ತೆಂಗಿನಮರದಿಂದ ಮಗುವಿನ ತಲೆಯ ಮೇಲೆ ಬಿದ್ದ ಕಾಯಿ : ಹಾವೇರಿ ಜಿಲ್ಲೆಯಲ್ಲಿ 11 ತಿಂಗಳ ಮಗು ಸಾವು

ನಿನ್ನೆ ಬೆಳಗ್ಗೆ ಮನೆಯ ಮುಂದೆ ಮಗುವನ್ನು ಎತ್ತಿಕೊಂಡು ಮಗುವಿನ ತಾಯಿ ಊಟ ಮಾಡಿಸುತ್ತಿದ್ದಳು. ಈ ವೇಳೆ ಮನೆಯ ಮುಂದೆ ಇದ್ದ ತೆಂಗಿನಮರದಿಂದ ತೆಂಗಿನಕಾಯಿ ಮಗುವಿನ ತಲೆಯ ಮೇಲೆ ಬಿದ್ದು ಈ ದುರ್ಘಟನೆ ನಡೆದಿದೆ.

ತೆಂಗಿನಮರದಿಂದ ಮಗುವಿನ ತಲೆಯ ಮೇಲೆ ಬಿದ್ದ ಕಾಯಿ : ಹಾವೇರಿ ಜಿಲ್ಲೆಯಲ್ಲಿ 11 ತಿಂಗಳ ಮಗು ಸಾವು
ಸಾಂದರ್ಭಿಕ ಚಿತ್ರ
Follow us
| Updated By: preethi shettigar

Updated on: Jun 30, 2021 | 10:54 AM

ಹಾವೇರಿ : ಮನೆಯ ಮುಂದೆ ತೆಂಗಿನಕಾಯಿ ಮರ ಇದ್ದರೆ ಒಳ್ಳೆಯದು ಎನ್ನುವ ಮಾತಿದೆ. ಆದರೆ ಹಾವೇರಿಯಲ್ಲಿ ಮನೆ ಮುಂದೆ ಇದ್ದ ಮರವೇ ಮಗುವಿನ ಸಾವಿಗೆ ಕಾರಣವಾಗಿದೆ. ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ಮನೆಯ ಮುಂದಿನ ತೆಂಗಿನಮರದಿಂದ ತೆಂಗಿನಕಾಯಿ ಬಿದ್ದು, ಹನ್ನೊಂದು ತಿಂಗಳ‌ ಮಗುವೊಂದು ಮೃತಪಟ್ಟ ಘಟನೆ ನಡೆದಿದೆ. ಮಗುವಿನ ತಲೆಯ ಮೇಲೆ ತೆಂಗಿನಕಾಯಿ ಬೀಳುತ್ತಿದ್ದಂತೆ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.

ಘಟನೆ ನಡೆದಿದ್ದು ಹೇಗೆ? ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮೃತಪಟ್ಟ ಹನ್ನೊಂದು ತಿಂಗಳಿನ ಮಗುವಿನ ಹೆಸರು ತನ್ವೀತ್ ವಾಲ್ಮೀಕಿ. ತನ್ವೀತ್ ಮಲ್ಲಿಕಾರ್ಜುನ ಮತ್ತು ಮಾಲಾ ದಂಪತಿಯ ಪುತ್ರ. ನಿನ್ನೆ ಬೆಳಗ್ಗೆ ಮನೆಯ ಮುಂದೆ ಮಗುವನ್ನು ಎತ್ತಿಕೊಂಡು ಮಗುವಿನ ತಾಯಿ ಊಟ ಮಾಡಿಸುತ್ತಿದ್ದಳು. ಈ ವೇಳೆ ಮನೆಯ ಮುಂದೆ ಇದ್ದ ತೆಂಗಿನಮರದಿಂದ ತೆಂಗಿನಕಾಯಿ ಮಗುವಿನ ತಲೆಯ ಮೇಲೆ ಬಿದ್ದು ಈ ದುರ್ಘಟನೆ ನಡೆದಿದೆ. ಮಗುವಿನ ತಲೆಯ ಮೇಲೆ ಭಾರವಾದ ತೆಂಗಿನಕಾಯಿ ಬಿದ್ದಿದೆ ಮಗು ಸಾವಿಗೆ ಕಾರಣವಾಗಿದೆ.

ಚಿಕಿತ್ಸೆ ಫಲಿಸದೆ ಮೃತಪಟ್ಟ ಮಗು ಮನೆಯ ಮುಂದಿನ ತೆಂಗಿನಮರದಿಂದ ಮಗುವಿನ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮಗುವಿನ ತಲೆಗೆ ಗಂಭೀರವಾದ ಗಾಯವಾಗಿದೆ. ತಕ್ಷಣವೆ ಹನ್ನೊಂದು ತಿಂಗಳ ಮಗುವನ್ನು ಮಗುವಿನ ಮನೆಯವರು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗುವಿನ ತಲೆಗೆ ಬಲವಾಗಿ ಏಟು ಬಿದ್ದಿದ್ದರಿಂದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಹನ್ನೊಂದು ತಿಂಗಳ ಮಗುವನ್ನು ಕಳೆದುಕೊಂಡ ಮಗುವಿನ ತಂದೆ, ತಾಯಿ ಹಾಗೂ ಕುಟುಂಬ ಸದಸ್ಯರಲ್ಲಿ ದುಃಖ‌ ಮಡುಗಟ್ಟಿತ್ತು. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇದನ್ನೂ ಓದಿ:

ಫ್ಲೋರಿಡಾದಲ್ಲಿ ಕಟ್ಟಡ ಕುಸಿತ; ಭಾರತೀಯ ಮೂಲದ ದಂಪತಿ, 1 ವರ್ಷದ ಮಗು ಸಹಿತ 150 ಜನ ಕಣ್ಮರೆ

ಗಾಳಿಗೆ ಮನೆ ಚಾವಣಿ ಹಾರಿ ಜೋಳಿಗೆಯಲ್ಲಿದ್ದ 3 ತಿಂಗಳ ಮಗು ಸಾವು

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