Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays April 2021: ಏಪ್ರಿಲ್ ತಿಂಗಳಲ್ಲಿ ಸಾಲು ಸಾಲು ಬ್ಯಾಂಕ್ ರಜೆ; ಸಂಪೂರ್ಣ ವಿವರ ಗಮನಿಸಿ, ಕೆಲಸ ಸುಲಭವಾಗಿಸಿಕೊಳ್ಳಿ

Karnataka Bank Holidays April 2021: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ವೆಬ್​ಸೈಟ್​ನ ಮಾಹಿತಿ ಪ್ರಕಾರ, ಏಪ್ರಿಲ್ 2021ರಲ್ಲಿ ವಿವಿಧ ಹಬ್ಬಗಳ ಕಾರಣಕ್ಕೆ ಬ್ಯಾಂಕ್ ರಜೆ ಇರುತ್ತದೆ. ರಾಮ ನವಮಿ, ಗುಡ್ ಫ್ರೈಡೇ, ಬಿಹು, ಬಾಬು ಜಗ್​ಜೀವನ್ ರಾಮ್ ಜನ್ಮದಿನ ಇತ್ಯಾದಿ ಆಚರಣೆಗಳು ಏಪ್ರಿಲ್​ನಲ್ಲಿದೆ.

Bank Holidays April 2021: ಏಪ್ರಿಲ್ ತಿಂಗಳಲ್ಲಿ ಸಾಲು ಸಾಲು ಬ್ಯಾಂಕ್ ರಜೆ; ಸಂಪೂರ್ಣ ವಿವರ ಗಮನಿಸಿ, ಕೆಲಸ ಸುಲಭವಾಗಿಸಿಕೊಳ್ಳಿ
ಬ್ಯಾಂಕ್ ರಜಾದಿನಗಳು
Follow us
TV9 Web
| Updated By: ganapathi bhat

Updated on:Apr 05, 2022 | 1:05 PM

ಬೆಂಗಳೂರು: ನೂತನ ಆರ್ಥಿಕ ವರ್ಷವು ಏಪ್ರಿಲ್ 1ರಿಂದ ಆರಂಭಗೊಳ್ಳಲಿದೆ. 2021-22ರ ಆರ್ಥಿಕ ವರ್ಷದ, ಏಪ್ರಿಲ್ ತಿಂಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್​ಗಳು ಒಟ್ಟು 15 ದಿನಗಳ ಕಾಲ ಕಾರ್ಯನಿರ್ವಹಿಸುವುದಿಲ್ಲ. ಇದರಲ್ಲಿ ವಿವಿಧ ರಜಾದಿನಗಳ ಕಾರಣದಿಂದ 9 ದಿನಗಳ ಕಾಲ ಬ್ಯಾಂಕ್​ಗಳು ಮುಚ್ಚಿರುತ್ತವೆ. ಈ ರಜಾದಿನದ ಹೊರತಾಗಿ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ್ ಬ್ಯಾಂಕ್ ರಜೆಯಲ್ಲಿರುತ್ತದೆ. ಹಾಗೂ ಭಾನುವಾರ ಬ್ಯಾಂಕ್ ರಜೆಯಾಗಿರುತ್ತದೆ. ಇವೆಲ್ಲವನ್ನೂ ಪರಿಗಣಿಸಿದರೆ, ಏಪ್ರಿಲ್​ನಲ್ಲಿ ಒಟ್ಟು 15 ದಿನಗಳ ಕಾಲ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ವೆಬ್​ಸೈಟ್​ನ ಮಾಹಿತಿ ಪ್ರಕಾರ, ಏಪ್ರಿಲ್ 2021ರಲ್ಲಿ ವಿವಿಧ ಹಬ್ಬಗಳ ಕಾರಣಕ್ಕೆ ಬ್ಯಾಂಕ್ ರಜೆ ಇರುತ್ತದೆ. ರಾಮ ನವಮಿ, ಗುಡ್ ಫ್ರೈಡೇ, ಬಿಹು, ಬಾಬು ಜಗ್​ಜೀವನ್ ರಾಮ್ ಜನ್ಮದಿನ ಇತ್ಯಾದಿ ಆಚರಣೆಗಳು ಏಪ್ರಿಲ್​ನಲ್ಲಿದೆ. ಆರ್ಥಿಕ ವರ್ಷಾರಂಭ ಏಪ್ರಿಲ್ ತಿಂಗಳಲ್ಲಿ ಆಗುವುದರಿಂದ ಏಪ್ರಿಲ್ 1ರಂದು ಮತ್ತು ಗುಡ್ ಫ್ರೈಡೇ ಕಾರಣ ಏಪ್ರಿಲ್ 2ರಂದು ಬ್ಯಾಂಕ್ ಮುಚ್ಚಿರುತ್ತದೆ. ಹಾಗಾಗಿ, ಏಪ್ರಿಲ್​ನ ಮೊದಲ ವರ್ಕಿಂಗ್ ಡೇ ಏಪ್ರಿಲ್ 3 ಆಗಿರಲಿದೆ.

