AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಗಾವತಿ ಯುವ ಶಿಲ್ಪಿ ಅಯೋಧ್ಯೆಯಲ್ಲಿ 45 ದಿನ ಮೂರ್ತಿ ಕೆತ್ತನೆ ಕೆಲಸದಲ್ಲಿ ಭಾಗಿ, ಉದ್ಘಾಟನೆ ಬಳಿಕ ಮತ್ತಷ್ಟು ಸೇವೆಗೆ ಸಜ್ಜು

ಶತಕೋಟಿ ಹಿಂದೂಗಳ ಕನಸಿನ ರಾಮ ಮಂದಿರ ಕೆಲವೆ ದಿನಗಳಲ್ಲಿ ಉದ್ಘಾಟನೆ. ವಿಶ್ವವೇ ಈ ಮಂದಿರದತ್ತ ಮುಖ ಮಾಡಿದೆ. ಇಂತಹ ಅದ್ಬುತದಲ್ಲಿ ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕ ಪ್ರಶಾಂತ ಅವರು ಗಂಗಾವತಿಯವರು ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ.

ಗಂಗಾವತಿ ಯುವ ಶಿಲ್ಪಿ ಅಯೋಧ್ಯೆಯಲ್ಲಿ 45 ದಿನ ಮೂರ್ತಿ ಕೆತ್ತನೆ ಕೆಲಸದಲ್ಲಿ ಭಾಗಿ, ಉದ್ಘಾಟನೆ ಬಳಿಕ ಮತ್ತಷ್ಟು ಸೇವೆಗೆ ಸಜ್ಜು
ಗಂಗಾವತಿ ಶಿಲ್ಪಿ ಅಯೋಧ್ಯೆಯಲ್ಲಿ 45 ದಿನ ಮೂರ್ತಿ ಕೆತ್ತನೆ ಕೆಲಸದಲ್ಲಿ ಭಾಗಿ
ಸಂಜಯ್ಯಾ ಚಿಕ್ಕಮಠ
| Updated By: ಸಾಧು ಶ್ರೀನಾಥ್​|

Updated on: Jan 15, 2024 | 3:32 PM

Share

ಅಯೋಧ್ಯೆಯ ರಾಮನಿಗೂ ರಾಮನ ಬಂಟ ಹನುಮಂತನ ಜನ್ಮಸ್ಥಳವಿರೋ ಕೊಪ್ಪಳ ಜಿಲ್ಲೆಯ ಜನರಿಗೆ ಹತ್ತಿರದ ನಂಟಿದೆ. ಇದೀಗ ದೇಶದ ಬಹುಸಂಖ್ಯಾತ ಜನರು ತಮ್ಮ ಕನಸಿನ ರಾಮ ಮಂದಿರ ಉದ್ಘಾಟನೆಯನ್ನು ಕಣ್ತುಂಬ ನೋಡಲು ಕಾತರಿಂದ ಕಾಯುತ್ತಿದ್ದಾರೆ. ಭವ್ಯ ರಾಮಮಂದಿರ ಕಟ್ಟಡ ಮೂರ್ತಿಗಳ ಕೆತ್ತುವ ಕೆಲಸದಲ್ಲಿ ಕರ್ನಾಟದ ಶಿಲ್ಪಿಗಳು ಕೆಲಸ ಮಾಡಿರೋದು ನಮಗೆಲ್ಲ ಹೆಮ್ಮೆಯ ವಿಷಯ. ಈ ಕೆಲಸದಲ್ಲಿ ಗಂಗಾವತಿ ಶಿಲ್ಪಿಯೊಬ್ಬರು ಕೂಡಾ ಭಾಗಿಯಾಗಿದ್ದಾರೆ.

ಶಿಲ್ಪ ಕೆತ್ತನೆಯಲ್ಲಿ ನಿರತನಾಗಿರೋ ಈ ಶಿಲ್ಪಿಯ ಹೆಸರು ಪ್ರಶಾಂತ್ ಸೋನಾರ್. ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ನಿವಾಸಿಯಾಗಿರೋ ಪ್ರಶಾಂತ್ ಅನೇಕ ಚಂದದ ಶಿಲ್ಪಗಳನ್ನು ಕೆತ್ತುವುದರಲ್ಲಿ ಪ್ರಸಿದ್ದರಾಗಿದ್ದಾರೆ. ಇದೀಗ ಅವರಿಗೆ ಮತ್ತೊಂದು ಹೆಮ್ಮೆಯ ಮತ್ತು ಜೀವನದಲ್ಲಿ ಮರೆಯಲಾರದ ಕ್ಷಣಕ್ಕಾಗಿ ಅವರು ಕೂಡಾ ಕಾಯುತ್ತಿದ್ದಾರೆ.

