ಗಾಳಿಗೆ ಮನೆ ಚಾವಣಿ ಹಾರಿ ಜೋಳಿಗೆಯಲ್ಲಿದ್ದ 3 ತಿಂಗಳ ಮಗು ಸಾವು

ನಿನ್ನೆ ಸಾಯಂಕಾಲ ಸುರಗಿಹಳ್ಳಿ ಬಿರುಗಾಳಿ ಸಹಿತ ಮಳೆ ಶುರುವಾಗಿತ್ತು. ಈ ವೇಳೆ ಅಬ್ದುಲ್ ರೆಹಮಾನ್ ದಂಪತಿ ಎಂದಿನಂತೆ ಮನೆಯ ಚಾವಣಿ ಕಂಬಕ್ಕೆ ಜೋಳಿಗೆ ಕಟ್ಟಿ ಮಗು ಮಲಗಿಸಿದ್ದರು. ಆದ್ರೆ ಗಾಳಿಯ ರಭಸಕ್ಕೆ ಚಾವಣಿ ಜತೆ ಜೋಳಿಗೆ ಹಾರಿಹೋಗಿದೆ.

ಗಾಳಿಗೆ ಮನೆ ಚಾವಣಿ ಹಾರಿ ಜೋಳಿಗೆಯಲ್ಲಿದ್ದ 3 ತಿಂಗಳ ಮಗು ಸಾವು
3 ತಿಂಗಳ ಮಗು ಸಾವು
Follow us
ಆಯೇಷಾ ಬಾನು
|

Updated on: Apr 28, 2021 | 1:43 PM

ವಿಜಯಪುರ: ಭಾರಿ ಗಾಳಿಗೆ ಮನೆ ಚಾವಣಿ ಹಾರಿಹೋಗಿ ಮಗು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುರಗಿಹಳ್ಳಿಯಲ್ಲಿ ನಡೆದಿದೆ. ಅಬ್ದುಲ್ ರೆಹಮಾನ್ ದಂಪತಿಯ 3 ತಿಂಗಳ ಮಗು ಮೃತಪಟ್ಟಿದೆ.

ನಿನ್ನೆ ಸಾಯಂಕಾಲ ಸುರಗಿಹಳ್ಳಿ ಬಿರುಗಾಳಿ ಸಹಿತ ಮಳೆ ಶುರುವಾಗಿತ್ತು. ಈ ವೇಳೆ ಅಬ್ದುಲ್ ರೆಹಮಾನ್ ದಂಪತಿ ಎಂದಿನಂತೆ ಮನೆಯ ಚಾವಣಿ ಕಂಬಕ್ಕೆ ಜೋಳಿಗೆ ಕಟ್ಟಿ ಮಗು ಮಲಗಿಸಿದ್ದರು. ಆದ್ರೆ ಗಾಳಿಯ ರಭಸಕ್ಕೆ ಚಾವಣಿ ಜತೆ ಜೋಳಿಗೆ ಹಾರಿಹೋಗಿದೆ. ವಿದ್ಯುತ್ ಕಂಬಕ್ಕೆ ಜೋಳಿಗೆ ಬಡಿದು 3 ತಿಂಗಳ ಪುಟ್ಟ ಮಗು ಮೃತಪಟ್ಟಿದೆ. ಮಗು ಕಳೆದುಕೊಂಡ ದಂಪತಿ ಜೀವನದಲ್ಲಿ ಮೌನ ಆವರಿಸಿದೆ.

ಕೆರೆಯಲ್ಲಿ ಮುಳುಗಿ ಇಬ್ಬರು ಸಾವು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಗ್ರಾಮ ಗುಡುಗಳಲೆ ಬಳಿ ಕೆರೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ. ಸತೀಶ್(35), ಚೇತನಾ(12) ಮೃತ ದುರ್ದೈವಿಗಳು. ಮೃತಪಟ್ಟಿದ್ದ ಸತೀಶ್ಗೆ ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸತೀಶ್ ಚೇತನಾಳ‌ ಚಿಕ್ಕಪ್ಪ. ಮುಳುಗುತ್ತಿದ್ದ ಚೇತನಾಳ ರಕ್ಷಣೆಗೆ ಸತೀಶ್ ಮುಂದಾಗಿದ್ದ ಈ ವೇಳೆ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಭೀಕರ ರಸ್ತೆ ಅಪಘಾತ, ನಾಲ್ವರ ಸಾವು ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ನಾಲ್ವವರು ಸಾವನ್ನಪ್ಪಿದ್ದಾರೆ. ಲಾರಿ ಮತ್ತು ಕಾರಿನ ನಡುವೆ ಡಿಕ್ಕಿಯಾಗಿದ್ದು ಈ ಘಟನೆ ಸಂಭವಿಸಿದೆ. ವಾಣಿಜ್ಯ ತೆರಿಗೆ ನಿರೀಕ್ಷಕ ಬಸವರಾಜ ಭೀಮರಾವ ಬೆಳ್ಳೂರು, ಪುತ್ರ ಭೀಮರಾವ ಬೆಳ್ಳೂರು, ಶಿವರಾಜ ಪಾಟೀಲ್, ಕಾರು ಚಾಲಕ ಬಸವರಾಜ ಕೊರಡಂಪಳ್ಳಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸರ್ಕಾರದಿಂದ 14 ದಿನಗಳ ಕಾಲ ಟಫ್ ರೂಲ್ಸ್ ಹಿನ್ನೆಲೆ ಬಸವರಾಜ ಭೀಮರಾವ್ ಪುತ್ರನನ್ನ ಕರೆತರಲು ಬಂದಿದ್ದರು. ಬೆಂಗಳೂರಿನಿಂದ ಚಿಂಚೋಳಿಗೆ ತೆರಳುವ ವೇಳೆ ಅಪಘಾತ ನಡೆದಿದೆ. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ 3 ವರ್ಷದ ಮಗು ಸಾವು