Relationship: ಸಂಬಂಧಗಳು ಉತ್ತಮವಾಗಿರಬೇಕೆಂದರೆ ನಿಮ್ಮ ನಡವಳಿಕೆ ಹೇಗಿರಬೇಕು?

ಸಂಬಂಧದಲ್ಲಿ ಪ್ರೀತಿ, ಜಗಳ, ಕೋಪ, ದುಃಖ ಎಲ್ಲವೂ ಸಾಮಾನ್ಯ, ಆದರೆ ವಾದವು ಸಂಬಂಧವನ್ನು ಹಾಳು ಮಾಡುವಷ್ಟು ಅತಿರೇಕಕ್ಕೆ ಹೋಗಬಾರದು. ಸಂಬಂಧ ಉಳಿಯಬೇಕೆಂದರೆ ನೀವು ಕೋಪದ ಜಾಗದಲ್ಲಿ ಪ್ರೀತಿಯೆಂಬ ಮುತ್ತನ್ನು ಪೋಣಿಸಲೇಬೇಕು

Relationship: ಸಂಬಂಧಗಳು ಉತ್ತಮವಾಗಿರಬೇಕೆಂದರೆ ನಿಮ್ಮ ನಡವಳಿಕೆ ಹೇಗಿರಬೇಕು?
Relationship
Follow us
TV9 Web
| Updated By: ನಯನಾ ರಾಜೀವ್

Updated on: Jul 25, 2022 | 9:00 AM

ಸಂಬಂಧದಲ್ಲಿ ಪ್ರೀತಿ, ಜಗಳ, ಕೋಪ, ದುಃಖ ಎಲ್ಲವೂ ಸಾಮಾನ್ಯ, ಆದರೆ ವಾದವು ಸಂಬಂಧವನ್ನು ಹಾಳು ಮಾಡುವಷ್ಟು ಅತಿರೇಕಕ್ಕೆ ಹೋಗಬಾರದು. ಸಂಬಂಧ ಉಳಿಯಬೇಕೆಂದರೆ ನೀವು ಕೋಪದ ಜಾಗದಲ್ಲಿ ಪ್ರೀತಿಯೆಂಬ ಮುತ್ತನ್ನು ಪೋಣಿಸಲೇಬೇಕು. ನಿಮಗೆ ನಿಮ್ಮ ಸಂಗಾತಿಯ ದುರ್ಬಲತೆ ಗೊತ್ತಿರುವ ಕಾರಣ ಸುಲಭವಾಗಿ ಅವರ ತಪ್ಪನ್ನು ಪದೇ ಪದೇ ಹೇಳುವ ಮೂಲಕ ಅವರಿಗೆ ಬೇಸರ ಉಂಟು ಮಾಡುವ ಭರದಲ್ಲಿ ಸಂಗಾತಿಯ ಶಕ್ತಿಯೇ ನೀವು ಎಂಬುದನ್ನು ಮರೆತಿರುತ್ತೀರಿ.

ರಕ್ಷಣಾತ್ಮಕ: ಸಂಬಂಧಗಳಲ್ಲಿ ವಾದಗಳು ಸಾಮಾನ್ಯವಾಗಿದೆ. ನಾವು ನಂಬಿಕೆಗೆ ವಿರುದ್ಧವಾಗಿ ಯಾರಾದರೂ ಮಾತನಾಡಿದಾಗ ನಾವು ಅದನ್ನು ಆರೋಗ್ಯಕರ ರೀತಿಯಲ್ಲಿ ತೆಗೆದುಕೊಳ್ಳದಿದ್ದಾಗ, ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು ಬರುತ್ತವೆ. ಆದರೆ ಬೇರೆಯವರ ನಂಬಿಕೆ, ಭಾವನೆಗಳಿಗೂ ಬೆಲೆ ಕೊಡುವುದನ್ನು ಕಲಿಯಿರಿ.

ಸಂವಹನ: ಸಮಸ್ಯೆಗಳನ್ನು ಮಾತನಾಡಿಯೇ ಬಗೆಹರಿಸಿಕೊಳ್ಳಬೇಕು, ಆದರೆ ಜಗಳ ಬೇಡ, ಸಾಮಾನ್ಯವಾಗಿ ನಮ್ಮ ಅಹಂಕಅರ ಬೇರೆಯವರ ಭಾವನೆಗಳಿಗೆ ನೋವುಂಟು ಮಾಡುತ್ತದೆ.

ಹೀಯಾಳಿಸುವುದು ಬೇಡ: ನಿಮ್ಮ ಸಂಗಾತಿ ಕೋಪಗೊಂಡಾಗ ಅವರನ್ನು ಸಮಾಧಾನಪಡಿಸುವುದನ್ನು ಬಿಟ್ಟು ಅವರ ಮಾತನ್ನೇ ಪದೇ ಪದೇ ಹೇಳುತ್ತಾ ಹೀಯಾಳಿಸಬೇಡಿ. ಅವರ ಕೋಪವನ್ನು ಕಡಿಮೆ ಮಾಡಲು ಅವರ ದಾರಿಯಲ್ಲೇ ನಡೆಯಲು ಪ್ರಯತ್ನಿಸಿ, ಅವರಂತೆಯೇ ಒಮ್ಮೆ ಯೋಚನೆ ಮಾಡಿ ನೋಡಿ.

ಅಪ್ರಿಶಿಯೇಟ್ ಮಾಡಿ: ಸಂಬಂಧಗಳು ಗಟ್ಟಿಗೊಳ್ಳುವುದು ಯಾವಾಗ ಎಂದರೆ ಒಬ್ಬರನ್ನೊಬ್ಬರು ಅಪ್ರಿಶಿಯೇಟ್ ಮಾಡಿಕೊಂಡಾಗ, ಹೌದು ಒಬ್ಬರು ಮಾಡಿದ ಕೆಲಸವನ್ನು ಮತ್ತೊಬ್ಬರು ಹೊಗಳಿದಾಗ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತದೆ.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