KSRTC ಸಿಬ್ಬಂದಿ ನಿರ್ಲಕ್ಷ್ಯ: ಪರೀಕ್ಷಾರ್ಥಿಗಳ ಕನಸು ನುಚ್ಚುನೂರು

ಗದಗ: KSRTC ಸಿಬ್ಬಂದಿಯ ನಿರ್ಲಕ್ಷ್ಯದಿಂದ 40 ಪರೀಕ್ಷಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಇಂದು ಕಲಬುರಗಿ ನಗರದಲ್ಲಿ ಸಿವಿಲ್ ಪೊಲೀಸ್ ಪರೀಕ್ಷೆ ಇತ್ತು. ಹೀಗಾಗಿ ಗದಗದಿಂದ ಕಲಬುರಗಿಗೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ತೆರಳಬೇಕಾಗಿತ್ತು. ಆದ್ರೆ KSRTC ಬಸ್ ಸೌಲಭ್ಯ ಕಲ್ಪಿಸಿಲ್ಲ. ಕಲಬುರಗಿಗೆ ಹೆಚ್ಚುವರಿ ಬಸ್ ಒದಗಿಸುವಂತೆ KSRTC ಸಿಬ್ಬಂದಿಗೆ ಪರೀಕ್ಷಾರ್ಥಿಗಳು ಮನವಿ ಮಾಡಿದ್ದರು. ಆದ್ರೆ ಪರೀಕ್ಷಾರ್ಥಿಗಳ ಮನವಿಗೆ KSRTC ಇಲಾಖೆ ಸ್ಪಂದಿಸಿಲ್ಲ. ರಾಜಹಂಸ ಬಸ್ ತಡೆದು ಗಲಾಟೆ: ಗದಗದಿಂದ ಯಾದಗಿರಿಗೆ ಹೊರಟ್ಟಿದ ರಾಜಹಂಸ ಬಸ್​ ಅನ್ನು ಅರ್ಧಗಂಟೆಗೂ ಹೆಚ್ಚು ಕಾಲ […]

KSRTC ಸಿಬ್ಬಂದಿ ನಿರ್ಲಕ್ಷ್ಯ: ಪರೀಕ್ಷಾರ್ಥಿಗಳ ಕನಸು ನುಚ್ಚುನೂರು

Updated on: Nov 17, 2019 | 10:51 AM

ಗದಗ: KSRTC ಸಿಬ್ಬಂದಿಯ ನಿರ್ಲಕ್ಷ್ಯದಿಂದ 40 ಪರೀಕ್ಷಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಇಂದು ಕಲಬುರಗಿ ನಗರದಲ್ಲಿ ಸಿವಿಲ್ ಪೊಲೀಸ್ ಪರೀಕ್ಷೆ ಇತ್ತು. ಹೀಗಾಗಿ ಗದಗದಿಂದ ಕಲಬುರಗಿಗೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ತೆರಳಬೇಕಾಗಿತ್ತು. ಆದ್ರೆ KSRTC ಬಸ್ ಸೌಲಭ್ಯ ಕಲ್ಪಿಸಿಲ್ಲ.

ಕಲಬುರಗಿಗೆ ಹೆಚ್ಚುವರಿ ಬಸ್ ಒದಗಿಸುವಂತೆ KSRTC ಸಿಬ್ಬಂದಿಗೆ ಪರೀಕ್ಷಾರ್ಥಿಗಳು ಮನವಿ ಮಾಡಿದ್ದರು. ಆದ್ರೆ ಪರೀಕ್ಷಾರ್ಥಿಗಳ ಮನವಿಗೆ KSRTC ಇಲಾಖೆ ಸ್ಪಂದಿಸಿಲ್ಲ.

ರಾಜಹಂಸ ಬಸ್ ತಡೆದು ಗಲಾಟೆ:
ಗದಗದಿಂದ ಯಾದಗಿರಿಗೆ ಹೊರಟ್ಟಿದ ರಾಜಹಂಸ ಬಸ್​ ಅನ್ನು ಅರ್ಧಗಂಟೆಗೂ ಹೆಚ್ಚು ಕಾಲ ತಡೆದು, ಕಲಬುರಗಿ ಬಸ್ ಸೌಲಭ್ಯ ನೀಡುವವರೆಗೂ ಈ ಬಸ್ ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಬಳಿಕ ಗದಗ ಹೊಸ ಬಸ್ ನಿಲ್ದಾಣದ ಮ್ಯಾನೇಜರ್​ರನ್ನು ಪರೀಕ್ಷಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಶಾಸಕರು, ಜಿಲ್ಲಾಧಿಕಾರಿ ಮಾತಿಗೂ ಬೆಲೆ ಇಲ್ಲ:
ಸ್ಥಳಕ್ಕೆ ಭೇಟಿ ನೀಡಿದ ಬೆಟಗೇರಿ ಬಡಾವಣೆ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಿದ್ದಾರೆ. ಪಟ್ಟು ಬಿಡದ ಪರೀಕ್ಷಾರ್ಥಿಗಳು ಶಾಸಕ ಹೆಚ್.ಕೆ.ಪಾಟೀಲ್​ಗೆ ಕರೆ ಮಾಡಿದ್ದಾರೆ. ಬಳಿಕ ಶಾಸಕರು ಮತ್ತು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರ ಮಾತಿಗೂ ಕೆಎಸ್​ಆರ್​ಟಿಸಿ ಅಧಿಕಾರಿಗಳು ಬೆಲೆ ನೀಡಿಲ್ಲ ಎನ್ನಲಾಗಿದೆ. ಮಧ್ಯರಾತ್ರಿ 1 ಗಂಟೆ ಬಳಿಕ ಬಸ್ ಇಲ್ಲದೇ ಪರೀಕ್ಷಾರ್ಥಿಗಳು ವಾಪಸ್ ಆಗಿದ್ದಾರೆ.