RGV: ‘ನಾನು ಸಲಿಂಗಕಾಮಿ ಅಲ್ಲ, ಆದ್ರೂ ಆ ನಟನಿಗೆ ಕಿಸ್​ ಮಾಡುವ ಆಸೆ ನನಗಿತ್ತು’: ರಾಮ್​ ಗೋಪಾಲ್​ ವರ್ಮಾ

Ram Gopal Varma: ಬಹಳ ವರ್ಷಗಳ ಹಿಂದೆಯೇ ಮಾರ್ಷಲ್​ ಆರ್ಟ್ಸ್​ ಕುರಿತು ಸಿನಿಮಾ ಮಾಡಬೇಕು ಎಂಬ ಆಸೆ ರಾಮ್​ ಗೋಪಾಲ್​ ವರ್ಮಾ ಮನದಲ್ಲಿ ಮೂಡಿತ್ತು. ಅದು ‘ಲಡ್ಕಿ’ ಚಿತ್ರದ ಮೂಲಕ ನೆರವೇರಿದೆ.

RGV: ‘ನಾನು ಸಲಿಂಗಕಾಮಿ ಅಲ್ಲ, ಆದ್ರೂ ಆ ನಟನಿಗೆ ಕಿಸ್​ ಮಾಡುವ ಆಸೆ ನನಗಿತ್ತು’: ರಾಮ್​ ಗೋಪಾಲ್​ ವರ್ಮಾ
ರಾಮ್ ಗೋಪಾಲ್ ವರ್ಮಾ
Follow us
TV9 Web
| Updated By: ಮದನ್​ ಕುಮಾರ್​

Updated on:Jul 14, 2022 | 8:56 AM

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma) ಅವರು ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿ ಆಗಿದ್ದುಂಟು. ಕೆಲವರು ಅವರ ಮಾತನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇನ್ನೂ ಕೆಲವರು ಸೈಲೆಂಟ್​ ಆಗಿ ಕಡೆಗಣಿಸುತ್ತಾರೆ. ಒಟ್ಟಿನಲ್ಲಿ ರಾಮ್​ ಗೋಪಾಲ್​​ ವರ್ಮಾ (RGV) ಆಗಾಗ ಸುದ್ದಿ ಆಗುವುದಂತೂ ನಿಜ. ಸದ್ಯ ಅವರು ತಮ್ಮ ಹೊಸ ಸಿನಿಮಾದ ಬಿಡುಗಡೆಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಲಡ್ಕಿ’ ಚಿತ್ರ ಜುಲೈ 15ರಂದು ತೆರೆ ಕಾಣುತ್ತಿದೆ. ಕನ್ನಡಕ್ಕೂ ಈ ಚಿತ್ರ ಡಬ್​ ಆಗಿದ್ದು, ‘ಹುಡುಗಿ’ ಶೀರ್ಷಿಕೆಯಲ್ಲಿ ರಿಲೀಸ್​ ಆಗುತ್ತಿದೆ. ಈ ಚಿತ್ರದ ಪ್ರಚಾರದ ವೇಳೆ ರಾಮ್​ ಗೋಪಾವ್​ ವರ್ಮಾ ಅವರು ಒಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಖ್ಯಾತ ನಟ ಬ್ರೂಸ್​ ಲೀ (Bruce Lee) ಅವರಿಗೆ ಕಿಸ್​ ಮಾಡುವ ಆಸೆ ತಮಗೆ ಇತ್ತು ಎಂದು ಅವರು ಹೇಳಿದ್ದಾರೆ.

