ಕೊವಿಡ್​ ಪರಿಕರ ಖರೀದಿಯಲ್ಲಿ ಭಾರೀ ಅವ್ಯವಹಾರ -ಸಿದ್ದರಾಮಯ್ಯ ಸುದ್ದಿಗೋಷ್ಠಿ

ಕೊವಿಡ್​ ಪರಿಕರ ಖರೀದಿಯಲ್ಲಿ ಭಾರೀ ಅವ್ಯವಹಾರ -ಸಿದ್ದರಾಮಯ್ಯ ಸುದ್ದಿಗೋಷ್ಠಿ

ಬೆಂಗಳೂರು: ಕೊರೊನಾ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಇಂದು ಕಾಂಗ್ರೆಸ್ ನಾಯಕರಿಂದ ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ವಿಪಕ್ಷನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಾಗುತ್ತಿದೆ. ಸುದ್ದಿಗೋಷ್ಠಿ ಪ್ರಾರಂಭಿಸಿದ ಮಾಹಿ ಸಿಎಂ ಸಿದ್ದರಾಮಯ್ಯ ಅವ್ಯವಹಾರ ಆಗಿದೆ ಎಂದು ಈ ಹಿಂದೆಯೇ ನಾನು ಹೇಳಿದ್ದೆ. ನಮ್ಮ ಆರೋಪಕ್ಕೆ ಸರ್ಕಾರದವರು ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸುಮಾರು ದಿನಗಳ ಬಳಿಕ ಸಚಿವರು ಸುದ್ದಿಗೋಷ್ಠಿ ನಡೆಸಿದ್ರು. ಕಾಂಗ್ರೆಸ್‌ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ಜೊತೆಗೆ, ಆರೋಪ ಸಾಬೀತುಪಡಿಸಿದ್ರೆ […]

KUSHAL V

| Edited By:

Jul 24, 2020 | 6:48 PM

ಬೆಂಗಳೂರು: ಕೊರೊನಾ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಇಂದು ಕಾಂಗ್ರೆಸ್ ನಾಯಕರಿಂದ ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ವಿಪಕ್ಷನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಾಗುತ್ತಿದೆ.

ಸುದ್ದಿಗೋಷ್ಠಿ ಪ್ರಾರಂಭಿಸಿದ ಮಾಹಿ ಸಿಎಂ ಸಿದ್ದರಾಮಯ್ಯ ಅವ್ಯವಹಾರ ಆಗಿದೆ ಎಂದು ಈ ಹಿಂದೆಯೇ ನಾನು ಹೇಳಿದ್ದೆ. ನಮ್ಮ ಆರೋಪಕ್ಕೆ ಸರ್ಕಾರದವರು ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸುಮಾರು ದಿನಗಳ ಬಳಿಕ ಸಚಿವರು ಸುದ್ದಿಗೋಷ್ಠಿ ನಡೆಸಿದ್ರು. ಕಾಂಗ್ರೆಸ್‌ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ಜೊತೆಗೆ, ಆರೋಪ ಸಾಬೀತುಪಡಿಸಿದ್ರೆ ರಾಜೀನಾಮೆ ನೀಡುವುದಾಗಿ ಸಚಿವ ಶ್ರೀರಾಮುಲು ಹೇಳಿದ್ರು.

ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಯಡಿಯೂರಪ್ಪ ದಾಖಲೆ ಕೇಳಿದ್ರೆ 24 ಗಂಟೆಯಲ್ಲಿ ಕೊಡುತ್ತೇನೆ ಎಂದಿದ್ದರು. ಆದರೆ, ಸಿಎಂ ಮತ್ತು ಅಧಿಕಾರಿಗಳಿಗೆ ನಾನು ಒಟ್ಟು 20 ಪತ್ರ ಬರೆದಿದ್ದೇನೆ. ನನ್ನ ಆರೋಪಕ್ಕೆ ಅಲ್ಪಸ್ವಲ್ಪ ಉತ್ತರ ಮಾತ್ರ ಕೊಟ್ಟಿದ್ದಾರೆ. ಆದರೆ, 1 ತಿಂಗಳ ಹಿಂದೆ ಪತ್ರ ಬರೆದರೂ ಸೂಕ್ತ ಉತ್ತರ ನೀಡಿಲ್ಲ. ಸಿಎಂ, ಸರ್ಕಾರ ಏಕೆ ಸೂಕ್ತ ಉತ್ತರ ನೀಡಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯನ್ನ ಲೈವ್​ ಆಗಿ ವೀಕ್ಷಿಸಿ: https://www.youtube.com/watch?v=jdJoOhqCipA

