Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಮಹಾಲಕ್ಷ್ಮಿ ಕೊಲೆ ಕೇಸ್: ಹಂತಕ ಅಶ್ರಫ್ ಅಲ್ಲ, ಹೊರರಾಜ್ಯದವನು; ಪೊಲೀಸರಿಗೆ ಸಿಕ್ತು ಸ್ಫೋಟಕ ಮಾಹಿತಿ

Bengaluru Mahalaxmi Murder Case: ವೈಯಾಲಿಕಾವಲ್ ಮಹಾಲಕ್ಷ್ಮಿ ಹತ್ಯೆ ಕೇಸ್ ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಕೊಲೆಗಾರ ಯಾರು ಅನ್ನೋ ಸುಳಿವು ಖಾಕಿ ಪಡೆ ಪತ್ತೆ ಮಾಡಿದೆ. ಆ ಹಂತಕನ ಜಾಡು ಹಿಡಿದು ಪೊಲೀಸರ ಟೀಂ ಹುಡುಕಾಟ ನಡೆಸ್ತಿದೆ. ಆದರೆ ಇನ್ನೊಂದು ಕಡೆ ಕೊಲೆಗಾರನ ಕರಾಮತ್ತು FSLಟೀಂಗೂ ಸವಾಲಾಗಿದೆ. ಈ ಸಂಬಂಧ ಟಿವಿ9 ವರದಿಗಾರ ಪ್ರದೀಪ್ ಚಿಕ್ಕಾಟಿ ಅವರು ನೀಡಿರುವ ವರದಿ ಇಲ್ಲಿದೆ.

ಬೆಂಗಳೂರು ಮಹಾಲಕ್ಷ್ಮಿ ಕೊಲೆ ಕೇಸ್: ಹಂತಕ ಅಶ್ರಫ್ ಅಲ್ಲ, ಹೊರರಾಜ್ಯದವನು; ಪೊಲೀಸರಿಗೆ ಸಿಕ್ತು ಸ್ಫೋಟಕ ಮಾಹಿತಿ
ಮಹಾಲಕ್ಷ್ಮಿ
Follow us
TV9 Web
| Updated By: ಆಯೇಷಾ ಬಾನು

Updated on:Sep 24, 2024 | 9:21 AM

ಬೆಂಗಳೂರು, ಸೆ.24: ಇಡೀ ದೇಶವನ್ನೆ ಬೆಚ್ಚಿಬೀಳಿಸಿರೋ ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆಗೆ ರೋಚಕ ತಿರುವು ಸಿಕ್ಕಿದೆ (Bengaluru Woman Murder Case). ಫ್ರಿಡ್ಜ್‌ನಲ್ಲಿ‌ ಮಹಿಳೆಯ ದೇಹವನ್ನ ತುಂಡುತುಂಡು ಮಾಡಿದ್ದವನಿಗೆ ಬಲೆ ಹಾಕಿರೋ ಪೊಲೀಸರು (Bengaluru Police) ಆತನ ಜಾಡು ಹಿಡಿದಿದ್ದಾರೆ. ಕೊಲೆ ಪ್ರಕರಣ ಬೆಳಕಿಗೆ ಬಂದು ಎರಡು ದಿನದಲ್ಲಿ ಹಂತಕನ ಮಾಹಿತಿ ಖಾಕಿಗೆ ಸಿಕ್ಕಿದೆ. ಆದರೆ ಆತ ಯಾರು? ಎಲ್ಲಿಯವನು? ಯಾಕಾಗಿ ಕೊಲೆ ಮಾಡಿದ್ದ ಅನ್ನೋದು ಮಾತ್ರ ಇನ್ನೂ ನಿಗೂಢ.

