PSIಗಳ ಲವ್-ಸೆಕ್ಸ್-ಧೋಖಾ: ಗರ್ಭಪಾತ ಮಾಡಿಸಿದ ಪ್ರಿಯತಮನ ವಿರುದ್ಧ ‘ಠಾಣೆ ಮೆಟ್ಟಿಲೇರಿದ’ ಮಹಿಳಾ ಅಧಿಕಾರಿ
ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ ವಿರುದ್ಧ ಮಹಿಳಾ PSI ಓರ್ವರು ದೂರು ನೀಡಿದ್ದಾರೆ. PSI ಆನಂದ್ ವಿರುದ್ಧ ಮಹಿಳಾ ಸಬ್ ಇನ್ಸ್ಪೆಕ್ಟರ್ ದೂರು ದಾಖಲಿಸಿದ್ದಾರೆ.
ಮೈಸೂರು: ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ ವಿರುದ್ಧ ಮಹಿಳಾ PSI ಓರ್ವರು ದೂರು ನೀಡಿದ್ದಾರೆ. PSI ಆನಂದ್ ವಿರುದ್ಧ ಮಹಿಳಾ ಸಬ್ ಇನ್ಸ್ಪೆಕ್ಟರ್ ದೂರು ದಾಖಲಿಸಿದ್ದಾರೆ.
ವಿವಿಪುರಂ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ PSI ಹಾಗೂ N.R.ಪುರ ಠಾಣೆಯ PSI ಆನಂದ್ ನಡುವೆ ಪ್ರೇಮಾಂಕುರವಾಗಿ ಒಟ್ಟಿಗೆ ಓಡಾಡುತ್ತಿದ್ದರು. ಈ ನಡುವೆ, ಮಹಿಳಾ PSIಯನ್ನು ಮದುವೆಯಾಗುವುದಾಗಿ ನಂಬಿಸಿ ಆನಂದ್ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ, ಆಕೆ ಗರ್ಭವತಿ ಆಗುತ್ತಿದ್ದಂತೆ ತನ್ನ ವರಸೆ ಬದಲಿಸಿದ ಆನಂದ್ ಮಹಿಳಾ ಸಬ್ ಇನ್ಸ್ಪೆಕ್ಟರ್ಗೆ ಗರ್ಭಪಾತ ಮಾಡಿಸಿದ ಎಂದು ಹೇಳಲಾಗಿದೆ.
ಈ ಮಧ್ಯೆ, ಮಹಿಳಾ ಸಬ್ ಇನ್ಸ್ಪೆಕ್ಟರ್ ತನ್ನನ್ನು ಮದುವೆಯಾಗಲು ಒತ್ತಡ ಹೇರುತ್ತಿದ್ದಂತೆ ಆಕೆಗೆ ಕೊಲೆ ಬೆದರಿಕೆ ಸಹ ಹಾಕಿದ್ದಾನಂತೆ. ಜೊತೆಗೆ, ಬೇರೊಂದು ಯುವತಿಯೊಟ್ಟಿಗೆ ವಿವಾಹವಾಗಿದ್ದಾನೆ ಎಂದು ಹೇಳಲಾಗಿದೆ.
ಹಾಗಾಗಿ, ನನಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ, PSI ಆನಂದ್ ಮೇಲೆ FIR ದಾಖಲಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿಯ ಲವ್ ಸೆಕ್ಸ್ ದೋಖಾ ಕಥೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಯುವಕನ ಹಿಂದೆ ಹೋದ ಯುವತಿ? ಮಗಳಿಗಾಗಿ ಪೊಲೀಸ್ ಠಾಣೆ ಎದುರು ತಂದೆ ರಂಪಾಟ..
Published On - 2:30 pm, Thu, 10 December 20