ಬೆಂಗಳೂರು: ಇತ್ತೀಚೆಗೆ ನಡೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರಿಂದ ತಮ್ಮ ಕಾರ್ಯಕ್ಕೆ ಶ್ಲಾಘನೆ ಪಡೆದ ಮಂಡ್ಯದ ದಾಸನದೊಡ್ಡಿಯ ಕಾಮೇಗೌಡರಿಗೆ ಇದೀಗ ಕರ್ನಾಟಕ ಸರ್ಕಾರ ಭರ್ಜರಿ ಉಡುಗೊರೆ ಒಂದನ್ನು ನೀಡಿದೆ.
ಇದನ್ನೂ ಓದಿ: ಕೆರೆಗಳ ಹರಿಕಾರ ಕನ್ನಡಿಗ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಕಾಮೇಗೌಡರಿಗೆ ಸಿಕ್ತು ಲೈಫ್ಟೈಮ್ ಬಸ್ ಪಾಸ್..!
ಕೆರೆಗಳ ಹರಿಕಾರ, ‘ಆಧುನಿಕ ಭಗೀರಥ’ ಎಂದೇ ಪ್ರಖ್ಯಾತಿ ಪಡೆದಿರುವ ಕಾಮೇಗೌಡರಿಗೆ KSRTC ಸಂಸ್ಥೆಯು ತನ್ನ ಎಲ್ಲಾ ಬಸ್ಗಳಲ್ಲಿ, ಕಾಮೇಗೌಡರು ತಮ್ಮ ಜೀವನುದ್ದಕ್ಕೂ ಉಚಿತವಾಗಿ ಪ್ರಯಾಣಿಸಲು ಲೈಫ್ಟೈಮ್ ಬಸ್ ಪಾಸ್ ನೀಡಿದೆ. ಸಾರಿಗೆ ಸಂಸ್ಥೆಯ ಟ್ವಿಟರ್ ಖಾತೆಯ ಮೂಲಕ ಇದನ್ನು ಹಂಚಿಕೊಂಡ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಮುಖ್ಯಮಂತ್ರಿ ಮತ್ತು ಕರ್ನಾಟಕ ಸರ್ಕಾರ ಶ್ರೀ ಕಾಮೇಗೌಡ ಅವರ ಅಪರಿಮಿತ ಸಾಧನೆಗಾಗಿ ಈ ಉಚಿತ ಬಸ್ ಪಾಸ್ ನೀಡಲು ಆದೇಶಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
Published On - 5:44 pm, Thu, 2 July 20