ಚಂದ್ರನಲ್ಲಿ ಇಳಿಯಲು ಹೊಸ ದಾರಿ ಹುಡುಕೋಣ; ಇಸ್ರೋ ವಿಜ್ಞಾನಿಗಳಿಗೆ ಮೋದಿ ಆತ್ಮಸ್ಥೈರ್ಯ

|

Updated on: Sep 07, 2019 | 1:09 PM

ಪ್ರಯತ್ನ, ಪ್ರಯತ್ನ, ಪ್ರಯತ್ನ ಇದೊಂದೇ ನಮ್ಮ ಮಂತ್ರ, ಚಂದ್ರನಲ್ಲಿ ಇಳಿಯಲು ಹೊಸ ದಾರಿ ಹುಡುಕೋಣ, ಹತಾಶರಾಗಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಇಡೀ ಭಾರತವಿದೆ ಎಂದು ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ಆತ್ಮಸ್ಥೈರ್ಯ ತುಂಬಿದ್ದಾರೆ. ಚಂದ್ರನ ಮೇಲೆ ಇಳಿಯುವ ಕೊನೆಯ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ಬೆಂಗಳೂರಿನ ಇಸ್ರೋ ಕಂಟ್ರೋಲ್ ಸೆಂಟರ್​ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಇಸ್ರೋ ವಿಜ್ಞಾನಿಗಳ ಕಾರ್ಯಕ್ಷಮತೆಯನ್ನು ಕೊಂಡಾದಿದ್ದಾರೆ. ಚಂದ್ರನನ್ನ ತಲುಪೋ ನಮ್ಮ ಗುರಿ ಮತ್ತಷ್ಟು ಪ್ರಬಲವಾಗಿದೆ. ವಿಜ್ಞಾನದಲ್ಲಿ ಯಾವತ್ತು ವಿಫಲತೆ ಅನ್ನೋದೆ ಇಲ್ಲ, ಇದೊಂದು ಪ್ರಯೋಗ […]

ಚಂದ್ರನಲ್ಲಿ ಇಳಿಯಲು ಹೊಸ ದಾರಿ ಹುಡುಕೋಣ; ಇಸ್ರೋ ವಿಜ್ಞಾನಿಗಳಿಗೆ ಮೋದಿ ಆತ್ಮಸ್ಥೈರ್ಯ
Follow us on

ಪ್ರಯತ್ನ, ಪ್ರಯತ್ನ, ಪ್ರಯತ್ನ ಇದೊಂದೇ ನಮ್ಮ ಮಂತ್ರ, ಚಂದ್ರನಲ್ಲಿ ಇಳಿಯಲು ಹೊಸ ದಾರಿ ಹುಡುಕೋಣ, ಹತಾಶರಾಗಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಇಡೀ ಭಾರತವಿದೆ ಎಂದು ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ಆತ್ಮಸ್ಥೈರ್ಯ ತುಂಬಿದ್ದಾರೆ.

ಚಂದ್ರನ ಮೇಲೆ ಇಳಿಯುವ ಕೊನೆಯ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ಬೆಂಗಳೂರಿನ ಇಸ್ರೋ ಕಂಟ್ರೋಲ್ ಸೆಂಟರ್​ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಇಸ್ರೋ ವಿಜ್ಞಾನಿಗಳ ಕಾರ್ಯಕ್ಷಮತೆಯನ್ನು ಕೊಂಡಾದಿದ್ದಾರೆ.

ಚಂದ್ರನನ್ನ ತಲುಪೋ ನಮ್ಮ ಗುರಿ ಮತ್ತಷ್ಟು ಪ್ರಬಲವಾಗಿದೆ. ವಿಜ್ಞಾನದಲ್ಲಿ ಯಾವತ್ತು ವಿಫಲತೆ ಅನ್ನೋದೆ ಇಲ್ಲ, ಇದೊಂದು ಪ್ರಯೋಗ ವಿಜ್ಞಾನ ಕ್ಷೇತ್ರದಲ್ಲಿ ಸಂತೃಪ್ತಿ ಅನ್ನೋದೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಿಮ್ಮ ಈ ಕಾರ್ಯಕ್ಷಮತೆ ಚಂದ್ರನನ್ನು ಮುಟ್ಟುವ ಆಸೆ ಮತ್ತಷ್ಟು ಗಟ್ಟಿ ಮಾಡಿದೆ. ನಿಮ್ಮ ಕಠಿಣ ಪರಿಶ್ರಮ ಪ್ರತೀಯೊಬ್ಬ ಭಾರತೀಯನಿಗೂ ತಿಳಿದಿದೆ. ಇಡೀ ಭಾರತವೇ ನಿಮ್ಮೊಂದಿಗೆ. ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ. ಮುಂಬರುವ ಯೋಜನೆಗಾಗಿ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

Published On - 1:08 pm, Sat, 7 September 19