‘ನಿಮಗೆ ಪ್ರಾಮಾಣಿಕತೆಯಿದ್ರೆ ಜನರಿಗೆ ಉತ್ತರ ನೀಡಬೇಕಿತ್ತು’ ನಿಮಗೆ ಪ್ರಾಮಾಣಿಕತೆಯಿದ್ರೆ ಜನರಿಗೆ ಉತ್ತರ ನೀಡಬೇಕಿತ್ತು. ಜನರಿಗೆ ಲೆಕ್ಕ ಒಪ್ಪಿಸುವುದು ಸರ್ಕಾರದ ಜವಾಬ್ದಾರಿ. ನಾವು ಬಹಿರಂಗವಾಗಿ ಪತ್ರ ಬರೆದರೂ ಸೂಕ್ತ ಪ್ರತಿಕ್ರಿಯೆ ನೀಡಲ್ಲ. ಜೊತೆಗೆ, ನಾವೇ ದಾಖಲೆ ಸಂಗ್ರಹಿಸಿ ಕೇಳಿದ್ರೂ ಸುಳ್ಳು ಎನ್ನುತ್ತೀರಿ. ಜೊತೆಗೆ, ಕೊರೊನಾದಿಂದ ಜನ ಸಂಕಷ್ಟದಲ್ಲಿದ್ರೂ ರಾಜಕೀಯ ಮಾಡುತ್ತಿದ್ದೀರಾ ಎಂಬ ಆರೋಪವನ್ನ ನಮ್ಮ ಮೇಲೆ ಹೊರಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜನರ ಜೀವ ಉಳಿಸಲು ಮಾತ್ರ ನಮ್ಮ ಬೆಂಬಲವಿದೆ. ಕೊವಿಡ್ ಹೆಸರಿನಲ್ಲಿ ಸರ್ಕಾರ ಲೂಟಿ ಮಾಡಲು ಹೊರಟಿದೆ. ಇದಕ್ಕೆ ನಾವು ಸಹಕಾರ ನೀಡಬೇಕಾ ಎಂದು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ಜನದ್ರೋಹಿ ಕೆಲಸ ಮಾಡುತ್ತಿದೆ. ಇದನ್ನು ನಾವು ಬಹಿರಂಗ ಮಾಡದಿದ್ರೆ ಜನರಿಗೆ ಮೋಸ ಮಾಡಿದಂತೆ ಆಗುತ್ತೆ ಎಂದು ಹೇಳಿದ್ದಾರೆ.

‘ಕೋ‌-ಆಪರೇಟ್ ಮಾಡಿ ಅಂತೀರಲ್ಲ.. ಚುನಾಯಿತ ಸರ್ಕಾರ ಆಡುವಂಥ ಮಾತಾ ಇದು?’ ಡಿಸಿಎಂ ಅಶ್ವತ್ಥ್​ ನಾರಾಯಣ ಮತ್ತು ಸಚಿವ ಶ್ರೀರಾಮುಲು 324 ಕೋಟಿ ರೂ. ಖರ್ಚಾಗಿದೆ ಅಂತಾರೆ. ಇನ್ನೊಬ್ಬ ಮಂತ್ರಿ 33 ಕೋಟಿ ರೂ. ಖರ್ಚು ಮಾಡಿದ್ದೀವಿ ಅಂತಾರೆ. ಆದರೆ, ಆರೋಗ್ಯ ಇಲಾಖೆ 700 ಕೋಟಿ ರೂಪಾಯಿ ಖರ್ಚು ಮಾಡಿದೆ. ಬಿಬಿಎಂಪಿ 200 ಕೋಟಿ ರೂಪಾಯಿ ಖರ್ಚು ಮಾಡಿದೆ. ಜಿಲ್ಲಾಡಳಿತ 700 ಕೋಟಿ ಮತ್ತು ಕಾರ್ಮಿಕ ಇಲಾಖೆ 1100 ಕೋಟಿ ಖರ್ಚು ತೋರಿಸಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ₹815 ಕೋಟಿ ಖರ್ಚು ಮಾಡಿದೆ. ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಸಮಿತಿ ₹1000 ಕೋಟಿ ಮಾಡಿದೆ. ಮಹಿಳಾ&ಮಕ್ಕಳ ಕಲ್ಯಾಣ ಇಲಾಖೆ 500 ಕೋಟಿ ಅಂತಾರೆ. ಕೊವಿಡ್​ ಕೇರ್​ ಸೆಂಟರ್​ ಹಾಸಿಗೆಗಳಿಗೆ 160 ಕೋಟಿ ರೂ ಅಂತಾರೆ. ಒಟ್ಟು 4,167 ಕೋಟಿ ರೂ. ಖರ್ಚು ಮಾಡಿರುವ ಲೆಕ್ಕ ಇದೆ.

ಮಾರುಕಟ್ಟೆ ದರಕ್ಕಿಂತ 2-3 ಪಟ್ಟು ಹೆಚ್ಚು ನೀಡಿ ಖರೀದಿ ಮಾಡಿದ್ದಾರೆ. 2,000 ಕೋಟಿ ರೂಪಾಯಿ ಸಚಿವರು ಮತ್ತು ಅಧಿಕಾರಿಗಳ ಜೇಬಿಗೆ ಹೋಗಿದೆ ಎಂದು ನಾನು ನೇರವಾಗಿ ಆರೋಪ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈಗ ಹೇಳಿ ಸುಳ್ಳು ಹೇಳಿದ್ದು ಯಾರು ಹಾಗಾದ್ರೆ? . ಸಿದ್ದರಾಮಯ್ಯನಾ, ರಾಮುಲುನಾ, ಅಶ್ವತ್ಥ್​ ನಾರಾಯಣನಾ? ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವುದು ನಾನಲ್ಲ, ನೀವು. ಎಲ್ಲ ಫೈಲ್​ಗಳು ನಿಮ್ಮ ಬಳಿಯೇ ಇದೆ. ಇಷ್ಟೆಲ್ಲ ಖರ್ಚು ಮಾಡಿ ಏನು ಕಡಿದು ಕಟ್ಟೆ ಹಾಕ್ತಿದ್ದೀರಿ. ಕೋ-ಆಪರೇಟ್ ಮಾಡಿ ಕೋ-‌ಆಪರೇಟ್ ಮಾಡಿ ಅಂತೀರಲ್ಲ. ಚುನಾಯಿತ ಸರ್ಕಾರ ಆಡುವಂಥ ಮಾತಾ ಇದು ಎಂದು ಸರ್ಕಾರವನ್ನ ಕಟುವಾಗಿ ಟೀಕಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada