ಬೆಂಗಳೂರಿನಲ್ಲಿ ಚಿರತೆ ದಾಳಿಗೆ ಎರಡು ಕರುಗಳು ಬಲಿ.. ದೊಡ್ಡೇರಿ ಗ್ರಾಮಸ್ಥರಲ್ಲಿ ಆತಂಕ

| Updated By: ಆಯೇಷಾ ಬಾನು

Updated on: Jun 30, 2021 | 10:56 AM

ಬಸವರಾಜ್ ಎಂಬುವವರಿಗೆ ಸೇರಿದ ಎರಡು ಕರುಗಳನ್ನು ರಾತ್ರಿ ದಾಳಿ ನಡೆಸಿ ಕರುಗಳನ್ನು ತಿಂದು ಮುಗಿಸಿದೆ. ಚಿರತೆ ದಾಳಿಯಿಂದ ದೊಡ್ಡೇರಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಚಿರತೆ ದಾಳಿಗೆ ಎರಡು ಕರುಗಳು ಬಲಿ.. ದೊಡ್ಡೇರಿ ಗ್ರಾಮಸ್ಥರಲ್ಲಿ ಆತಂಕ
ಬೆಂಗಳೂರಿನಲ್ಲಿ ಚಿರತೆ ದಾಳಿಗೆ ಎರಡು ಕರುಗಳು ಬಲಿ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ‌ ಚಿರತೆ ದಾಳಿಗೆ ಎರಡು ಕರುಗಳು ಬಲಿಯಾಗಿವೆ. ತಾವರೆಕೆರೆ ಹೋಬಳಿಯ ದೊಡ್ಡೇರಿ ಗ್ರಾಮದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು ಎರಡು ಕರುಗಳ ಮೇಲೆ ದಾಳಿ ಮಾಡಿ ಅವುಗಳನ್ನು ತಿಂದು ಹೋಗಿದೆ. ಬಸವರಾಜ್ ಎಂಬುವವರಿಗೆ ಸೇರಿದ ಎರಡು ಕರುಗಳನ್ನು ರಾತ್ರಿ ದಾಳಿ ನಡೆಸಿ ಕರುಗಳನ್ನು ತಿಂದು ಮುಗಿಸಿದೆ. ಚಿರತೆ ದಾಳಿಯಿಂದ ದೊಡ್ಡೇರಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ಈ ಬಗ್ಗೆ ಮಾಹಿತಿ ನೀಡಲು ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಕರೆ ಮಾಡಿದ್ರೆ, ಸಿಎಂ ಪ್ರೋಗ್ರಾಂ ಇದೆ. ಸ್ಥಳಕ್ಕೆ ಬರೋಕೆ ಆಗಲ್ಲ ಎಂದು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸದ್ಯ ಚಿರತೆ ದಾಳಿಗೆ ಇಡೀ ಗ್ರಾಮವೇ ಆತಂಕ, ಭಯದಲ್ಲಿದೆ.

ದೊಡ್ಡೇರಿ ಗ್ರಾಮ

ಇದನ್ನೂ ಓದಿ: ಅಣ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ 5 ವರ್ಷದ ಬಾಲಕಿ ಚಿರತೆ ದಾಳಿಗೆ ಬಲಿ