ಬೆಂಗಳೂರು: ಲಾಕ್ಡೌನ್ನಿಂದ ಕೆಎಸ್ಆರ್ಟಿಸಿಗೆ 4,000 ಕೋಟಿ ನಷ್ಟವಾಗಿದ್ದು, ಜೂನ್ 14ರ ಬಳಿಕ ಕರ್ನಾಟಕದಲ್ಲಿ ಲಾಕ್ಡೌನ್ ಸಡಿಲಿಸಿದರೆ ಹಂತ ಹಂತವಾಗಿ ಸರ್ಕಾರಿ ಬಸ್ ಸೇವೆ ಆರಂಭಿಸುತ್ತೇವೆ ಎಂದು ವಿಧಾನಸೌಧದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕೆಎಸ್ಆರ್ಟಿಸಿಗೆ ಆದ ನಷ್ಟವನ್ನು ಸುಧಾರಿಸಿಕೊಳ್ಳಲು 4 ತಿಂಗಳು ಬೇಕಾಗಬಹುದು ಎಂದು ಅಂದಾಜಿಸಿದ್ದಾಗಿ ಅವರು ತಿಳಿಸಿದರು. ಲಾಕ್ಡೌನ್ ಸಡಿಲಿಕೆಯ ನಂತರ ಬಸ್ ಸಂಚಾರ ಆರಂಭಿಸಿದರೂ ಬಸ್ಗಳಲ್ಲಿ ಕೊವಿಡ್ ತಡೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ದೈಹಿಕ ಅಂತರ ಕಾಯ್ದುಕೊಂಡು ಪ್ರಯಾಣಿಕರ ಓಡಾಟ ನಡೆಸಬಹುದು. ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆಯೇ ಮಾಸ್ಕ್, ಸ್ಯಾನಿಟೈಸರ್ ನೀಡಲಿದೆ ಎಂದು ಅವರು ಮಾಹಿತಿ ನೀಡಿದರು.
ಮತ್ತೆ ಬಸ್ ಸೇವೆ ಆರಂಭಿಸಿದ ನಂತತ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ 4 ನಿಗಮಗಳಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಿಸುವುದಿಲ್ಲ. ಸರ್ಕಾರಿ ಬಸ್ಗಳಲ್ಲಿ ಓಡಾಡುವವರು ಬಡವರೇ ಆಗಿರುತ್ತಾರೆ. ಹೀಗಾಗಿ ಸಂಕಷ್ಟದ ಸಮಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸುವುದಿಲ್ಲ. ಪ್ರಯಾಣ ದರ ಏರಿಕೆಗೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಕೊವಿಡ್ 2 ಡೋಸ್ ಲಸಿಕೆ ಪಡೆಯುವವರೆಗೆ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಡ ಹಾಕುವುದಿಲ್ಲ. ಸಾರಿಗೆ ಸಿಬ್ಬಂದಿ 2 ಡೋಸ್ ಲಸಿಕೆ ಪಡೆದ ಬಳಿಕ ಸೇವೆಗೆ ಆಗಮಿಸುವಂತೆ ತಿಳಿಸುತ್ತೇವೆ ಎಂದು ವಿಧಾನಸೌಧದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋತಿಗಳೇಕೆ ಮನೆಗೆ ಬರುತ್ತಿವೆ? ಅರಣ್ಯ ಇಲಾಖೆಗೆ ಮಹತ್ವದ ಸೂಚನೆ ನೀಡಿದ ಹೈಕೋರ್ಟ್
ಕೊವಿಡ್ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳನ್ನು ಅಕ್ರಮವಾಗಿ ದತ್ತು ಪಡೆಯುವುದನ್ನು ನಿಲ್ಲಿಸಿ: ಸುಪ್ರೀಂಕೋರ್ಟ್
(KSRTC buses begin its service from June 14th if the lockdown is relaxed says Karnataka Transport Minister Laxman Savadi)
Published On - 3:51 pm, Tue, 8 June 21