ರಸ್ತೆಯಲ್ಲಿ ಹೋಗುವ ಕುಡುಕನ ಮಾತಿನಂತಿದೆ ಸಿದ್ದರಾಮಯ್ಯನವರ ಮಾತು; ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ರಸ್ತೆಯಲ್ಲಿ ಹೋಗುವ ಕುಡುಕನ ಮಾತಿನಂತಿದೆ ಸಿದ್ದರಾಮಯ್ಯನವರ ಮಾತು; ಕೆ.ಎಸ್.ಈಶ್ವರಪ್ಪ ವಾಗ್ದಾಳಿ
ಸಚಿವ ಕೆ.ಎಸ್. ಈಶ್ವರಪ್ಪ

ವಿಪಕ್ಷಗಳು ಇರುವುದೇ ಟೀಕೆಗೆ ನಾವು ಸ್ವಾಗತ ಮಾಡುತ್ತೇವೆ. ವಿಪಕ್ಷಗಳ ಟೀಕೆ ಸರಿಯಿದ್ದರೆ ನಾವು ತಿದ್ದಿಕೊಳ್ಳುತ್ತೇವೆ. ಎಲ್ಲದಕ್ಕೂ ವಿರೋಧ ಮಾಡಿದರೆ ವಿಪಕ್ಷ ಅಂತಾ ಅವರು ಅಂದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ ಸಚಿವರು ಕರ್ನಾಟಕದಲ್ಲಿ ಕೊವಿಡ್ ಪರಿಸ್ಥಿತಿ ಮಿತಿ ಮೀರಿದೆ. ರಾಜ್ಯಪಾಲರೇ ಕೊರೊನಾ ತಡೆಗೆ ಮುಂದಾಗಿದ್ದಾರೆ.

sandhya thejappa

|

Apr 20, 2021 | 12:02 PM

ಶಿವಮೊಗ್ಗ: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಲೆಕೆಟ್ಟು ಹನ್ನೆರಡು ಆಣೆಯಾಗಿದೆ ಎಂದು ಮಾತನಾಡಿದ ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬಳಿಕ ಈವರೆಗೆ ಜೀವಂತವಾಗಿದ್ದೇನೆ. ವಿಪಕ್ಷ ನಾಯಕನಾಗಿದ್ದೇನೆಂದು ಇಂತಹ ಟೀಕೆ ಮಾಡುತ್ತಾರೆ. ಸಿಎಂ ಯಡಿಯೂರಪ್ಪ ಕೊವಿಡ್ನಿಂದ ಆಸ್ಪತ್ರೆಯಲ್ಲಿದ್ದಾರೆ. ಅಲ್ಲಿದ್ದುಕೊಂಡೇ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲವನ್ನೂ ನಿರ್ಣಯಿಸುತ್ತಿದ್ದಾರೆ. ರಸ್ತೆಯಲ್ಲಿ ಹೋಗುವ ಕುಡುಕನ ಮಾತಿನಂತಿದೆ ಸಿದ್ದರಾಮಯ್ಯನವರ ಮಾತು. ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಆಗುವುದಕ್ಕೆ ಅಯೋಗ್ಯ. ಸಿದ್ದರಾಮಯ್ಯ ಅಯೋಗ್ಯ ಎಂದು ಜನರೇ ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ವಿಪಕ್ಷಗಳು ಇರುವುದೇ ಟೀಕೆಗೆ ನಾವು ಸ್ವಾಗತ ಮಾಡುತ್ತೇವೆ. ವಿಪಕ್ಷಗಳ ಟೀಕೆ ಸರಿಯಿದ್ದರೆ ನಾವು ತಿದ್ದಿಕೊಳ್ಳುತ್ತೇವೆ. ಎಲ್ಲದಕ್ಕೂ ವಿರೋಧ ಮಾಡಿದರೆ ವಿಪಕ್ಷ ಅಂತಾ ಅವರು ಅಂದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ ಸಚಿವರು ಕರ್ನಾಟಕದಲ್ಲಿ ಕೊವಿಡ್ ಪರಿಸ್ಥಿತಿ ಮಿತಿ ಮೀರಿದೆ. ರಾಜ್ಯಪಾಲರೇ ಕೊರೊನಾ ತಡೆಗೆ ಮುಂದಾಗಿದ್ದಾರೆ. ರಾಜ್ಯಪಾಲರು ಮುಂದಾಗಿರುವುದು ಅಚ್ಚರಿ ಅನಿಸುತ್ತಿದೆ. ರಾಜ್ಯಪಾಲರು ಸಭೆ ಕರೆದಿರುವುದು ಒಳ್ಳೆಯದು. ಆದರೆ ಹೊಸ ವ್ಯವಸ್ಥೆ ಆಯಿತೆಂದು ನನಗೆ ಅನಿಸುತ್ತಿದೆ ಎಂದಿದ್ದಾರೆ.

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಸ್ಪೋಟ ಹಿನ್ನೆಲೆ ರಾಜ್ಯದಲ್ಲಿ ತಾಲೂಕು ಪಂಚಾಯತಿ ಹಾಗು ಜಿಲ್ಲಾ ಪಂಚಾಯತಿ ಚುನಾವಣೆ ನಡೆಸುವುದಿಲ್ಲ. ಮೂರೂವರೆ ಕೋಟಿ ಮತದಾರರು ಅದರಲ್ಲಿ ಭಾಗವಹಿಸುತ್ತಾರೆ. ಈ ವಿಷಯ ಕ್ಯಾಬಿನೆಟ್ನಲ್ಲಿಟ್ಟು ತೀರ್ಮಾನ ಮಾಡಿ, ಚುನಾವಣೆ ಆಯೋಗಕ್ಕೆ ತಿಳಿಸಲಾಗುವುದು. ಚುನಾವಣೆ ಮಾಡಬಾರದು ಎಂದು ಈಗಾಗಲೇ ಚುನಾವಣೆ ಆಯೋಗ ಕ್ಕೆ ಮನವಿ ಕೂಡಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

ಮೈಸೂರಿನಲ್ಲಿ ಕುಡಿಯುವ ನೀರಿಗೆ ಕ್ರಿಮಿನಾಶಕ ಬೆರೆಸಿದ ಕಿಡಿಗೇಡಿಗಳು; ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಕೊರೊನಾ ಲಸಿಕೆ ಪಡೆದರೂ ಅನಾರೋಗ್ಯ.. ಗಂಟಲು ದ್ರವ ಪರೀಕ್ಷೆಗೆ ಕೊಟ್ಟು ಮನೆಗೆ ಬಂದ ವೃದ್ಧ ಕುಸಿದು ಬಿದ್ದು ಸಾವು

(KS Eshwarappa Slams on Siddaramaiah; Says his statements are like one who give after drink alcohol)

Follow us on

Related Stories

Most Read Stories

Click on your DTH Provider to Add TV9 Kannada