ಕೊಪ್ಪಳ: ಗಣೇಶ ವಿಸರ್ಜನೆ ವೇಳೆ ಯುವಕರ ನಡುವೆ ಗಲಾಟೆ, ಓರ್ವನಿಗೆ ಚಾಕು ಇರಿತ, ಮೂವರಿಗೆ ಗಾಯ

ಕೊಪ್ಪಳದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಡ್ಯಾನ್ಸ್​ ಮಾಡುವಾಗ ಗಲಾಟೆ ನಡೆದಿದೆ. ಈ ವೇಳೆ ಶಿವು(38) ಎಂಬಾತನಿಗೆ ಚಾಕು ಇರಿಯಲಾಗಿದೆ. ಗಣೇಶ್​​, ಮಂಜು, ಸಾಗರ್ ಮೇಲೆ ಹಲ್ಲೆ ನಡೆದಿದೆ. ಚಾಕು ಇರಿತಕ್ಕೋಳಗಾದ ಶಿವುನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೊಪ್ಪಳ: ಗಣೇಶ ವಿಸರ್ಜನೆ ವೇಳೆ ಯುವಕರ ನಡುವೆ ಗಲಾಟೆ, ಓರ್ವನಿಗೆ ಚಾಕು ಇರಿತ, ಮೂವರಿಗೆ ಗಾಯ
ಸಾಂದರ್ಭಿಕ ಚಿತ್ರ
Edited By:

Updated on: Sep 24, 2024 | 8:30 AM

ಕೊಪ್ಪಳ, ಸೆ.24: ಗಣೇಶ ವಿಸರ್ಜನೆ (Ganesha Visarjan) ವೇಳೆ ಯುವಕರ ಗುಂಪುಗಳ ನಡುವೆ ಗಲಾಟೆಯಾಗಿದ್ದು ಗಲಾಟೆ ವೇಳೆ ಓರ್ವನಿಗೆ ಚಾಕು ಇರಿತ, ಮೂವರ ಮೇಲೆ ಹಲ್ಲೆ ನಡೆಸಲಾಗಿರುವ ಘಟನೆ ಕೊಪ್ಪಳ (Koppal) ಜಿಲ್ಲೆ ಗಂಗಾವತಿ ನಗರದಲ್ಲಿ ತಡರಾತ್ರಿ ನಡೆದಿದೆ. ಗಣೇಶ ಮೂರ್ತಿ ಮೆರವಣಿಗೆ ವೇಳೆ ಡ್ಯಾನ್ಸ್​ ಮಾಡುವಾಗ ಗಲಾಟೆ ನಡೆದಿದೆ. ಈ ವೇಳೆ ಶಿವು(38) ಎಂಬಾತನಿಗೆ ಚಾಕು ಇರಿಯಲಾಗಿದೆ. ಗಣೇಶ್​​, ಮಂಜು, ಸಾಗರ್ ಮೇಲೆ ಹಲ್ಲೆ ನಡೆದಿದೆ.

ಗಂಗಾವತಿ ನಗರದ ಯಶೋಧಾ ಆಸ್ಪತ್ರೆ ಎದುರು ನಿನ್ನೆ ತಡ ರಾತ್ರಿ ಘಟನೆ ನಡೆದಿದೆ. ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಡಾನ್ಸ್ ಮಾಡುತ್ತಿದ್ದ ಯುವಕರ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು ಚಾಕು ಇರಿಯಲಾಗಿದೆ. ಚಾಕು ಇರಿತಕ್ಕೋಳಗಾದ ಶಿವುನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ಇನ್ನುಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರು ಮಹಾಲಕ್ಷ್ಮಿ ಕೊಲೆ ಕೇಸ್: ಹಂತಕ ಅಶ್ರಫ್ ಅಲ್ಲ, ಹೊರರಾಜ್ಯದವನು; ಪೊಲೀಸರಿಗೆ ಸಿಕ್ತು ಸ್ಫೋಟಕ ಮಾಹಿತಿ

ಇಂದಿನಿಂದ ಯುವ ದಸರಾ ಸಂಭ್ರಮ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೌಂಟ್​ಡೌನ್​ ಶುರುವಾಗಿದ್ದು, ಅತ್ತ ಯುವ ದಸರಾ ಕೂಡ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿ ಒಟ್ಟು 8 ದಿನಗಳ ಕಾಲ ಯುವ ದಸರಾ ಸಂಭ್ರಮ ಆಯೋಜಿಸಲಾಗಿದ್ದು, ಮಾನಸಗಂಗೋತ್ರಿಯ ಬಯಲು ರಂಗಂಮದಿರದಲ್ಲಿ ಇಂದಿನಿಂದ ಅಕ್ಟೋಬರ್ 1ರವರೆಗೆ ನಡೆಯಲಿದೆ. ಇಂದು ಶ್ರೀಮುರುಳಿ ಮತ್ತು ರುಕ್ಮಿಣಿ ವಸಂತ್‌ರಿಂದ ಯುವ ದಸರಾ ಸಂಭ್ರಮ ಉದ್ಘಾಟಿಸಲಿದ್ದಾರೆ.

ಆನ್​ಲೈನ್​ನಲ್ಲಿ ದಸರಾ ಗೋಲ್ಡ್​ ಕಾರ್ಡ್​ ಮಾರಾಟ

ಇನ್ನು ಈ ಬಾರಿಯೂ ಆನ್ ಲೈನ್ ಮುಖಾಂತರ ದಸರಾ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 26 ರಿಂದ 30 ರವರೆಗೂ 5 ದಿನಗಳ ಕಾಲ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪ್ರತಿನಿತ್ಯ 1000 ದಿಂದ 1500 ಗೋಲ್ಡ್ ಕಾರ್ಡ್ ಗಳು ಮಾರಾಟದ ಗುರಿ ಹೊಂದಲಾಗಿದೆ. ಒಂದು ದಸರಾ ಗೋಲ್ಡ್ ಕಾರ್ಡ್ ಗೆ 6500 ರೂಪಾಯಿ ನಿಗದಿ ಮಾಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