ಯಾಕಂದ್ರೆ ರಾಮ ಮಂದಿರದ ನಿರ್ಮಾಣ ಕೆಲಸದಲ್ಲಿ ಪ್ರಶಾಂತ್ ಕೂಡಾ ಭಾಗಿಯಾಗಿದ್ದಾರೆ. ಹೌದು ರಾಮ ಮಂದಿರದಲ್ಲಿ 45 ದಿನಗಳ ಕಾಲ ಅನೇಕ ಮೂರ್ತಿ ಕೆತ್ತನೆ ಕೆಲಸ ಮಾಡಿದ್ದಾರೆ. ಹನುಮ ಜನ್ಮ ಸ್ಥಳದಿಂದ ತೆರಳಿ ಪ್ರಭು ಶ್ರೀ ರಾಮ ಮಂದಿರದ ಮೂರ್ತಿ ಕೆತ್ತುವ ಕೆಲಸದಲ್ಲಿ ಗಂಗಾವತಿಯ ಶಿಲ್ಪಿ ಪ್ರಶಾಂತ ಸೋನಾರ್ ಎಂಬು ವವರು ಭಾಗವಹಿಸಿ ಕೆತ್ತನೆ ಕೆಲಸ ಮಾಡಿದ್ದಾರೆ.

ಅಕ್ಟೋಬರ್ ಮತ್ತು ನವಂಬರ್ ತಿಂಗಳಲ್ಲಿ ಒಟ್ಟು 45 ದಿನಗಳ ಕಾಲ ಮೂರ್ತಿ ಕೆತ್ತನೆ ಕೆಲಸದಲ್ಲಿ ಪ್ರಶಾಂತ ಭಾಗಿಯಾಗಿ ದೀಪಾವಳಿ ಹಬ್ಬಕ್ಕೆ ವಾಪಸ್ ಊರಿಗೆ ಬಂದಿದ್ದಾರೆ. ಭವ್ಯ ರಾಮ ಮಂದಿರ ನಿರ್ಮಾಣದಲ್ಲಿ ತಾವು ಮಾಡಿರುವ ಮೂರ್ತಿ ಕೆತ್ತುವ ಅಳಿಲು ಸೇವೆ ಮಾಡಿರೋದು ತುಂಬಾ ಹೆಮ್ಮೆ ಎನಿಸುತ್ತದೆ ಅಂತಾರೆ ಪ್ರಶಾಂತ ಸೋನಾರ.

Also Read: ಕೃಷ್ಣನೂರು ಉಡುಪಿಯಲ್ಲಿ ರಾಮದೇವರ ಜೀವನ ಚರಿತ್ರೆಯ ವಾಲ್ ಪೇಂಟಿಂಗ್ ಸ್ಪರ್ಧೆ ಆಯೋಜನೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಪ್ರಶಾಂತ ಗೆ ಕರೆ ಬಂದಿತ್ತು. ಖುಷಿಖುಷಿಯಾಗಿ ಈ ಕೆಲಸದಲ್ಲಿ ಭಾಗಿಯಾಗಿ ಪ್ರಶಾಂತ ಕೆಲಸ ಮಾಡಿದ್ದಾರೆ. ದೀಪಾವಳಿ ಹಬ್ಬಕ್ಕೆ ಊರಿಗೆ ಬಂದಿದ್ದಾರೆ. ಸದ್ಯ ಲೋಕಾರ್ಪಣೆ ಯ ಬಳಿಕ ಉಳಿದ ಕೆಲಸ ಮಾಡಲು ಕರೆ ಬರುತ್ತೆ, ಬಂದ ನಂತರ ಬಾಕಿ ಇರುವ ಕೆಲಸ ಮಾಡೋಕೆ ಹೋಗ್ತಿನಿ. ಮಂದಿರ ನಿರ್ಮಾಣ ಕಾರ್ಯ ಮಾಡುವಾಗ, ಹೆಚ್ಚಿನ ಭದ್ರತೆಯಲ್ಲಿಯೆ ಕೆಲಸ ಮಾಡ್ತಿದ್ವಿ, ಒಳಗಡೆ ಯಾರಿಗೂ ಮೊಬೈಲ್ ಗೆ ಅವಕಾಶ ಇರಲಿಲ್ಲ. ಇಂತಹ ಒಂದು ಅದ್ಭುತ ರಾಮ ಮಂದಿರದ ಕೆಲದಲ್ಲಿ ಭಾಗಿಯಾಗಿದ್ದು ಸಂತಸದ ಜೊತೆಗೆ ಹೆಮ್ಮೆ ಆಗ್ತಿದೆ ಎಂದಿದ್ದಾರೆ ಶಿಲ್ಪಿ ಪ್ರಶಾಂತ.

ಶತಕೋಟಿ ಹಿಂದೂಗಳ ಕನಸಿನ ರಾಮ ಮಂದಿರ ಕೆಲವೆ ದಿನಗಳಲ್ಲಿ ಉದ್ಘಾಟನೆ ಯಾಗದಲಿದೆ. ಇಡಿ ವಿಶ್ವವೇ ಈ ಮಂದಿರದತ್ತ ಮುಖ ಮಾಡಲಿದೆ. ಇಂತಹ ಅದ್ಬುತಗಳಲ್ಲಿ ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕ ಪ್ರಶಾಂತ ನಮ್ಮ ಗಂಗಾವತಿ ಯವರು ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