ಆರ್​ಬಿಐ ಹೆಸರಲ್ಲಿ ಸುಮಾರು 2 ಕೋಟಿ ವಂಚನೆ ಮಾಡಿದ್ದ ಯುವತಿ, ಕೃತ್ಯಕ್ಕೆ ಸಹಕರಿಸುತ್ತಿದ್ದ ನಟ ಬಂಧನ

| Updated By: ganapathi bhat

Updated on: Aug 14, 2021 | 1:07 PM

ವಿದೇಶದಿಂದ ಹಣ ಬಂದಿದೆ ತೆರಿಗೆ ಕಟ್ಟಿ ಹಣ ಪಡೆಯಬೇಕು ಎಂದು ಉದ್ಯಮಿಗಳಿಗೆ ಅರ್ಚನಾ ವಂಚನೆ ಮಾಡುತ್ತಿದ್ದರು. ಆರ್​ಬಿಐ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದರು.

ಆರ್​ಬಿಐ ಹೆಸರಲ್ಲಿ ಸುಮಾರು 2 ಕೋಟಿ ವಂಚನೆ ಮಾಡಿದ್ದ ಯುವತಿ, ಕೃತ್ಯಕ್ಕೆ ಸಹಕರಿಸುತ್ತಿದ್ದ ನಟ ಬಂಧನ
ಸಾಂದರ್ಭಿಕ ಚಿತ್ರ
Follow us on

ಚಿಕ್ಕಬಳ್ಳಾಪುರ: ಉದ್ಯಮಿಗಳನ್ನು ವಂಚಿಸುತ್ತಿದ್ದ ಮಹಿಳೆಯ ಮನೆ ಮೇಲೆ ಚಿಕ್ಕಬಳ್ಳಾಪುರ ಪೊಲೀಸರು ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಕೋಟೆ ಬಡಾವಣೆಯಲ್ಲಿರುವ ನಿವಾಸದ ಮಹಿಳೆ ಅರ್ಚನಾ ಎಂಬವರ ನಿವಾಸದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಅರ್ಚನಾ ಉದ್ಯಮಿಗಳಿಗೆ ಆರ್​ಬಿಐ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡುತ್ತಿದ್ದರು. ಭಾರೀ ಮೊತ್ತ ಪಡೆದುಕೊಂಡು ಮೋಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ವಿದೇಶದಿಂದ ಹಣ ಬಂದಿದೆ ತೆರಿಗೆ ಕಟ್ಟಿ ಹಣ ಪಡೆಯಬೇಕು ಎಂದು ಉದ್ಯಮಿಗಳಿಗೆ ಅರ್ಚನಾ ವಂಚನೆ ಮಾಡುತ್ತಿದ್ದರು. ಆರ್​ಬಿಐ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದರು. 24 ಕೋಟಿ ರೂಪಾಯಿ ಸೆಸ್‌ ಪಾವತಿಸಿದರೆ ಹಣ ಬರುತ್ತದೆ, 6 ಲಕ್ಷ 35 ಸಾವಿರ ಕೋಟಿ ರೂಪಾಯಿ ಬರುತ್ತದೆ ಎಂದು ಮೋಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ವಂಚಕಿ ಅರ್ಚನಾ ಗ್ಯಾಂಗ್‌ಗೆ ಸಹಕರಿಸುತ್ತಿದ್ದ ನಟ ಶಂಕರ್‌, ಅರ್ಚನಾ ಸಹೋದರ ಶ್ರೀಹರಿ, ಸಂಬಂಧಿ ಶ್ರೀಪತಿ ಎಂಬವರನ್ನು ಕೂಡ ಬಂಧಿಸಲಾಗಿದೆ. ಸದ್ಯ ಅರ್ಚನಾ ಕೊವಿಡ್ ಸೋಂಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಯುವತಿ ಬೆಂಗಳೂರಿನ ವಂಶಿಕೃಷ್ಣ ಎಂಬವರಿಗೆ 2 ಕೋಟಿ 2 ಲಕ್ಷ ರೂಪಾಯಿ ವಂಚನೆ ಮಾಡಿದ್ದರು. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರೆಮ್​ಡಿಸಿವಿರ್, ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ವಂಚನೆ; ಅಪರಿಚಿತ ಸಂಖ್ಯೆಗೆ ಹಣ ಕಳಿಸುವ ಮುನ್ನ ಎಚ್ಚರ

SBI KYC: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆವೈಸಿ ಹೆಸರಿನಲ್ಲಿ ಮೋಸದ ಜಾಲ ಬೀಸುತ್ತಿರುವ ವಂಚಕರ ಬಗ್ಗೆ ಎಚ್ಚರಿಕೆಯಿಂದಿರಿ

Published On - 9:07 pm, Sat, 29 May 21