29 ವರ್ಷದ ಮಹಾಲಕ್ಷ್ಮಿ ಮೃತದೇಹ ಪೀಸ್ ಪೀಸ್ ಆಗಿ ಪತ್ತೆಯಾಗಿದ್ದ ಕೇಸ್ ತನಿಖೆ ಚುರುಕುಗೊಂಡಿದೆ. ಅನುಮಾನಸ್ಪದ ವ್ಯಕ್ತಿಗಳನ್ನ ಖಾಕಿ ಪಡೆ ಒಬ್ಬಬ್ಬರಾಗಿ ವಿಚಾರಣೆ ಮಾಡ್ತಿದೆ. ಸಿಕ್ಕಿರೋ ಸಾಕ್ಷಿಗಳನ್ನ ಆಧರಿಸಿ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸ್ತಿದ್ದಾರೆ. ಆದರೆ ಕೊಲೆಗಾರ ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿರೋ ಹೊತ್ತಲ್ಲೇ ಹಂತಕನ ಸುಳಿವು ಪತ್ತೆಯಾಗಿದೆ ಅಂತ ಖುದ್ದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಇಂದೆಂದೂ ಕಂಡರಿಯದ ಘೋರ ಸೃಷ್ಟಿಸಿದ್ದವನ ಸುಳಿವು ಸಿಕ್ಕಿದೆ. ಪೊಲೀಸರು ಹಗಲು ರಾತ್ರಿ ಶ್ರಮಕ್ಕೆ ಫಲ‌ ಸಿಕ್ತಿದೆ. ಆದ್ರೆ ಕಮಿಷನರ್ ಹೇಳಿದಂತೆ ಹೊರರಾಜ್ಯದವನಾಗಿರೋ ಬೆಂಗಳೂರಿನಲ್ಲೇ ವಾಸವಿದ್ದ ಆ ಆರೋಪಿ ಯಾರು ಅನ್ನೊದೇ ಯಕ್ಷ ಪ್ರಶ್ನೆ. ಸದ್ಯ ಈತನ ಜಾಡು ಹಿಡಿದು ಹೊರರಾಜ್ಯಕ್ಕೆ ಹೋಗಿರೋ ಖಾಕಿ ಪಡೆಗೆ ಆರೋಪಿ ಹುಡುಕಾಟ ಸವಾಲಾಗಿದೆ.

ಇದನ್ನೂ ಓದಿ: FSL​ ತಜ್ಞರಿಗೆ ತಲೆನೋವಾದ ಬೆಂಗಳೂರು ಮಹಾಲಕ್ಷ್ಮೀ ಕೊಲೆ, ಪತ್ತೆಯಾಗದ ರಕ್ತದ ಕಲೆ!

ಮನೆಯೊಳಗೆ ರಕ್ತದ ಗುರುತಿಲ್ಲ.. ಹಂತಕನ ಆಟವೇ ರೋಚಕ

ಮನೆಯಲ್ಲಿದ್ದ ಫ್ರಿಡ್ಜ್ ನಲ್ಲಿ ಮಹಾಲಕ್ಷ್ಮಿ ದೇಹದ 50ಕ್ಕೂ ಹೆಚ್ಚು ಪೀಸ್ ಗಳು ಪತ್ತೆಯಾಗಿದ್ವು. ಆದ್ರೆ ಮಹಾಲಕ್ಷ್ಮಿ ದೇಹವನ್ನ ತುಂಡರಿಸಿದ್ದ ಪಾಪಿ ಮನೆಯಲ್ಲಿ ಸಾಕ್ಷಿಗಳನ್ನ ಅಳಿಸೋಕೆ ಪ್ರಯತ್ನಿಸಿರೋ ವಿಚಾರ ಬಯಲಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಮನೆಯಲ್ಲೆಲ್ಲೂ ರಕ್ತದ ಕಲೆಗಳು ಪತ್ತೆಯಾಗಿಲ್ಲ. ಹೌದು ಕೊಲೆ ನಡೆದ ಸ್ಥಳದಲ್ಲಿ FSL ಟೀಂ ಇಂಚಿಂಚೂ ಶೋಧ ನಡೆಸಿತ್ತು.‌ ಆದರೆ ಫ್ರಿಡ್ಜ್ ನಿಂದ ತೊಟ್ಟಿಕ್ಕಿರೋ ರಕ್ತ ಬಿಟ್ರೆ ಮನೆಯಲ್ಲಿ ರಕ್ತದ ಕಲೆಗಳಿಲ್ಲ. ಲುಮಿನಲ್ ಟೆಸ್ಟ್ ಮಾಡಿದ್ರು ಮನೆಯ ಫ್ಲೋರ್ ಗಳಲ್ಲಿ ರಕ್ತದ ಗುರುತು ಪತ್ತೆಯಾಗಿಲ್ಲ. ಯಾವುದೋ‌ ಕೆಮಿಕಲ್ ಉಪಯೋಗಿಸಿ ಇಡೀ ಮನೆಯನ್ನ ಹಂತಕ ಸ್ವಚ್ಚ ಮಾಡಿದ್ದಾನೆ ಅನ್ನೋ ದಟ್ಟ ಅನುಮಾನ ಕಾಡ್ತಿದೆ.

