AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನ ಚಳಿಗೆ ಜನರು ಗಡಗಡ! ಇನ್ನೂ ನಾಲ್ಕು ದಿನ ಇದೇ ವಾತಾವರಣ

Karnataka Weather: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಶೀತದಲೆಯ ಪ್ರಮಾಣ ಹೆಚ್ಚಾಗಿದ್ದು ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣದ ಜೊತೆ ತುಂತುರು ಮಳೆಯೂ ಇರಲಿದೆ ಎಂದು ಇಲಾಖೆ ತಿಳಿಸಿದೆ. ಮುಂದಿನ ಇನ್ನೂ 4 ದಿನ ಇದೇ ತಾಪಮಾನವಿರಲಿದ್ದು, ಸಮತೋಲನ ಆಹಾರ ಸೇವನೆಯೊಂದಿಗೆ ಬೆಚ್ಚನೆಯ ಉಡುಪು ಧರಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನ ಚಳಿಗೆ ಜನರು ಗಡಗಡ! ಇನ್ನೂ ನಾಲ್ಕು ದಿನ ಇದೇ ವಾತಾವರಣ
ಬೆಂಗಳೂರಿನ ಚಳಿಗೆ ಜನರು ಗಡಗಡ! ಇನ್ನೂ ನಾಲ್ಕು ದಿನ ಇದೇ ವಾತಾವರಣ
ಭಾವನಾ ಹೆಗಡೆ
|

Updated on: Jan 12, 2026 | 7:38 AM

Share

ಬೆಂಗಳೂರು, ಜನವರಿ 12: ಬೆಂಗಳೂರು ಕಳೆದ ಮೂರು–ನಾಲ್ಕು ದಿನಗಳಿಂದ ಮೈಕೊರೆಯುವ ಚಳಿಯಿಂದ (Weather Forecast) ಕಂಪಿಸುತ್ತಿದೆ. ಇಂದು ಕೂಡಾ ಇಡೀ ದಿನ ಮೋಡಮುಸುಕಿದ ವಾತಾವರಣದ ಜೊತೆಗೆ ತೀವ್ರ ಚಳಿ ಕಂಡುಬಂದಿದ್ದು, ಸಿಟಿ ಜನರು ಮನೆಯಿಂದ ಹೊರಬರಲು ಹಿಂಜರಿಯುವಂತಾಗಿದೆ. ಅದರೊಂದಿಗೆ ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣವಿದ್ದು, ದಕ್ಷಿಣ ಒಳನಾಡಿನ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶೀತಗಾಳಿ ಹೆಚ್ಚಾಗಿ ತೀವ್ರ ಚಳಿ

ಉದ್ಯಾನನಗರಿ ಬೆಂಗಳೂರಿನಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಎಲ್ಲ ಸಮಯದಲ್ಲೂ ಚಳಿಯ ಪ್ರಭಾವ ಇದ್ದು, ಬೆಚ್ಚನೆಯ ಉಡುಪು, ಸ್ವೆಟರ್, ಜಾಕೆಟ್, ಕ್ಯಾಪ್ ಧರಿಸಿ ಜನರು ಪಾರ್ಕ್‌ಗಳಲ್ಲಿ ವಾಕಿಂಗ್ ಮಾಡುತ್ತಿರುವ ದೃಶ್ಯಗಳು ಕಂಡುಬಂದವು. ಲಾಲ್‌ಬಾಗ್ ಸೇರಿದಂತೆ ವಿವಿಧ ಉದ್ಯಾನಗಳಲ್ಲಿ ಯುವಕರು, ಗೃಹಿಣಿಯರು ಹಾಗೂ ವಯೋವೃದ್ಧರು ಚಳಿಯ ನಡುವೆಯೂ ವಾಕ್ ಮಾಡಿ ಎಂಜಾಯ್ ಮಾಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ನಿನ್ನೆ 14 ಡಿಗ್ರಿಗೆ ಇಳಿಕೆಯಾಗಿತ್ತು. ಹವಾಮಾನ ಇಲಾಖೆ ಪ್ರಕಾರ ಮುಂದಿನ ನಾಲ್ಕು ದಿನಗಳ ಕಾಲ ಕನಿಷ್ಠ ತಾಪಮಾನ ಮುಂದುವರಿಯುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಡಿಪ್ರೆಶನ್‌ನಿಂದ ಶೀತಗಾಳಿ ಹೆಚ್ಚಾಗಿ ಚಳಿ ತೀವ್ರವಾಗಿದೆ. ತುಂತುರು ಮಳೆಯೂ ಕೆಲವೆಡೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ವಯೋವೃದ್ಧರು ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಲ್ಲೆಲ್ಲಿ ಒಣಹವೆ?

ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಕ್ಷಮೆ ಕೇಳಿದ ಬಳಿಕವೂ ಚೇತನ್ ವಿರುದ್ಧ ಹರಿಹಾಯ್ದ ಸಾರಾ ಗೋವಿಂದು
ಕ್ಷಮೆ ಕೇಳಿದ ಬಳಿಕವೂ ಚೇತನ್ ವಿರುದ್ಧ ಹರಿಹಾಯ್ದ ಸಾರಾ ಗೋವಿಂದು
ಮತ್ತೆ ಕುದಿಯುತ್ತಿದೆ ಮಣಿಪುರ; ಇಂಪಾಲ್​ನ ಘರ್ಷಣೆಯಲ್ಲಿ ಹಲವರಿಗೆ ಗಾಯ
ಮತ್ತೆ ಕುದಿಯುತ್ತಿದೆ ಮಣಿಪುರ; ಇಂಪಾಲ್​ನ ಘರ್ಷಣೆಯಲ್ಲಿ ಹಲವರಿಗೆ ಗಾಯ
ಕೇಜ್ರಿವಾಲ್ ಸಿಎಂ ಆದಮೇಲೆ 100 ಕೋಟಿ ಮನೆ ಕಟ್ಟಿದರು; ಸ್ವಾತಿ ಮಲಿವಾಲ್ ಟೀಕೆ
ಕೇಜ್ರಿವಾಲ್ ಸಿಎಂ ಆದಮೇಲೆ 100 ಕೋಟಿ ಮನೆ ಕಟ್ಟಿದರು; ಸ್ವಾತಿ ಮಲಿವಾಲ್ ಟೀಕೆ
ತುಂಗಭದ್ರಾದಿಂದ ಕದ್ದುಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಬಂದ್
ತುಂಗಭದ್ರಾದಿಂದ ಕದ್ದುಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಬಂದ್
ಸತತ 4 ಸಿಕ್ಸರ್; ಪ್ರಫುಲ್ ಹಿಂಗೆ ವಿರುದ್ಧ ಸೇಡು ತೀರಿಸಿಕೊಂಡ ವೈಭವ್
ಸತತ 4 ಸಿಕ್ಸರ್; ಪ್ರಫುಲ್ ಹಿಂಗೆ ವಿರುದ್ಧ ಸೇಡು ತೀರಿಸಿಕೊಂಡ ವೈಭವ್
ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ
ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ
ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ
ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ
ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ, ವಿತಂಡ ವಾದ ಮುಂದುವರೆಸಿದ ಚೇತನ್
ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ, ವಿತಂಡ ವಾದ ಮುಂದುವರೆಸಿದ ಚೇತನ್
ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ವಿಶ್ವನಾಥ್
ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ವಿಶ್ವನಾಥ್
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು