Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯಲ್ಲಿ ಸ್ಫೋಟಕ ಬೆಳವಣಿಗೆ: ಶಿವಮೊಗ್ಗದಲ್ಲಿ ರಾಘವೇಂದ್ರ ವಿರುದ್ಧವೇ ತೊಡೆ ತಟ್ಟುತ್ತಾರಾ ಈಶ್ವರಪ್ಪ?

ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಟಿಕೆಟ್ ಹಂಚಿಕೆಯ ಸರ್ಕಸ್ ಜೋರಾಗಿದೆ. ಇತ್ತ ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಪುತ್ರನಿಗೆ ಹಾವೇರಿ ಲೋಕಸಭೆ ಟಿಕೆಟ್ ನೀಡುವಂತೆ ಹೈಕಮಾಂಡ್​ ಬಳಿ ಬೇಡಿಕೆ ಇಟ್ಟಿದ್ದರು. ಸದ್ಯದ ಮಾಹಿತಿ ಪ್ರಕಾರ, ಈಶ್ವರಪ್ಪ ಪುತ್ರ ಕಾಂತೇಶ್​ಗೆ ಹಾವೇರಿ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಈಗ ಈಶ್ವರಪ್ಪ, ಶಿವಮೊಗ್ಗದಲ್ಲೇ ಬಿಎಸ್​ವೈ ಪುತ್ರ ರಾಘವೇಂದ್ರ ವಿರುದ್ಧ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಅವರೇ ಪರೋಕ್ಷ ಸುಳಿವು ಸಹ ಕೊಟ್ಟಿದ್ದಾರೆ.

ಬಿಜೆಪಿಯಲ್ಲಿ ಸ್ಫೋಟಕ ಬೆಳವಣಿಗೆ: ಶಿವಮೊಗ್ಗದಲ್ಲಿ ರಾಘವೇಂದ್ರ ವಿರುದ್ಧವೇ ತೊಡೆ ತಟ್ಟುತ್ತಾರಾ ಈಶ್ವರಪ್ಪ?
ಕೆಎಸ್​ ಈಶ್ವರಪ್ಪ
Follow us
ರಮೇಶ್ ಬಿ. ಜವಳಗೇರಾ
|