ಇನ್ನ ಅಶ್ರಫ್ ಎಂಬಾತನ‌ ಮೇಲೆ ಮಹಾಲಕ್ಷ್ಮಿ ಪತಿ ಹೇಮಂತ್ ಅನುಮಾನ ವ್ಯಕ್ತಪಡಿಸಿದ್ರು. ಸದ್ಯ ಈ ಆರೋಪಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಕೊಲೆಯಲ್ಲಿ ಈತನ ಪಾತ್ರ ಇಲ್ಲ‌ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೆ ಪೊಲೀಸರಿಗೆ ಮನೆಯಲ್ಲಿ ಮಹಾಲಕ್ಷ್ಮಿ ಮೊಬೈಲ್ ಸಿಕ್ಕಿದ್ದು, ಪೊಲೀಸರು ಈ ಮೊಬೈಲ್ ನಲ್ಲಿ ಇರೋ ಸಾಕ್ಷಿಗಳ ಪರಿಶೀಲನೆ ನಡೆಸ್ತಿದ್ದಾರೆ. ಹೀಗೆ ಒಂದು ಕಡೆ ಪೊಲೀಸರು ತನಿಖೆ ಚುರುಕುಗೊಳಿಸಿದ್ರೆ ಮತ್ತೊಂದು ಕಡೆ ಮೃತ ಮಹಾಲಕ್ಷ್ಮಿ ಕುಟುಂಬಸ್ಥರ ಕನಸಲ್ಲಿ ಬರ್ತಿದ್ದಾಳಂತೆ. ಸದ್ಯ ಮಹಾಲಕ್ಷ್ಮಿ ಅಸ್ತಿ ಸಂಗ್ರಹಿರೋ ಪತಿ ಹೇಮಂತ್ ದಾಸ್ ಆಕೆಯ ಮುಕ್ತಿಗೆ ರಾಮೇಶ್ವರಂಗೆ ತೆರಳಿದ್ದು ಅಲ್ಲಿಯೇ ಅಸ್ತಿ ವಿಸರ್ಜನೆ ಮಾಡ್ತಿದ್ದಾರೆ.

ಇಡೀ ದೇಶವನ್ನೇ ಬೆಚ್ಚಿಬೀಳಿಸಿರೋ ಮಹಾಲಕ್ಷ್ಮಿ ಕೊಲೆ ಕೇಸ್ ರೋಚಕ ಘಟ್ಟ ತಲುಪಿದೆ. ಖಾಕಿ ಪಡೆ ಹಂತಕನ ಸುಳಿವು ಹಿಡಿದು ಹುಡುಕಾಟ ನಡೆಸ್ತಿದ್ದು, ಭೀಭತ್ಸ ಹತ್ಯೆ ಹಿಂದಿರೋ ಕಾರಣ ಬಯಲಾಗೋ ದಿನಗಳು ದೂರವಿಲ್ಲ.

ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:53 am, Tue, 24 September 24

ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?