KSCCF Recruitment 2021: ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ, ವಿವರ ಇಲ್ಲಿದೆ

KSCCF Recruitment 2021: ಮಾರ್ಚ್ 5, 2021ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಏಪ್ರಿಲ್ 5ರ ವರೆಗೂ ಈ ಅವಕಾಶ ಇರಲಿದೆ. ಅಭ್ಯರ್ಥಿಗಳ ಅರ್ಹತೆ, ವಯೋಮಾನ ಮಿತಿ, ಅನುಭವ, ಇತ್ಯಾದಿಗಳನ್ನು ತಿಳಿಯಲು ಕೆಳಗಿನ ವಿವರ ಗಮನಿಸಬಹುದು.

KSCCF Recruitment 2021: ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ, ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Updated By: ganapathi bhat

Updated on: Apr 05, 2022 | 1:05 PM

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ (KSCCF) ಸಂಸ್ಥೆಯು ಅಕೌಂಟೆಂಟ್, ಪ್ರಥಮ ದರ್ಜೆ ಸಹಾಯಕ, ಸೇಲ್ಸ್ ಸಹಾಯಕ, ಟೈಪಿಸ್ಟ್, ಗುಮಾಸ್ತ ಮತ್ತು ಜೂನಿಯರ್ ಫಾರ್ಮಸಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಮೋಡ್ ಮುಖಾಂತರ ಏಪ್ರಿಲ್ 5, 2021ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಸುಮಾರು 45 ಸ್ಥಾನಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. recruitapp.in/ksccf2021 ಮೂಲಕ, ಆನ್​ಲೈನ್ ವಿಧಾನದಲ್ಲಿ ಆಸಕ್ತರು ಅರ್ಜಿ ಸಲ್ಲಿಸಬಹುದು.

ಮಾರ್ಚ್ 5, 2021ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಏಪ್ರಿಲ್ 5ರ ವರೆಗೂ ಈ ಅವಕಾಶ ಇರಲಿದೆ. ಅಭ್ಯರ್ಥಿಗಳ ಅರ್ಹತೆ, ವಯೋಮಾನ ಮಿತಿ, ಅನುಭವ, ಇತ್ಯಾದಿಗಳನ್ನು ತಿಳಿಯಲು ಕೆಳಗಿನ ವಿವರ ಗಮನಿಸಬಹುದು.

ಉದ್ಯೋಗಾವಕಾಶ ಸಾರಾಂಶ
ನೋಟಿಫಿಕೇಷನ್ ದಿನಾಂಕ: ಮಾರ್ಚ್ 8, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 5, 2021
ಸ್ಥಳ: ಬಾಗಲಕೋಟೆ
ಮಾರ್ಚ್ 5, 2021ರಿಂದ ಏಪ್ರಿಲ್ 5, 2021ರ ಒಳಗಾಗಿ ಅರ್ಜಿ ಸಲ್ಲಿಸಬಹುದು.

ಅವಕಾಶವಿರುವ ಹುದ್ದೆಗಳು:
ಅಕೌಂಟೆಂಟ್: 5 ಹುದ್ದೆಗಳು
ಪ್ರಥಮ ದರ್ಜೆ ಸಹಾಯಕ: 10 ಹುದ್ದೆಗಳು
ಸೇಲ್ಸ್ ಸಹಾಯಕ: 10 ಹುದ್ದೆಗಳು
ಟೈಪಿಸ್ಟ್: 8 ಹುದ್ದೆಗಳು
ಗುಮಾಸ್ತ: 10 ಹುದ್ದೆಗಳು
ಜೂನಿಯರ್ ಫಾರ್ಮಸಿಸ್ಟ್: 2 ಹುದ್ದೆಗಳು

ಕೆಲಸಕ್ಕೆ ಬೇಕಾಗುವ ಅರ್ಹತೆ ವಿವರಗಳು:
ಎಸ್​ಎಸ್​ಎಲ್​ಸಿ/ ಪಿಯುಸಿ/ ಪದವಿ ಅಥವಾ ಡಿಪ್ಲೊಮ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಕೆಲಸಕ್ಕಾಗಿ ಅರ್ಜಿ ಸಲ್ಲಿಸಬಹುದು. 18ರಿಂದ 35 ವರ್ಷದ ಒಳಗಿನ ಅಭ್ಯರ್ಥಿಗಳು ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ನಿಗದಿತ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಾನ ಮಿತಿಯಲ್ಲಿ ವ್ಯತ್ಯಾಸ ಇರುತ್ತದೆ.

ವಿವಿಧ ಹುದ್ದೆಗಳಿಗೆ ನೀಡುವ ಸಂಬಳ ಈ ರೀತಿ ಇದೆ:
KSCCF ಆಹ್ವಾನಿಸಿರುವ ಅಕೌಂಟೆಂಟ್ ಹುದ್ದೆಗೆ ಮಾಸಿಕ ₹ 19,000 ರಿಂದ ₹ 34,500
ಪ್ರಥಮ ದರ್ಜೆ ಸಹಾಯಕರಿಗೆ ₹ 13,600 ರಿಂದ ₹ 26,000
ಸೇಲ್ಸ್ ಅಸಿಸ್ಟೆಂಟ್ ಹಾಗೂ ಟೈಪಿಸ್ಟ್ ಹುದ್ದೆಗೆ ₹ 12,500 ರಿಂದ ₹ 24,000
ಗುಮಾಸ್ತ ಹುದ್ದೆಗೆ ₹ 10,400 ರಿಂದ 16,400
ಜೂನಿಯರ್ ಫಾರ್ಮಸಿಸ್ಟ್ ಹುದ್ದೆಗೆ ₹ 14,550 ರಿಂದ 26,700 ವರೆಗೆ ವರೆಗೆ ಸಂಬಳ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು recruitapp.in/ksccf2021 ಮೂಲಕ ಅರ್ಜಿ ಸಲ್ಲಿಸಬಹುದು. ಆನ್​ಲೈನ್ ಅರ್ಜಿ ಸಲ್ಲಿಕೆ ಬಳಿಕ ಅಪ್ಲಿಕೇಷನ್​ನ ಪ್ರಿಂಟ್ ತೆಗೆದು ಇರಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: UPSC Recruitment 2021: ಯುಪಿಎಸ್​ಸಿಯಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ

ಇದನ್ನೂ ಓದಿ: Bank Holidays April 2021: ಏಪ್ರಿಲ್ ತಿಂಗಳಲ್ಲಿ ಸಾಲು ಸಾಲು ಬ್ಯಾಂಕ್ ರಜೆ; ಸಂಪೂರ್ಣ ವಿವರ ಗಮನಿಸಿ, ಕೆಲಸ ಸುಲಭವಾಗಿಸಿಕೊಳ್ಳಿ

Published On - 11:12 pm, Mon, 29 March 21