Updated on: Mar 13, 2024 | 2:26 PM

ಶಿವಮೊಗ್ಗ (ಮಾ.13): ಹಾವೇರಿ ಲೋಕಸಭಾ ಕ್ಷೇತ್ರದ(Haveri Loksabha)  ಟಿಕೆಟ್​ಅನ್ನು ಪುತ್ರ ಕಾಂತೇಶ್(Kantesh)  ಗೆ ಕೊಡಿಸಬೇಕೆಂದು ಮಾಜಿ ಸಚಿವ ಈಶ್ವರಪ್ಪ(KS Eshwarappa) ಕಸರತ್ತು ನಡೆಸಿದ್ದಾರೆ. ಆದ್ರೆ, ಬಿಜೆಪಿ(BJP) ಹೈಕಮಾಂಡ್​ ಹಾವೇರಿ ಟಿಕೆಟ್​ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಕೊಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಇದೇ ವಿಚಾರಕ್ಕೆ ಈಶ್ವರಪ್ಪ ಅವರು ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ನಾಯಕರ ಮೇಲೆ ಮುನಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಹಾವೇರಿಯಲ್ಲಿ ಪುತ್ರನಿಗೆ ಟಿಕೆಟ್ ಕೈತಪ್ಪಿದ್ರೆ, ಖುದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಈಶ್ವರಪ್ಪ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರೇ ಪರೋಕ್ಷ ಸುಳಿವು ಸಹ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇಂದು(ಮಾರ್ಚ್ 13) ಈಶ್ವರಪ್ಪ ಶಿವಮೊಗ್ಗದಲ್ಲಿ ರಾಷ್ಟ್ರ ಭಕ್ತರ ಬಳಗದ ಹೆಸರಿನಲ್ಲಿ ಸಭೆ ನಡೆಸಿದ್ದು, ಈ ವೇಳೆ ಅವರ ಬೆಂಬಲಿಗರು ಬಂಡಾಯ ಸ್ಫರ್ಧೆ ಬಗ್ಗೆ ಒತ್ತಾಯಿಸುತ್ತಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ, ನನ್ನ ಬೆಂಬಲಿಗರು ನನ್ನ ಬಂಡಾಯ ಸ್ಪರ್ಧೆಗೆ ಒತ್ತಡ ಹೇಳುತ್ತಿದ್ದಾರೆ. ನಾಡಿದ್ದು ನನ್ನ ಬೆಂಬಲಿಗರು ಸಭೆ ಕರೆದಿದ್ದಾರೆ. ನನ್ನ ಬೆಂಬಲಿಗರ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ನನಗೆ ಅನ್ಯಾಯ ಆಗಿದೆ ಎಂದು ನಿಮಗೂ ಅನಿಸಿದೆ. ನಾಲ್ಕು ಗೋಡೆಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಬಿಜೆಪಿ ಸಂಪ್ರದಾಯ. ಏನಾಗಿದೆ ?ಏನು ಬಿಟ್ಟಿದೆ ಎಂದು ಕಾದು ನೋಡಿ. ಪ್ರಹ್ಲಾದ್ ಜೋಶಿ ನನ್ನ ಆತ್ಮೀಯ ಸ್ನೇಹಿತ. ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದಾಗ ಆತ ಪ್ರಧಾನ ಕಾರ್ಯದರ್ಶಿ. ಬಂಡಾಯ ಸ್ಪರ್ಧೆಯ ಬಗ್ಗೆ ಚರ್ಚೆ ಆಗಿರುವುದು ಹೌದು. ನಾನು ಬಿಜೆಪಿಯಲ್ಲಿ ಸೀನಿಯರ್ ಮೋಸ್ಟ್ ಎನ್ನುವುದು ಹೌದು. ನಾನು ಏನು ಕ್ರಮ ತೆಗೆದುಕೊಳ್ಳಬೇಕು ಎಂಬುವುದರ ಬಗ್ಗೆ ನನ್ನ ಹಿತೈಷಿಗಳು ಚರ್ಚೆ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Lok Sabha Election 2024: 3 ಮಾಜಿ ಸಿಎಂ ಸ್ಪರ್ಧೆ ಬಗ್ಗೆ ಚರ್ಚೆ, ಸದಾನಂದ ಗೌಡರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ; ಆರ್​ ಅಶೋಕ್​