ಮಾರ್ಷಲ್​ ಆರ್ಟ್ಸ್​ನಲ್ಲಿ ಬ್ರೂಸ್​ ಲೀ ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದರು. ಅವರ ಸಿನಿಮಾಗಳು ಇಂದಿಗೂ ಪ್ರೇಕ್ಷಕರ ಫೇವರಿಟ್​ ಆಗಿ ಉಳಿದುಕೊಂಡಿವೆ. ಬ್ರೂಸ್​ ಲೀ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಅವರಿಗೆ ವಿಪರೀತ ಸೆಳೆತ ಇತ್ತು. ಅವರನ್ನು ಸ್ಫೂರ್ತಿಯಾಗಿ ಇಟ್ಟುಕೊಂಡೇ ಅವರು ‘ಲಡ್ಕಿ’ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿ ಪೂಜಾ ಭಾಲೇಕರ್​ ಅವರು ಮಾರ್ಷಲ್​ ಆರ್ಟ್ಸ್​ ಪರಿಣಿತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಬ್ರೂಸ್​ ಲೀ ಅವರಲ್ಲಿ ಏನೋ ಒಂದು ಬಗೆಯ ವಿಶೇಷತೆ ಇತ್ತು. ನಾನು ಸಲಿಂಗಕಾಮಿ ಅಲ್ಲ. ಆದರೂ ನಾನು ಕಿಸ್​ ಮಾಡಬೇಕು ಎಂದು ಬಯಸಿದ ಪುರುಷ ಎಂದರೆ ಅದು ಬ್ರೂಸ್​ ಲೀ ಮಾತ್ರ’ ಅಂತ ರಾಮ್​ ಗೋಪಾಲ್ ವರ್ಮಾ ಹೇಳಿದ್ದಾರೆ. ಬ್ರೂಸ್ ಲೀ ನಟನೆಯ ‘ಎಂಟರ್​ ದಿ ಡ್ರ್ಯಾಗನ್’ ಸಿನಿಮಾವನ್ನು ಕಾಲೇಜು ದಿನಗಳಲ್ಲಿ ಇದ್ದಾಗ ವರ್ಮಾ ನೋಡಿದ್ದರು. ಮಾರ್ಷಲ್​ ಆರ್ಟ್ಸ್​ ಕುರಿತು ಸಿನಿಮಾ ಮಾಡಬೇಕು ಎಂಬ ಆಸೆ ಆಗಲೇ ಅವರ ಮನದಲ್ಲಿ ಚಿಗುರಿತ್ತು. ಅದು ‘ಲಡ್ಕಿ’ ಚಿತ್ರದ ಮೂಲಕ ನೆರವೇರಿದೆ.

ಇದನ್ನೂ ಓದಿ
Image
‘ಹುಡುಗಿ’ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದ ರಾಮ್​ ಗೋಪಾಲ್​ ವರ್ಮಾ; ಜುಲೈ 15ಕ್ಕೆ ಸಿನಿಮಾ ರಿಲೀಸ್​
Image
‘ಡೇಂಜರಸ್​’ ಹುಡುಗಿಯರನ್ನು ಬೆಂಗಳೂರಿಗೆ ಕರೆತಂದು ಪರಿಚಯ ಮಾಡಿಸಿದ ರಾಮ್​ ಗೋಪಾಲ್ ವರ್ಮಾ
Image
‘ಕೆಜಿಎಫ್​ 2’, ಉಪೇಂದ್ರ ಮತ್ತು ಸ್ಯಾಂಡಲ್​ವುಡ್​ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಹೇಳೋದು ಏನು?
Image
‘ಪುನೀತ್​ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್​ ಗೋಪಾಲ್​ ವರ್ಮಾ

‘ಹುಡುಗಿ’ ಚಿತ್ರದ ಪೋಸ್ಟರ್​ಗಳು ವೈರಲ್​ ಆಗಿವೆ. ಪೂಜಾ ಭಾಲೇಕರ್​ ಅವರು ಸಿಕ್ಕಾಪಟ್ಟೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಈ ಪೋಸ್ಟರ್​ಗಳು ಸಾಕ್ಷಿ ಒದಗಿಸುತ್ತಿವೆ. ಮಾರ್ಷಲ್​ ಆರ್ಟ್ಸ್​ ಬಲ್ಲಂತಹ ಹುಡುಗಿಯಾಗಿ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರಿಯಲ್​ ಲೈಫ್​ನಲ್ಲಿಯೂ ಅವರು ಈ ಸಮರ ಕಲೆಯನ್ನು ಕಲಿತಿದ್ದಾರೆ ಎಂಬುದು ವಿಶೇಷ.​

Published On - 7:26 am, Thu, 14 July 22