ಕೊಪ್ಪಳ: ಜಿಲ್ಲೆಯಲ್ಲಿ ಮಳೆಗೆ ಹಳ್ಳ, ಹೊಳೆಗಳು ತುಂಬಿ ಹರಿಯುತ್ತಿವೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ಕಿರು ಜಲಾಶಯಕ್ಕೆ (Dam) ಅಪಾರ ಪ್ರಮಾಣದ ನೀರು ಹರಿದು ಬರಿತ್ತಿದ್ದು, ಸಂಪೂರ್ಣ ಭರ್ತಿಯಾಗಿದೆ. ಅಧಿಕಾರಿಗಳು ಜಲಾಶಯದ ಬಳಿ ತೆರಳದಂತೆ ಎಚ್ಚರಿಕೆ ನೀಡಿದ್ದರೂ, ಯುವಕ ಯುವತಿಯರು ಭರ್ತಿಯಾದ ಜಲಾಶಯ ಬಳಿ ಹುಚ್ಚಾಟ ಮೆರೆಯುತ್ತಿದ್ದಾರೆ. ಮುನಿರಾಬಾದ್ ಹಾಗೂ ಹೊಸಪೇಟೆಗೆ ಸಂಪರ್ಕ ಕಲ್ಪಿಸುವ ಸೇತುವೆಗೆ (Bridge) ತಡೆಗೋಡೆ ಇಲ್ಲ. ಈ ಸೇತುವೆ ಮೇಲೆ ನಿಂತು ಯುವಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ಜನರು ನೀರಿನ ಬಳಿ ಹೋಗದಂತೆ ಮುಳ್ಳಿನ ಬೇಲಿ ಹಾಕಿದ್ದರೂ, ಯುವಕ- ಯುವತಿಯರು ಸೆಲ್ಫಿ ಹುಚ್ಚಾಟ ಬಿಟ್ಟಿಲ್ಲ. ಬೇಲಿ ದಾಟಿ ಕ್ರಸ್ಟ್ ಗೇಟ್ ನೋಡಲು ಬರುತ್ತಿದ್ದಾರೆ. ಅಲ್ಲದೆ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ನೀರಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ವೇಳ ಸ್ಥಳಕ್ಕೆ ಆಗಮಿಸಿದ ಇಇ ಯುವಕರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇಇ ಶಿವಶಂಕರ್ ಅವರು ಸೇತುವೆ ಮೇಲೆ ಹುಚ್ಚಾಟ ನಡೆಸಿದ ಯುವಕನ ಕಪಾಳಕ್ಕೆ ಬಾರಿಸಿದ್ದಾರೆ.
ಕಪಾಳಮೋಕ್ಷ ಮಾಡುತ್ತಿದ್ದಂತೆ ಯುವಕ-ಯುವತಿಯರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕ್ರಸ್ಟ್ ಗೇಟ್ ಮೂಲಕ ನೀರು ರಭಸದಿಂದ ಧುಮ್ಮಿಕ್ಕುತ್ತಿದೆ. ಈ ನಡುವೆ ಕ್ಯಾರೇ ಎನ್ನದ ಯುವಕರು ಮೊಂಡಾಟ ಮೆರೆದಿದ್ದಾರೆ.
ಇದನ್ನೂ ಓದಿ: RGV: ‘ನಾನು ಸಲಿಂಗಕಾಮಿ ಅಲ್ಲ, ಆದ್ರೂ ಆ ನಟನಿಗೆ ಕಿಸ್ ಮಾಡುವ ಆಸೆ ನನಗಿತ್ತು’: ರಾಮ್ ಗೋಪಾಲ್ ವರ್ಮಾ
ಈಜಲು ಹೋದ ಯುವಕ ನಾಪತ್ತೆ:
ಮೈಸೂರು: ತುಂಬಿ ಹರಿಯುತ್ತಿರುವ ಕಪಿಲೆಯಲ್ಲಿ ಯುವಕರಿಗೆ ಈಜುವ ಹುಚ್ಚಾಟ. ಹೀಗೆ ನದಿಯಲ್ಲಿ ಈಜಲು ಹೋದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ನಂಜನಗೂಡು ತಾಲೂಕಿನ ಹೆಜ್ಜಿಗೆ ಗ್ರಾಮದ ಕಪಿಲೆ ಬಲಿ ಘಟನೆ ಸಂಭವಿಸಿದ್ದು, ಯುವಕ ಅಬ್ದುಲ್ ಕರೀಂ ನಾಪತ್ತೆಯಾಗಿದ್ದಾನೆ. ಮೂವರು ಯುವಕರು ಹೆಜ್ಜಿಗೆ ಸೇತುವೆಯಿಂದ ನದಿಗೆ ಹಾರಿದ್ದರು. ಇದರಲ್ಲಿ ಇಬ್ಬರು ಈಜಿ ದಡ ಸೇರಿದ್ದಾರೆ. ಆದರೆ ಮತ್ತೊಬ್ಬ ನಾಪತ್ತೆಯಾಗಿದ್ದಾನೆ. ಅಬ್ದುಲ್ ಕರೀಂಗಾಗಿ ನದಿಯಲ್ಲಿ ಹುಡುಕಾಟ ನಡೆಯುತ್ತಿದೆ.
ಇದನ್ನೂ ಓದಿ: Health Benefits of Garlic: ನೀವು ಪ್ರತಿದಿನ ಬೆಳ್ಳುಳ್ಳಿ ತಿನ್ನುತ್ತೀರಾ..? ಆರೋಗ್ಯಕಾರಿ ಬೆಳ್ಳುಳ್ಳಿಯ ಪ್ರಯೋಜನ ತಿಳಿಯಿರಿ
Published On - 9:18 am, Thu, 14 July 22