ಬೆಂಗಳೂರು: ಕೊವಿಡ್ 19 ಸೋಂಕಿಗೆ ಬಲಿಯಾಗಿದ್ದ ಸಾರಿಗೆ ಸಿಬ್ಬಂದಿಗೆ ಪರಿಹಾರ ನೀಡಲು ಲಂಚ ಕೇಳುತ್ತಿರುವ ಆರೋಪ ಕೇಳಿಬಂದಿದೆ. ಇದುವರೆಗೆ ಕೊವಿಡ್ ಸೋಂಕಿನಿಂದ ಮೃತಪಟ್ಟ 213 ಸಿಬ್ಬಂದಿ ಪೈಕಿ ಕೇವಲ 7 ಜನರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಪರಿಹಾರ ನೀಡುವುದಕ್ಕೂ ಲಂಚ ಕೇಳುತ್ತಿರುವ ಆರೋಪ ಕೇಳಿಬಂದಿದೆ. 30 ಲಕ್ಷ ರೂಪಾಯಿ ಪರಿಹಾರ ನೀಡಲು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಅಧಿಕಾರಿಗಳಿಗೆ ಲಂಚ ನೀಡಿದರೆ ಮಾತ್ರ ನಿಯಮ ಸಡಿಲಿಕೆ ಮಾಡುತ್ತಾರೆ. ಮನಸೋಇಚ್ಛೆ ನಿಯಮ ಮಾಡಿರುವ ಸಾರಿಗೆ ನಿಗಮಗಳು, ಪರಿಹಾರ ನೀಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಲಾಗಿದೆ. ಕೊರೊನಾಗೆ ಬಲಿಯಾದ ಸಾರಿಗೆ ಸಿಬ್ಬಂದಿ ವರದಿ ನೀಡಿರಬೇಕು. ರಜೆ ಪಡೆದಿದ್ದ 5 ದಿನದೊಳಗೆ ವರದಿಯನ್ನ ಸಲ್ಲಿಸಿರಬೇಕು. ಕೊರೊನಾ ಬಿಟ್ಟು ಬೇರೆ ಆರೋಗ್ಯ ಸಮಸ್ಯೆ ಇರಬಾರದು. ಕೊರೊನಾಗೆ ಬಲಿಯಾಗಿದ್ದಾನೆಂದು ವರದಿ ನೀಡಿರಬೇಕು. ವೈದ್ಯರು ವರದಿ ನೀಡಬೇಕೆಂದು ಇಲಾಖೆ ನಿಯಮ ಮಾಡಿದೆ.
ಸಾರಿಗೆ ನೌಕರರು ಕೊರೊನಾದಿಂದ ಮೃತಪಟ್ಟರೆ ಮೂವತ್ತು ಲಕ್ಷ ರೂಪಾಯಿ ಪರಿಹಾರ ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಕೆಎಸ್ಆರ್ಟಿಸಿ ಬಿಎಂಟಿಸಿಯ ವಾಯುವ್ಯ ಕಲ್ಯಾಣ ಕರ್ನಾಟಕ ಸಾರಿಗೆಯ 213 ನೌಕರರು ಸೋಂಕಿನಿಂದ ಮೃತಪಟ್ಟಿದ್ರು. ಆದರೆ, ಇಲ್ಲಿಯವರೆಗೆ 7 ಜನರಿಗೆ ಮಾತ್ರ 30 ಲಕ್ಷ ರೂಪಾಯಿ ನೀಡಿದ್ದಾರೆ. ಇತ್ತ ಮನೆಯ ಯಜಮಾನನು ಇಲ್ಲದೆ, ಪರಿಹಾರವು ಇಲ್ಲದೆ ಕುಟುಂಬಸ್ಥರು ಕಷ್ಟ ಪಡುವಂತಾಗಿದೆ.
ಬಿಎಂಟಿಸಿಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 109 ಆಗಿದೆ. ಕೆಎಸ್ಆರ್ಟಿಸಿ ವಾಯುವ್ಯ ಮತ್ತು ಈಶಾನ್ಯ ಕರ್ನಾಟಕ ಸಾರಿಗೆಯಿಂದ 104 ನೌಕರರು ಮೃತಪಟ್ಟಿದ್ದರು. ಸಂಕಷ್ಟದ ಸಮಯದಲ್ಲಿ ಜನರ ಸೇವೆಗೆ ನಿಂತವರು ಸಾರಿಗೆ ನೌಕರರು, ಆದರೆ ಈಗ ರಾಜ್ಯ ಸರ್ಕಾರ ಅವರನ್ನು ನಡು ನೀರಲ್ಲಿ ಕೈಬಿಟ್ಟಿದೆ ಎಂಬ ಮಾತುಗಳು ಕೇಳಿಬಂದಿದೆ.
ಮೃತರಲ್ಲಿ ಕೆಲವರು ರಜೆಯ ಮೇಲಿದ್ದರು, ಮತ್ತೆ ಕೆಲವರಿಗೆ ಮೊದಲೇ ಅರೋಗ್ಯ ಸಮಸ್ಯೆಗಳಿತ್ತು. ಕೆಲವರಿಗೆ ಆಸ್ಪತ್ರೆಯ ವೈದ್ಯರಿಂದ ಯಾವುದೇ ಸರ್ಟಿಫಿಕೇಟ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಯಾವುದೇ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಇಲಾಖೆಯವರು ಜಾರಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಕೊರೊನಾ ಕಠಿಣ ಕಾಲದಲ್ಲಿ ಕೆಲಸಕ್ಕೆ ಬರುವಂತೆ ಒತ್ತಡ ಹೇರಿದ್ದರು. ಆದರೆ ನೌಕರರಿಗೆ ಕೊರೊನಾ ಬಂದು ಸಾವನ್ನಪ್ಪುತ್ತಿರುವ ವೇಳೆ ಸರ್ಕಾರ ಅವರನ್ನು ಕೈಬಿಟ್ಟಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕೊವಿಡ್ನಿಂದ ಮೃತರ ಕುಟುಂಬದ ಸದಸ್ಯರಿಗೆ ಒಟ್ಟು 1.50 ಲಕ್ಷ ರೂ. ಪರಿಹಾರ: ಗೊಂದಲಗಳಿಗೆ ತೆರೆ
ಇದನ್ನೂ ಓದಿ: ವಜಾಗೊಂಡಿದ್ದ ಅಷ್ಟೂ ಸಾರಿಗೆ ನೌಕರರ ಮರು ನೇಮಕ; ಸಿಹಿ ಸುದ್ದಿ ಕೊಟ್ಟ ಶ್ರೀರಾಮುಲು
Published On - 2:49 pm, Sun, 3 October 21