ಕರ್ನಾಟಕದ ಮುಂದಿನ ಸಿಎಂ ಜಮೀರ್ ಅಹ್ಮದ್; ಭವಿಷ್ಯ ನುಡಿದ ವಿರಕ್ತ ಮಠದ ಕುಮಾರೇಶ್ವರ ಸ್ವಾಮೀಜಿ

| Updated By: sandhya thejappa

Updated on: Jul 25, 2022 | 8:55 AM

ಹಿಂದೂ ಮುಸ್ಲಿಂ ಭಾವೈಕ್ಯತೆ ನಮ್ಮಲ್ಲಿ ಅಷ್ಟೇ ಅಲ್ಲಾ, ಜಮೀರ್ ಅವರಲ್ಲೂ ಇದೆ. ಜಮೀರ್ ಅಹ್ಮದ್ ನಮ್ಮ ರಾಜ್ಯದ ತುಂಬ ಹೆಸರುವಾಸಿಯಾಗಿದ್ದಾರೆ.

ಕರ್ನಾಟಕದ ಮುಂದಿನ ಸಿಎಂ ಜಮೀರ್ ಅಹ್ಮದ್; ಭವಿಷ್ಯ ನುಡಿದ ವಿರಕ್ತ ಮಠದ ಕುಮಾರೇಶ್ವರ ಸ್ವಾಮೀಜಿ
ವಿರಕ್ತ ಮಠದ ಕುಮಾರೇಶ್ವರ ಸ್ವಾಮೀಜಿ
Follow us on

ಬೆಳಗಾವಿ: ಮುಂದಿನ ವಿಧಾನಸಭಾ ಚುನಾವಣೆಗೆ (Assembly Election) ಕಾಂಗ್ರೆಸ್​ನಲ್ಲಿ ಸಿಎಂ ಅಭ್ಯರ್ಥಿಗಾಗಿ ಫೈಟ್ ನಡೆಯುತ್ತಿದೆ. ಈ ನಡುವೆ ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan) ರಾಜ್ಯದಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎಂದು ವಿರಕ್ತ ಮಠದ ಕುಮಾರೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ನಡೆದ ಹಿಂದೂ- ಮುಸ್ಲಿಂ ಭಾವೈಕ್ಯತೆ ಸಮಾರಂಭದಲ್ಲಿ ಮಾತನಾಡಿದ ಸ್ವಾಮೀಜಿ, ಜಮೀರ್ ಅಹ್ಮದ್ ಬೆಂಗಳೂರಿನಿಂದ ಇಲ್ಲಿಯವರೆಗೂ ಬಂದಿದ್ದಾರೆ. ನಮ್ಮ ಭಾಗದ ಜನಪ್ರಿಯ ಶಾಸಕ ಮಹಾಂತೇಶ್ ಕೌಜಲಗಿ ಮುಂದೆ ಶಾಸಕರಾದರೇ, ನಮ್ಮ ರಾಜ್ಯದ ಜನಪ್ರಿಯ ಶಾಸಕರು, ಮಾಜಿ ಮಂತ್ರಿಗಳು ಮುಂದೆ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ.

ಹಿಂದೂ- ಮುಸ್ಲಿಂ ಭಾವೈಕ್ಯತೆ ನಮ್ಮಲ್ಲಿ ಅಷ್ಟೇ ಅಲ್ಲಾ, ಜಮೀರ್ ಅವರಲ್ಲೂ ಇದೆ. ಜಮೀರ್ ಅಹ್ಮದ್ ನಮ್ಮ ರಾಜ್ಯದಲ್ಲಿ ತುಂಬಾ ಹೆಸರುವಾಸಿಯಾಗಿದ್ದಾರೆ. ಬರೀ ಮುಸ್ಲಿಂ ಸಮುದಾಯಕ್ಕೆ ಅಷ್ಟೇ ಅಲ್ಲಾ, ಎಲ್ಲಾ ಸಮುದಾಯಕ್ಕೂ ಅವರು ಸಹಾಯ ಮಾಡಿದ್ದಾರೆ ಎಂದು ವಿರಕ್ತ ಮಠದ ಕುಮಾರೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: Sini Shetty: ಮಿಸ್​ ಇಂಡಿಯಾ ಸಿನಿ ಶೆಟ್ಟಿಗೂ ಇಷ್ಟ ವಿಜಯ್​ ದೇವರಕೊಂಡ; ಮನದ ಮಾತು ತೆರೆದಿಟ್ಟ ಸುಂದರಿ

