- Kannada News Karnataka Lakshdeepotsava at Devanahalli Historic Fort Temple, Venugopalaswamy decorated with flowers
ದೇವನಹಳ್ಳಿ ಐತಿಹಾಸಿಕ ಕೋಟೆ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ, ಹೂವುಗಳಿಂದ ಸಿಂಗಾರಗೊಂಡ ವೇಣುಗೋಪಾಲಸ್ವಾಮಿ
ಐದು ವರ್ಷಗಳ ನಂತರ ಕಂಗೊಳಿಸಿದ ದೇವನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನ. ನವವಧುವಿನಂತೆ ಸಿಂಗಾರಗೊಂಡು, ವಿದ್ಯುತ್ ದೀಪಗಳಿಂದ ಜೊತೆಗೆ ಆಕರ್ಷಕ ಹೂಗಳ ಅಲಂಕಾರದ, ಆಭರಣಗಳಿಂದ ನೋಡುಗರನ್ನ ಒಂದು ಕ್ಷಣ ಮೂಕವಿಸ್ಮೀತರಾಗುವಂತೆ ಮಾಡಿದೆ.
Updated on: Dec 09, 2022 | 11:04 AM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಕೋಟೆ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ರಾಜ ಮಹಾರಾಜರ ಕಾಲದಿಂದಲು ಪ್ರತಿ ಐದು ವರ್ಷಕ್ಕೊಮ್ಮೆ ಅದ್ದೂರಿ ಲಕ್ಷ ದೀಪೋತ್ಸವ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.

ಇನ್ನು ರಾಜ ಮಹಾರಾಜರು ಪಟ್ಟಣದ ವೇಣುಗೋಪಾಲ ಸ್ವಾಮಿ ದೇವಸ್ಥಾನವನ್ನ ಕಟ್ಟಿಸಿದ್ದು ಆ ಕಾಲದಿಂದಲೂ ರತ್ನ ಖಚಿತ ವಜ್ರಾಭರಣಗಳನ್ನ ದೇವಸ್ಥಾನಕ್ಕೆ ದಾನವಾಗಿ ನೀಡಿದ್ದಾರೆ. ಹೀಗಾಗಿ ಭದ್ರತೆಯ ದೃಷ್ಟಿಯಿಂದ ಬೆಲೆ ಕಟ್ಟಲಾಗದ ವಜ್ರ ಖಚಿತ ವಜ್ರಾಭರಣಗಳನ್ನ ಸರ್ಕಾರದ ಖಜಾನೆಯಲ್ಲಿಟ್ಟಿದ್ದು ಇಂದು ಬಿಗಿ ಪೊಲೀಸ್ ಭದ್ರತೆ ಮೂಲಕ ರತ್ನ ಖಚಿತ ವಜ್ರಾಭರಣಗಳನ್ನ ತಂದು ವೇಣುಗೋಪಾಲಸ್ವಾಮಿಗೆ ಹಾಕಿ ಮೆರವಣಿಗೆ ಮಾಡಿದ್ರು.

ಈ ಭಾರಿಯು ಸಹ ಅದ್ದೂರಿ ಲಕ್ಷ ದೀಪೋತ್ಸವವನ್ನ ಆಚರಣೆ ಮಾಡ್ತಿದ್ದು ದೀಪೋತ್ಸವದ ಪ್ರಯುಕ್ತ ಪಟ್ಟಣದ ರಸ್ತೆಗಳಲೆಲ್ಲ ಆಕರ್ಷಕ ದೀಪಾಲಂಕಾರ ಮಾಡುವ ಮೂಲಕ ಪಟ್ಟಣವನ್ನ ನವವಧುವಿನಂತೆ ಸಿಂಗಾರ ಮಾಡಿದ್ದಾರೆ.

ಪಟ್ಟಣದಲ್ಲಿ ಲಕ್ಷ ದೀಪೋತ್ಸವದ ಪ್ರಯುಕ್ತ ಕಬ್ಬಡಿ ಸೇರಿದಂತೆ ಅನಾದಿಕಾಲದಿಂದಲು ದೇವನಹಳ್ಳಿ ಕುಸ್ತಿಗೆ ಹೆಸರುವಾಸಿಯಾಗಿದ್ದ ಕಾರಣ ಕುಸ್ತಿ ಪಂದ್ಯಾವಳಿಗಳನ್ನ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜನೆ ಮಾಡಿದ್ದರು,. ಹೀಗಾಗಿ ರಾಜ್ಯ ಮತ್ತು ದೇಶದ ವಿವಿಧ ಮೂಲೆಗಳಿಂದ ಕುಸ್ತಿ ಪಟುಗಳು ಆಗಮಿಸಿದ್ದರು

ಕೋಟೆ ದೇವಸ್ತಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಕರ್ಷದ ದೀಪಾಲಂಕಾರ, ದೇವರ ವಿದ್ಯುತ್ ಚಿತ್ರಗಳು ಮತ್ತು ವಿವಿಧ ಬಣ್ಣಗಳಿಂದ ಮಾಡಿದ ಕೋಟೆ ವೇಣುಗೋಪಾಲಸ್ವಾಮಿಯ ಸಿಂಗಾರವನ್ನ ಕಂಡು ಭಕ್ತರು ಪುಲ್ ಫಿದಾ ಆದ್ರು.

ಇನ್ನು ಕುಸ್ತಿ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದು, ಶಿಳ್ಳೇ ಚಪ್ಪಾಳೆ ಹೊಡೆಯುವ ಮೂಲಕ ಮಸ್ತ್ ಎಂಜಾಯ್ ಮಾಡಿದರು.




