ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್ನಲ್ಲಿ ಅಂಗೀಕಾರ; JDS ಬೆಂಬಲ
ವಿವಾದಿತ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನಪರಿಷತ್ನಲ್ಲಿ ಅಂಗೀಕಾರವಾಯಿತು.
ಬೆಂಗಳೂರು: ವಿವಾದಿತ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನಪರಿಷತ್ನಲ್ಲಿ ಅಂಗೀಕಾರವಾಯಿತು. ಕಾಂಗ್ರೆಸ್ ವಿರೋಧಿಸಿದ್ದರೂ, ಜೆಡಿಎಸ್ ಬೆಂಬಲದ ಮೂಲಕ ಪಾಸ್ ಆಯಿತು. ವಿಧೇಯಕದ ಪರ 31 ಹಾಗೂ ವಿರುದ್ಧ 27 ಮತಗಳು ಬಿದ್ದವು. ಜೆಡಿಎಸ್ ಬೆಂಬಲವನ್ನು ಬಿಜೆಪಿ ನಾಯಕರು ಮೇಜು ಕುಟ್ಟುವ ಮೂಲಕ ಸ್ವಾಗತಿಸಿದರು.
ಈ ವಿಧೇಯಕ ವಿಧಾನಸಭೆಯಲ್ಲಿ ಸೆಪ್ಟೆಂಬರ್ನಲ್ಲಿ ಅಂಗೀಕಾರವಾಗಿತ್ತು. ಅಂದೂ ಕೂಡ ವಿಪಕ್ಷಗಳು ವಿರೋಧಿಸಿದ್ದವು. ಕಂದಾಯ ಸಚಿವ ಆರ್.ಅಶೋಕ್ ಮಂಡನೆ ಮಾಡಿ, ಬಿಲ್ ಸಮರ್ಥಿಸಿಕೊಂಡಿದ್ದರು. ಕಾಂಗ್ರೆಸ್ ನಾಯಕರಂತೂ ಸಭಾತ್ಯಾಗವನ್ನೂ ಮಾಡಿದ್ದರು. ಅಷ್ಟೆಲ್ಲ ಆದರೂ ವಿಧೇಯಕದಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ಅಂಗೀಕಾರವಾಗಿತ್ತು.
ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದಾಗ, ಸರ್ಕಾರಕ್ಕೆ ತರಾತುರಿ ಏಕೆ ಎಂದು ಪ್ರಶ್ನಿಸಿದ್ದ ಎಚ್. ಡಿ.ಕುಮಾರಸ್ವಾಮಿಯವರ ಪಕ್ಷ ಇಂದು ವಿಧಾನಪರಿಷತ್ನಲ್ಲಿ ಬಿಲ್ ಬೆಂಬಲಿಸಿದ್ದು ವಿಶೇಷ.
Published On - 5:29 pm, Tue, 8 December 20