ಬೆಂಗಳೂರು: ಧರ್ಮ ರಾಜಕಾರಣಕ್ಕೆ ಅನೇಕ ರಾಜಕಾರಣಿಗಳು, ಪಕ್ಷಗಳಿಗೆ ಮುಳುಗುನೀರು ತಂದಿದೆ ಎಂಬ ಕಹಿ ಸತ್ಯವನ್ನು ಮಾಜಿ ಮುರ್ಖಯಮಂತ್ರಿ ಕುಮಾರಸ್ವಾಮಿಗೆ ಮನವರಿಕೆಯಾದಂತಿದೆ. ಅಟ್ ಲೀಸ್ಟ್ ಅದನ್ನ ಹೆಚ್ ಡಿ ದೇವೇಗೌಡ ಮತ್ತು ಕೆಲವು ಸ್ವಾಮೀಜಿಗಳ ಅವರಿಗೆ ಮನವರಿಕೆ ಮಾಡಿಕೊಟ್ಟಂತಿದೆ.
ಹೆದರಿದ್ರಾ ಹೆಚ್ಡಿಕೆ?
ಉಪಚುನಾವಣೆ ಘೋಷಣೆಯಾಗುತ್ತದ್ದಂತೆ ಎಚ್ಡಿಕೆ ಹಿರೇಕೆರೂರಿನಲ್ಲಿ ಶಿವಾಚಾರ್ಯ ಸ್ವಾಮೀಜಿಗಳನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರು. ಆದ್ರೆ ದೇವೇಗೌಡ ಮತ್ತು ಕೆಲವು ಸ್ವಾಮೀಜಿಗಳ ಸೂಚನೆ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಎಚ್ಡಿಕೆ ಮನವಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ದೊಡ್ಡಗೌಡ್ರ ಸಕಾಲಿಕ ಸಂದೇಶ, ಸಲಹೆ:
ಈ ಹಿಂದೆ ಲಿಂಗಾಯತ-ವೀರಶೈವ ವಿಚಾರಕ್ಕೆ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡಿದ್ದರು ಎಂಬ ವಿಚಾರ ಮನದಟ್ಟಾಗಿ, ರಾಜಕಾರಣಕ್ಕೆ ಧರ್ಮ ಸೇರಿಸುವುದು ಬೇಡ ಎಂದು ದೊಡ್ಡ ಗೌಡರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಎನ್ನಲಾಗಿದೆ. ಸ್ವಾಮೀಜಿ ಸ್ಪರ್ಧೆ ಮಾಡಿದ್ರೆ ಲಿಂಗಾಯತ ಸಮುದಾಯದವರು ಜೆಡಿಎಸ್ ವಿರುದ್ದ ಮುನಿಸಿಕೊಂಡಾರು ಎಂಬ ಭಯ, ಆತಂಕ ಎಚ್ಡಿ ಕುಮಾರಸ್ವಾಮಿ ಅವರನ್ನೂ ಕಾಡಿತೊಡಗಿತಾ? ಎಂಬ ಪ್ರಶ್ನೆ ಎದ್ದಿದೆ.
Published On - 6:54 pm, Tue, 19 November 19