ಇದನ್ನೂ ಓದಿ
ಕರ್ನಾಟಕದ ಮುಂದಿನ ಸಿಎಂ ಜಮೀರ್ ಅಹ್ಮದ್; ಭವಿಷ್ಯ ನುಡಿದ ವಿರಕ್ತ ಮಠದ ಕುಮಾರೇಶ್ವರ ಸ್ವಾಮೀಜಿ
Axar Patel: 35 ಎಸೆತ, 3 ಫೋರ್, 5 ಸಿಕ್ಸರ್: ಅಕ್ಷರ್ ಪಟೇಲ್ ಸ್ಫೋಟಕ ಆಟದ ವಿಡಿಯೋ ಇಲ್ಲಿದೆ ನೋಡಿ
ಮದ್ಯ ಹೊರತುಪಡಿಸಿ ದೇಹಕ್ಕೆ ಹಾನಿಯುಂಟು ಮಾಡುವ ಇತರೆ ಪಾನೀಯಗಳಿವು
ನಟಿ ಜತೆ ವಿವಾಹಿತ ಹೀರೋ ಸುತ್ತಾಟ; ರಸ್ತೆಯಲ್ಲಿ ರಂಪ ಮಾಡಿ ನಟಿಗೆ ಥಳಿಸಿದ ಪತ್ನಿ; ವಿಡಿಯೋ ವೈರಲ್​

ಕಾಂಗ್ರೆಸ್ ಗೆದ್ದರೆ ದರ್ಗಾಕ್ಕೆ ಐವತ್ತು ಲಕ್ಷ- ಜಮೀರ್:
ದಿಲಾವರ್ ಸಾಬ್ ದರ್ಗಾದಲ್ಲಿ ಭಾಷಣ ಮಾಡಿದ ಶಾಸಕ ಜಮೀರ್ ಅಹ್ಮದ್, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, ಈ ದರ್ಗಾಕ್ಕೆ ಐವತ್ತು ಲಕ್ಷ ರೂ. ದೇಣಿಗೆ ಕೊಡುತ್ತೀನಿ ಎಂದು ಹರಕೆ ಕಟ್ಟಿಕೊಂಡರು. ಚುನಾವಣೆಯಲ್ಲಿ ಮತ್ತೊಮ್ಮೆ ಮಹಾಂತೇಶ್ ಕೌಜಲಗಿ ಶಾಸಕರಾಗಬೇಕು, ಕಾಂಗ್ರೆಸ್ ಗೆಲ್ಲಬೇಕು. ಉರುಸ್ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ಈ ವೇಳೆ ಕೊಠಡಿ ವ್ಯವಸ್ಥೆ ಇಲ್ಲಾ ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದರೆ ಮೂರು ತಿಂಗಳ ಒಳಗಾಗಿ ಹಣ ಕೊಡುತ್ತೀನಿ. ಇಡೀ ದೇಶದಲ್ಲಿ ನನಗೆ ಸಿಗುತ್ತಿರುವ ಪ್ರೀತಿ ಯಾವ ರಾಜಕಾರಣಿಗೂ ಸಿಗುತ್ತಿಲ್ಲ‌ ಎಂದರು. ಹಾಗೇ ದರ್ಗಾಕ್ಕೆ ತಕ್ಷಣ ಐದು ಲಕ್ಷ ರೂ. ದೇಣಿಗೆಯನ್ನ ನೀಡಿದರು.

ಇದನ್ನೂ ಓದಿ: Gold Price Today: ಬೆಂಗಳೂರು. ಮುಂಬೈ ಸೇರಿ ಹಲವೆಡೆ ಇಂದಿನ ಚಿನ್ನದ ಬೆಲೆ ಹೀಗಿದೆ

Published On - 8:44 am, Mon, 25 July 22