ಮೈಸೂರಿನಲ್ಲಿ ನಕಲಿ ಗೊಬ್ಬರ ತಯಾರಿಕಾ ಘಟಕದ ಮೇಲೆ ದಾಳಿ! ಯಾದಗಿರಿಯಲ್ಲಿ ನಕಲಿ ಬ್ರ್ಯಾಂಡ್ ಹೆಸರಲ್ಲಿ ಹಾಲು ಮಾರಾಟ ಶಂಕೆ
ಮಹೇಶ್ ಎಂಬುವವರಿಗೆ ಸೇರಿದ ಕೋಳಿ ಫಾರಂನಲ್ಲಿ ನಕಲಿ ಗೊಬ್ಬರ ತಯಾರಿಕೆ ದಂಧೆ ನಡೆಸುತ್ತಿದ್ದರು. ಸದ್ಯ ಈ ಬಗ್ಗೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮೈಸೂರು: ಹೊರವಲಯದ ಮಂಡಕಳ್ಳಿ ಗ್ರಾಮದಲ್ಲಿ ನಕಲಿ ಗೊಬ್ಬರ (Fake Fertilizer) ತಯಾರಿಕಾ ಘಟಕದ ಮೇಲೆ ದಾಳಿ ನಡೆದಿದೆ. ಕೃಷಿ ಇಲಾಖೆಯ (Agriculture department) ಸಹಾಯಕ ನಿರ್ದೇಶಕಿ ಮಧುಲತಾ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ, ಅಪಾರ ಪ್ರಮಾಣದ ನಕಲಿ ರಸಗೊಬ್ಬರವನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಸ್ಥಳದಲ್ಲಿ ಜೇಡಿಮಣ್ಣಿನ ಚೀಲಗಳು ಯಂತ್ರೋಪಕರಣಗಳು ಸೇರಿದಂತೆ ಹಲವು ಪರಿಕರಗಳು ಪತ್ತೆಯಾಗಿವೆ. ಆರೋಪಿಗಳು ಮಹೇಶ್ ಎಂಬುವವರಿಗೆ ಸೇರಿದ ಕೋಳಿ ಫಾರಂನಲ್ಲಿ ನಕಲಿ ಗೊಬ್ಬರ ತಯಾರಿಕೆ ದಂಧೆ ನಡೆಸುತ್ತಿದ್ದರು. ಸದ್ಯ ಈ ಬಗ್ಗೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಕಲಿ ಬ್ರ್ಯಾಂಡ್ ಹೆಸರಲ್ಲಿ ಹಾಲು ಮಾರಾಟ ಶಂಕೆ: ಯಾದಗಿರಿ: ನಕಲಿ ಬ್ರ್ಯಾಂಡ್ ಹೆಸರಲ್ಲಿ ಖಾಸಗಿಯವರು ಹಾಲು ಮಾರಾಟ ಮಾಡುತ್ತಿರುವ ಶಂಕೆ ಹಿನ್ನೆಲೆ ಆಹಾರ ಸುರಕ್ಷತಾ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ. ಆಹಾರ ಸುರಕ್ಷತೆ ಅಧಿಕಾರಿ ಆಂಜನೇಯ ನೇತೃತ್ವದಲ್ಲಿ ಯಾದಗಿರಿ ನಗರದ ವಿವಿಧೆಡೆ ದಾಳಿ ನಡೆದಿದೆ. ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಮೂಲದ ಖಾಸಗಿ ಕಂಪನಿಯ ಹಾಲು ಪೂರೈಕೆ ಮಾಡುವ ವಾಹನಗಳ ಮೇಲೂ ದಾಳಿ ಮಾಡಿ, ಖಾಸಗಿ ಕಂಪನಿಯ ಹಾಲಿನ ಮಾದರಿಗಳ ಸ್ಯಾಂಪಲ್ನ ಸಂಗ್ರಹಿಸಿದ್ದಾರೆ.
ಇದನ್ನೂ ಓದಿ: Draupadi Murmu: ಇಂದು ಜುಲೈ 25, ಪ್ರತಿಬಾರಿ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ನಡೆಯುವುದು ಇದೇ ದಿನಾಂಕದಲ್ಲಿ, ಏಕೆ ಹೀಗೆ?
ಆಹಾರ ಸುರಕ್ಷತೆ ಆಯುಕ್ತರ ಆದೇಶ ಮೇರೆಗೆ ದಾಳಿ ಮಾಡಿ 5 ಕಂಪನಿಯ ಹಾಲಿನ ಮಾದರಿ ಸಂಗ್ರಹ ಮಾಡಲಾಗಿದೆ. ಸಂಗ್ರಹಣೆ ಮಾಡಿರುವ ಸ್ಯಾಂಪಲ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಲ್ಯಾಬ್ ರಿಪೋರ್ಟ್ನಲ್ಲಿ ಕಲಬೆರಕೆ, ಸಬ್ ಸ್ಟಾಂಡರ್ಡ್ ಬಂದ ನಂತರ ಕ್ರಮಕೈಗೊಳ್ಳಲಾಗುತ್ತದೆ ಎಂದು ಆಹಾರ ಸುರಕ್ಷತೆ ಅಧಿಕಾರಿ ಆಂಜನೇಯ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Axar Patel: ಕೊನೆಯ ಓವರ್ ವರೆಗೂ ರೋಚಕ ಕಾದಾಟ: ಸಿಕ್ಸ್ ಸಿಡಿಸಿ ಗೆಲುವು ತಂದುಕೊಟ್ಟ ಅಕ್ಷರ್ ಪಟೇಲ್
Published On - 9:19 am, Mon, 25 July 22