ಏಪ್ರಿಲ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ: >> ಏಪ್ರಿಲ್ 1- ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ದಿನವಾದ ಕಾರಣ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್​ಗಳು ತೆರೆದಿರುವುದಿಲ್ಲ.

>> ಏಪ್ರಿಲ್ 2- ಐಜ್​ವಾಲ್, ಬೆಲಾಪುರ್, ಬೆಂಗಳೂರು, ಭೋಪಾಲ್, ಭುವನೇಶ್ವರ್, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್​ಟಕ್, ಹೈದರಾಬಾದ್, ಇಂಫಾನ್, ಕಾನ್ಪುರ್, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ್, ದೆಹಲಿ, ಪಣಜಿ, ಪಾಟ್ನಾ, ರಾಯ್​ಪುರ್​ನಲ್ಲಿ ಗುಡ್ ಫ್ರೈಡೇ ಆಚರಣೆಯ ಕಾರಣ ಈ ದಿನ ಬ್ಯಾಂಕ್ ಮುಚ್ಚಿರುತ್ತದೆ.

>> ಏಪ್ರಿಲ್ 5- ಬಾಬು ಜಗ್​ಜೀವನ್ ರಾಮ್ ಜನ್ಮದಿನದ ಅಂಗವಾಗಿ ಹೈದರಾಬಾದ್​ನಲ್ಲಿ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ.

>> ಏಪ್ರಿಲ್ 6- ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯುವುದರಿಂದ ರಾಜ್ಯಾದ್ಯಂತ ಖಾಸಗಿ, ಸರ್ಕಾರಿ ಬ್ಯಾಂಕ್​ಗಳು ರಜೆಯಾಗಿರುತ್ತದೆ.

>> ಏಪ್ರಿಲ್ 13- ಯುಗಾದಿ ಸಲುವಾಗಿ ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು ಮತ್ತು ಕಾಶ್ಮೀರ, ಮುಂಬೈ, ನಾಗ್ಪುರ್, ಪಣಜಿ ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆಯಾಗಿರುತ್ತದೆ.

>> ಏಪ್ರಿಲ್ 14- ಅಗರ್ತಲಾ, ಅಹಮದಾಬಾದ್, ಬೆಲಾಪುರ್, ಬೆಂಗಳೂರು, ಭುವನೇಶ್ವರ್, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಕ್, ಗುವಹಾಟಿ, ಹೈದರಾಬಾದ್, ಇಂಫಾಲ್​ನಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಸಲುವಾಗಿ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ. ವಿಶು ಅಥವಾ ತಮಿಳುನಾಡು ಹೊಸ ವರ್ಷದ ಕಾರಣ ಜೈಪುರ್, ಜಮ್ಮು, ಕಾನ್ಪುರ, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ಪಣಜಿ, ಪಾಟ್ನಾ, ರಾಂಚಿ, ಶ್ರೀನಗರ ಹಾಗೂ ತಿರುವನಂತಪುರದಲ್ಲಿ ಬ್ಯಾಂಕ್ ರಜೆ.

>> ಏಪ್ರಿಲ್ 15- ಅಗರ್ತಲಾ, ಗುವಹಾಟಿ, ಕೋಲ್ಕತ್ತಾ, ರಾಂಚಿ ಮತ್ತು ಶಿಮ್ಲಾದಲ್ಲಿ ಹಿಮಾಚಲ್ ದಿನ, ಬೆಂಗಾಲಿ ಹೊಸ ವರ್ಷಮ ಬೊಹಾಗ್ ಬಿಹು ಹಾಗೂ ಸಿರ್ಹುಲ್ ಪ್ರಯುಕ್ತ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ.

