ಯುವಕನ ಹಿಂದೆ ಹೋದ ಯುವತಿ? ಮಗಳಿಗಾಗಿ ಪೊಲೀಸ್ ಠಾಣೆ ಎದುರು ತಂದೆ ರಂಪಾಟ..
ಮನೆ ಬಿಟ್ಟು ಹೋಗಿರುವ ಮಗಳಿಗಾಗಿ ತಂದೆ ಕಣ್ಣಿರು ಹಾಕುತ್ತಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮಗಳಿಗಾಗಿ ಹುಡುಕಾಟ ನಡೆಸುತ್ತಿದ್ದು ಧಾರವಾಡ ಮಹಿಳಾ ಪೋಲಿಸ್ ಠಾಣೆಯ ಎದುರು ಕುಳಿತು ಗೋಳಾಡುತ್ತಿದ್ದಾರೆ.

ಧಾರವಾಡ: ಮನೆ ಬಿಟ್ಟು ಹೋಗಿರುವ ಮಗಳಿಗಾಗಿ ತಂದೆ ಕಣ್ಣಿರು ಹಾಕುತ್ತಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮಗಳಿಗಾಗಿ ಹುಡುಕಾಟ ನಡೆಸುತ್ತಿದ್ದು ಧಾರವಾಡ ಮಹಿಳಾ ಪೋಲಿಸ್ ಠಾಣೆಯ ಎದುರು ಕುಳಿತು ಗೋಳಾಡುತ್ತಿದ್ದಾರೆ. ಬಸಮ್ಮ ಜಂಗಳಿ (20) ಮನೆ ಬಿಟ್ಟು ಹೋಗಿರುವ ಮಗಳು. ಬಸಪ್ಪ ಜಂಗಳಿ -ತಂದೆ.
20 ವರ್ಷದ ಬಸಮ್ಮ ಜಂಗಳಿ ಎಂಬ ಯುವತಿ ಜುಲೈ 23ರಂದು ಮನೆ ಬಿಟ್ಟು ಹೋಗಿದ್ದಳು. ಈ ಬಗ್ಗೆ ಧಾರವಾಡ ಮಹಿಳಾ ಪೊಲೀಸ್ ಠಾಣೆಗೆ ತಂದೆ ಬಸಪ್ಪ ಜಂಗಳಿ ದೂರು ನೀಡಿದ್ದರು. ಆದರೆ ಪೊಲೀಸರು ತನ್ನ ಮಗಳನ್ನು ಹುಡುಕುವಲ್ಲಿ ಯಾವುದೇ ರೀತಿ ಸಹಕಾರ ನೀಡುತ್ತಿಲ್ಲ.
ಯುವಕನ ಹಿಂದೆ ಹೋದ ಯುವತಿ? ಈವರೆಗೂ ಮಗಳು ಪತ್ತೆಯಾಗಿಲ್ಲ ಎಂದು ಬಸಪ್ಪ ಆರೋಪಿಸಿದ್ದಾರೆ. ಹಾಗೂ ನೊಂದ ತಂದೆ ನಿನ್ನೆ ಮಧ್ಯಾಹ್ನದಿಂದ ಠಾಣೆಯ ಮುಂದೆ ಕುಳಿತು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಬೇಸತ್ತು ಠಾಣೆ ಬಳಿ ಇರುವ ಮರವೇರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಅಲ್ಲ ಇದ್ದ ಕೆಲವರು ಅವರ ಸಹಾಯಕ್ಕೆ ದೌಡಾಯಿಸಿ ಅವರನ್ನ ತಡೆದಿದ್ದಾರೆ.
ಮಗಳನ್ನು ಮಡ್ಡಿಗಿರಿಯಾಲದ ಗಂಗಪ್ಪ ಚುರಮರಿ ಅನ್ನೋ ಯುವಕ ಅಪಹರಣ ಮಾಡಿದ್ದಾನೆ ಎಂದು ಬಸಪ್ಪ ಆರೋಪಿಸಿದ್ದಾರೆ. ಆದಷ್ಟು ಬೇಗ ನನ್ನ ಮಗಳನ್ನು ಹುಡುಕಿಕೊಡಿ ಎಂದು ಅಂಗಲಾಚಿದ್ದಾರೆ.
ಮೂವರ ಬದುಕನ್ನೇ ನುಂಗಿದ ಆರ್ಥಿಕ ಸಮಸ್ಯೆ.. ಮದುವೆ ಮಾಡಲಾಗದೆ ತಾಯಿ, ಮಕ್ಕಳು ಆತ್ಮಹತ್ಯೆ