ಕಳೆದ ಚುನಾವಣೆಯಲ್ಲಿ ಸ್ಪರ್ಧೆ ಬೇಡ ಎಂದಾಗ ನಾನು ಒಪ್ಪಿಕೊಂಡಿದ್ದೆ. ಅಂದು ಪಕ್ಷದ ವರಿಷ್ಠರು ಫೋನ್ ಮಾಡಿದಾಗ ಒಪ್ಪಿಕೊಂಡಿದ್ದೆ. ಬರೀ ಕುತೂಹಲ ಅಲ್ಲ ಇದು ನಮ್ಮ ಕರ್ನಾಟಕ ರಾಜ್ಯದ ಭವಿಷ್ಯ. ಈ ಪಕ್ಷ ಸರಿಯಾಗಿ ಹೋಗಬೇಕು ಎಂದು ಎಲ್ಲರೂ ನನಗೆ ಕರೆ ಮಾಡುತ್ತಿದ್ದಾರೆ. ನಾನೊಬ್ಬ ಎಂಪಿ ಆಗಬೇಕು ಎಂಬುದಷ್ಟೇ ಅಲ್ಲ ಈ ಪಕ್ಷ ಉಳಿಯಬೇಕು. ಎಲ್ಲಾ ಹಿತೈಷಿಗಳು ನಿಮಗೆ ಅನ್ಯಾಯವಾಗಿದೆ ಎಂದು ಫೋನ್ ಮಾಡುತ್ತಿದ್ದಾರೆ. ಎಲ್ಲರ ಜೊತೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ. ನಾನು ಎಂಪಿ ಆಗಬೇಕು ಎಂಬುದು ನನ್ನ ಆಸೆ ಅಲ್ಲ. ಮೊನ್ನೆ ವಿಧಾನಸಭಾ ಚುನಾವಣೆಯಲ್ಲಿ ಸೋತು 66 ಸ್ಥಾನಗಳನ್ನು ಪಡೆದಿದ್ದೆವು. ಹಲವು ತಪ್ಪುಗಳು ನಡೆದಿದ್ದವು. ಈ ತಪ್ಪುಗಳು ಸರಿಯಾಗಬೇಕೆಂದು ಹಲವರು ಹೇಳುತ್ತಿದ್ದಾರೆ. ನಾನು ಯಾವುದೇ ತೀರ್ಮಾನ ಇದುವರೆಗೂ ಕೈಗೊಂಡಿಲ್ಲ. ಯಾವುದೇ ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ ನನ್ನ ಮನಸ್ಸಿಗೆ ಬಂದಿದ್ದನ್ನು ನಿಮ್ಮ ಎದುರು ಹೇಳಿದ್ದೇನೆ. ಪಕ್ಷದಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸುವ ಚಿಂತನೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದಲ್ಲಿ ಸಾಕಷ್ಟು ತಪ್ಪುಗಳಾಗಿದೆ ಎಂದು ಒಪ್ಪಿಕೊಂಡಿದ್ದೇವೆ. ಈ ಎಲ್ಲಾ ತಪ್ಪುಗಳು ಸರಿ ಹೋಗಬೇಕೆಂಬುದು ನಮ್ಮ ಅಪೇಕ್ಷೆ. ನನ್ನ ಕಾರ್ಯಕರ್ತರು ಹಿತೈಷಿಗಳು ಪಕ್ಷದಲ್ಲಿನ ವ್ಯತ್ಯಾಸಗಳು ಸರಿ ಹೋಗಬೇಕು ಎಂಬುದಕ್ಕಾಗಿ ಸಭೆ ನಡೆಸಿದ್ದಾರೆ ಎಂದು ಹೇಳಿದರು.

ಟಿಕೆಟ್​ ಕೈತಪ್ಪಿದ್ರೆ ಬಂಡಾಯ ಫಿಕ್ಸ್?

ಈಶ್ವರಪ್ಪನವರ ಈ ಮಾತುಗಳನ್ನು ಗಮನಿಸಿದರೆ ಒಂದು ವೇಳೆ ಪುತ್ರನಿಗೆ ಹಾವೇರಿ ಟಿಕೆಟ್ ಸಿಗದಿದ್ದರೆ ಬಂಡಾಯ ಎದ್ದೇಳುವುದು ನಿಶ್ವಿತ ಎನ್ನಿಸುತ್ತಿದೆ. ಅದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧವೇ ಶಿವಮೊಗ್ಗದಲ್ಲಿ ಬಂಡಾಯ ಸ್ಪರ್ಧೆಗೆ ತೆರೆಮರೆಯ ಸಿದ್ಧತೆ ನಡೆಸುತ್ತಿರುವುದು ಸ್ಪಷ್ಟವಾಗಿದೆ.

ಚುನಾವಣಾ ಕಣಕ್ಳಿಯುವ ಸಂಬಂಧ ಶಿವಮೊಗ್ಗದಲ್ಲಿ ರಾಷ್ಟ್ರ ಭಕ್ತರ ಬಳಗದ ಹೆಸರಿನಲ್ಲಿ ಸಭೆ ಕರೆದ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಬೆಂಬಲಿಗರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆ. ಮಾರ್ಚ್ 18ರ ರಂದು ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೂ ಮೊದಲು ಈಶ್ವರಪ್ಪ ಬಂಡಾಯ ಸ್ಪರ್ಧೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಈ ಬಗ್ಗೆ ಶುಕ್ರವಾರ ಮತ್ತೆ ನಡೆಸಲಿದ್ದು, ಈ ಸಭೆಯ ಮೇಲೆ ಸಂಸದ ಬಿ ವೈ ರಾಘವೇಂದ್ರ ಚುನಾವಣಾ ಭವಿಷ್ಯ ನಿಂತಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