ಕೊವಿಡ್ ಲಸಿಕೆ ಹಾಕಿಸುವಲ್ಲಿ ನಿರ್ಲಕ್ಷ್ಯ ಆರೋಪ; ರಾಯಚೂರಿನ 16 ಖಾಸಗಿ ಪದವಿ ಕಾಲೇಜುಗಳಿಗೆ ನೋಟಿಸ್
ಜಿಲ್ಲೆಯ ಸುಮಾರು 16 ಖಾಸಗಿ ಪದವಿ ಕಾಲೇಜುಗಳಿಗೆ ನೋಟಿಸ್ ನೀಡಲಾಗಿದೆ. ಬೇಜವಾಬ್ದಾರಿ ತೋರಿದ ಆರೋಪದಲ್ಲಿ ರಾಯಚೂರು ಜಿಲ್ಲಾಡಳಿತ ಕಾಲೇಜುಗಳ ಪ್ರಾಂಶುಪಾಲರಿಗೆ ನೋಟಿಸ್ ನೀಡಿದ್ದು, 7 ದಿನದಲ್ಲಿ ನೋಟಿಸ್ ಉತ್ತರಿಸುವಂತೆ ಸೂಚನೆ ನೀಡಿದೆ.
ರಾಯಚೂರು: ವಿದ್ಯಾರ್ಥಿಗಳಿಗೆ ಕೊವಿಡ್ ಲಸಿಕೆ ಹಾಕಿಸುವಲ್ಲಿ ಖಾಸಗಿ ಪದವಿ ಕಾಲೇಜುಗಳು ನಿರ್ಲಕ್ಷ್ಯ ತೋರಿವೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಜಿಲ್ಲೆಯ ಸುಮಾರು 16 ಖಾಸಗಿ ಪದವಿ ಕಾಲೇಜುಗಳಿಗೆ ನೋಟಿಸ್ ನೀಡಲಾಗಿದೆ. ಬೇಜವಾಬ್ದಾರಿ ತೋರಿದ ಆರೋಪದಲ್ಲಿ ರಾಯಚೂರು ಜಿಲ್ಲಾಡಳಿತ ಕಾಲೇಜುಗಳ ಪ್ರಾಂಶುಪಾಲರಿಗೆ ನೋಟಿಸ್ ನೀಡಿದ್ದು, 7 ದಿನದಲ್ಲಿ ನೋಟಿಸ್ ಉತ್ತರಿಸುವಂತೆ ಸೂಚನೆ ನೀಡಿದೆ. ಸಹಾಯಕ ಆಯುಕ್ತ ಸಂತೋಷ್ ಕುಮಾರ್ ಅವರಿಂದ ನೋಟಿಸ್ ಜಾರಿಯಾಗಿದ್ದು, ಸೂಕ್ತ ಉತ್ತರ ನೀಡದೆ ಇದ್ದಲ್ಲಿ ವಿಪತ್ತು ನಿರ್ವಹಣ ಕಾಯ್ದೆಯಡಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮೆಟ್ರೋದಲ್ಲಿ ಕೊರೊನಾ ನಿಯಮ ಉಲ್ಲಂಘನೆ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಅನ್ಲಾಕ್ ಪ್ರಕ್ರಿಯೆ ಪ್ರಾರಂಭಿಸಿದೆ. ಇದರ ಜೊತೆಗೆ ಕೆಲವು ನಿಯಮಗಳನ್ನು ಜಾರಿಗೊಳಿಸಿದೆ. ಆದರೆ ಜನ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಬೇಜವಾಬ್ದಾರಿ ತೋರಿದ್ದಾರೆ. ಮೆಟ್ರೋ ರೈಲಿನಲ್ಲಿ ದೈಹಿಕ ಅಂತರ ಇಲ್ಲದೆ ಜನ ನಿಂತಿದ್ದಾರೆ. 3 ಬೋಗಿ ಮೆಟ್ರೋದಲ್ಲಿ 400 ಜನ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ 400ಕ್ಕೂ ಹೆಚ್ಚು ಜನ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದಾರೆ.
ಎರಡನೇ ಹಂತದ ಆನ್ಲಾಕ್ ಮೆಟ್ರೋ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿತ್ತು. ಆದರಲ್ಲೂ ಮೆಟ್ರೋ ರೈಲಿನಲ್ಲಿ 400 ಜನರಿಗೆ ಮಾತ್ರ ಪ್ರಯಾಣ ಮಾಡಲು ಅನುಮತಿ ನೀಡಿತ್ತು. ಆದರೆ 400 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. ನಿಂತು ಪ್ರಯಾಣಿಸಲು ಅವಕಾಶ ಇಲ್ಲದಿದ್ದರೂ ಪ್ರಯಾಣಿಸಿದ್ದಾರೆ. ಗುಂಪು ಗುಂಪಾಗಿ ನಿಂತು ಪ್ರಯಾಣಿಸಿದ ಜನ ಸಾಮಾಜಿಕ ದೈಹಿಕ ಅಂತರ ಮರೆತಿದ್ದಾರೆ.
ಇದನ್ನೂ ಓದಿ
Social Media Day 2021: ಸಾಮಾಜಿಕ ಮಾಧ್ಯಮ ದಿನದ ಇತಿಹಾಸದ ಜತೆಗೆ ಪ್ರಾಮುಖ್ಯತೆಯನ್ನು ತಿಳಿಯಿರಿ
(16 private degree colleges have been given notice by Raichur district administration)