>> ಏಪ್ರಿಲ್ 16- ಬೊಹಾಗ್ ಬಿಹು ಎಂಬ ಹಬ್ಬದ ಪ್ರಯುಕ್ತ ಗುವಹಾಟಿಯಲ್ಲಿ ಬ್ಯಾಂಕ್ ರಜೆ.

>> ಏಪ್ರಿಲ್ 21- ಅಗರ್ತಲಾ, ಅಹಮದಾಬಾದ್, ಬೆಲಪುರ್, ಭೋಪಾಲ್, ಭುವನೇಶ್ವರ್, ಡೆಹ್ರಾಡೂನ್, ಗ್ಯಾಂಗ್ಟಕ್, ಹೈದರಾಬಾದ್, ಜೈಪುರ್, ಕಾನ್ಪುರ, ಲಕ್ನೋ, ಮುಂಬೈ, ನಾಗ್ಪುರ, ಪಾಟ್ನಾ, ರಾಂಚಿ ಮತ್ತು ಶಿಮ್ಲಾದಲ್ಲಿ ರಾಮ ನವಮಿ ಪ್ರಯುಕ್ತ ಬ್ಯಾಂಕ್ ರಜೆಯಾಗಿರುತ್ತದೆ.

ಏಪ್ರಿಲ್ 4, 11, 18, 25 ಭಾನುವಾರಗಳಾಗಿದ್ದು, ಆ ದಿನಗಳಂದು ಬ್ಯಾಂಕ್ ಮುಚ್ಚಿರುತ್ತದೆ. ಜೊತೆಗೆ, ಏಪ್ರಿಲ್ 10 ಹಾಗೂ 24 ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಆಗಿದ್ದು ಅಂದೂ ಕೂಡ ಬ್ಯಾಂಕ್ ರಜೆಯಾಗಿರುತ್ತದೆ. ಈ ದಿನಗಳಲ್ಲಿ ಬ್ಯಾಂಕ್ ರಜೆ ಇದ್ದರೂ ಕೂಡ ಮೊಬೈಲ್ ಅಥವಾ ಇಂಟರ್​ನೆಟ್ ಬ್ಯಾಂಕಿಂಗ್ ಸೇವೆಗಳು ಜನರಿಗೆ ಲಭ್ಯವಿರುತ್ತದೆ.

ಕರ್ನಾಟಕ ಬ್ಯಾಂಕ್ ರಜೆಗಳು ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ದಿನವಾದ ಏಪ್ರಿಲ್ 1, ಗುಡ್ ಫ್ರೈಡೇ ಆಚರಣೆಯ ಕಾರಣ ಏಪ್ರಿಲ್ 2, ಯುಗಾದಿ ಸಲುವಾಗಿ ಏಪ್ರಿಲ್ 13, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಸಲುವಾಗಿ ಏಪ್ರಿಲ್ 14 ರಂದು ಬ್ಯಾಂಕ್ ರಜೆಯಾಗಿರುತ್ತದೆ. ಉಳಿದಂತೆ, ಎಲ್ಲಾ ಭಾನುವಾರ ಹಾಗೂ 2 ಮತ್ತು 4ನೇ ಶನಿವಾರ ಬ್ಯಾಂಕ್ ಮುಚ್ಚಿರುತ್ತದೆ.

ಇದನ್ನೂ ಓದಿ: Bank online fraud: ಆನ್​ಲೈನ್ ವಂಚನೆ ಪ್ರಕರಣದಲ್ಲಿ ಬ್ಯಾಂಕ್ ಹಾಗೂ ಗ್ರಾಹಕರ ಜವಾಬ್ದಾರಿ ಏನು?

Bank Holidays: ಬ್ಯಾಂಕ್​ ಕೆಲಸವೇನಾದ್ರೂ ಇದ್ರೆ ಬೇಗ ಮುಗಿಸಿಕೊಳ್ಳಿ; ಮಾ. 27ರಿಂದ ಏಪ್ರಿಲ್​ 4ರವರೆಗೆ ರಜೆ ಇರಲಿದೆ

Published On - 5:13 pm, Mon, 29 March 21

ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