ
Follow us on

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ‌ ಮತ್ತೊಮ್ಮೆ ತಮ್ಮದೇ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಹಾಗೆಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ (CM Siddaramaiah) ಪತ್ರ ಬರೆದಿದ್ದಾರೆ ಶಾಸಕ ರಾಯರೆಡ್ಡಿ. ಅಂದಹಾಗೆ ಇದು ಎರಡನೆಯ ಬಾರಿಗೆ ಶಾಸಕ ರಾಯರೆಡ್ಡಿ‌ (Yelburga Congress MLA Basavaraj Rayareddy) ತಮ್ಮ ಮುನಿಸು ಹೊರಹಾಕುತ್ತಿದ್ದಾರೆ. ಅತ್ಯಂತ ಹಿರಿಯರಾದ ತಮಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ಮುನಿಸುಕೊಂಡಿರುವ ಶಾಸಕ ರಾಯರೆಡ್ಡಿ ಇತ್ತೀಚೆಗೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ (CLP) ಸಭೆಗೆ ಒತ್ತಾಯಿಸಿ ಸಹಿ ಸಂಗ್ರಹಿಸಿದ್ದರು. ಅದರಂತೆ ಸಭೆ ಆಯೋಜಿಸುವಂತೆಯೂ ನೋಡಿಕೊಂಡಿದ್ದರು. ಆಗ, ಸಚಿವರು ನಮ್ಮ ಮಾತು ಕೇಳ್ತಿಲ್ಲ ಸಭೆ ಕರೆಯಿರಿ ಎಂದು ಸಿಎಂ ಸಿದ್ದರಾಮಯ್ಯ ಬಳಿ ದೂರಿದ್ದರು.

ಹಾಗೆ ನೋಡಿದರೆ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಬಂಡೆದ್ದಿದ್ದ ಶಾಸಕ ರಾಯರೆಡ್ಡಿ ಕಾಂಗ್ರೆಸ್ ಶಾಸಕರ ಸಹಿ ಸಂಗ್ರಹಿಸುವ ಮೂಲಕ ಭಾರಿ ಸಂಚಲನಕ್ಕೆ ಕಾರಣಕರ್ತರಾಗಿದ್ದರು. ಈಗ ಅಧಿಕಾರಿಗಳ ಸಭೆ ಕರೆಯಲು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ರಾಯರೆಡ್ಡಿ.‌ ಜೆಸ್ಕಾಂ ಅಧಿಕಾರಿಗಳು ಹಾಗೂ ಇಂಧನ ಸಚಿವರ ಸಭೆ ಕರೆಯಲು ಅವರು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ಶಾಸಕಾಂಗ ಸಭೆ ಕರೆಯುವಂತೆ ಒತ್ತಾಯಿಸಿದ್ಯಾರು? ಸಿಎಂಗೆ ಪತ್ರ ಬರೆದಿದ್ಯಾರು? ಪತ್ರದಲ್ಲೇನಿದೆ? ಎಲ್ಲಾ ಅಂಶ ಬಿಚ್ಚಿಟ್ಟ ರಾಯರೆಡ್ಡಿ

ಹಿರಿಯ ಅಧಿಕಾರಿಗಳು ನಮ್ಮ ಮಾತು ಕೇಳ್ತಿಲ್ಲ. ತಮ್ಮ ಅಧೀನ ಕಿರಿಯ ಅಧಿಕಾರಿಗಳ ಮಾತನ್ನೂ ಕೇಳುತ್ತಿಲ್ಲ ಅವರು. ಕಿರಿಯರು ಕೆಲಸಗಳು ಆಗದೆ ಅಸಹಾಯಕತೆ ತೋಡಿಕೊಂಡಿದ್ದಾರೆ. ನನ್ನ ಸೂಚನೆಗೂ ಹಿರಿಯರು ಕ್ಯಾರೇ ಅನ್ನುತ್ತಿಲ್ಲ ಎಂಬುದಾಗಿ ಶಾಸಕ ರಾಯರೆಡ್ಡಿ ಪತ್ರ ಮುಖೇನ ಸಿಎಂ ಗಮನ ಸೆಳೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಯಿಂದ ಸದ್ಯ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ:

ವಾಸ್ತವವಾಗಿ, ಜೆಸ್ಕಾಂ ವ್ಯಾಪ್ತಿಯಲ್ಲಿ (GESCOM officials) ಟ್ರಾನ್ಸ್​ಫಾರ್ಮರ್ ಅವಳಡಿಕೆಯಾಗುತ್ತಿಲ್ಲ. ಯಲಬುರ್ಗಾ ಕ್ಷೇತ್ರವೊಂದಕ್ಕೆ 200 ಟ್ರಾನ್ಸ್​ಫಾರ್ಮರ್​ಗಳ ಅಗತ್ಯವಿದೆ. ಅಧಿಕಾರಿಗಳು ನಮ್ಮ ಮಾತು ಕೇಳ್ತಿಲ್ಲ, ಅವರಿಂದ ಕೆಲಸ ಸಾಧ್ಯವಾಗುತ್ತಿಲ್ಲ. ಇದರಿಂದ ರೈತರ ಜಮೀನಿಗೆ ವಿದ್ಯುತ್ ನೀಡೋದಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಇಂಧನ ಸಚಿವರ ಸಭೆ ಕರೆದು ಚರ್ಚಿಸುವಂತೆ ಅವರು ಒತ್ತಾಯ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆಯಿಂದ ಇದಕ್ಕೆ ಸದ್ಯ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಕೊಪ್ಪಳ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:47 am, Sat, 2 September 23