ಅಕ್ರಮ ಟೆಂಡರ್, ಡಿ.2ರಿಂದ ರೇಸ್ ಕೋರ್ಸ್ ಬಂದ್ಗೆ ಹೆಚ್ಕೆಪಿ ಒತ್ತಾಯ
ಬೆಂಗಳೂರು: ಅಕ್ರಮವಾಗಿ ಟೆಂಡರ್ ಪಡೆದು ರೇಸ್ ಕೋರ್ಸ್ ನಡೆಸಲಾಗುತ್ತಿದೆ. ಹೀಗಾಗಿ ಡಿಸೆಂಬರ್ 2ರಿಂದ ರೇಸ್ ಕೋರ್ಸ್ ಬಂದ್ ಮಾಡಬೇಕೆಂದು ವಿಧಾನಸೌಧದಲ್ಲಿ ಹೆಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ. ₹33 ಕೋಟಿ ಬಾಡಿಗೆ ಬಾಕಿ: ನವೆಂಬರ್ ಅಂತ್ಯಕ್ಕೆ 33 ಕೋಟಿ ಬಾಡಿಗೆ ಹಣವನ್ನು ಸರ್ಕಾರಕ್ಕೆ ಟರ್ಫ್ ಕ್ಲಬ್ ನೀಡಬೇಕು ಎಂದು ಸಮಿತಿ ನಿರ್ದೇಶನ ನೀಡಿತ್ತು. ಈವರೆಗೆ ಟರ್ಫ್ ಕ್ಲಬ್ ಬಾಡಿಗೆ ಹಣವನ್ನೇ ಕಟ್ಟಿಲ್ಲ. PWD ಇದೇ ಜಾಗವನ್ನು ಯುವಜನ ಸೇವೆಗೆ ಇರಲಿ ಎಂದಿತ್ತು. ಆದರೆ ರೇಸ್ ಕೋರ್ಸ್ ಜೂಜಾಟ ಅಲ್ಲವೇ, ಹೀಗಾಗಿ ಅದು […]
ಬೆಂಗಳೂರು: ಅಕ್ರಮವಾಗಿ ಟೆಂಡರ್ ಪಡೆದು ರೇಸ್ ಕೋರ್ಸ್ ನಡೆಸಲಾಗುತ್ತಿದೆ. ಹೀಗಾಗಿ ಡಿಸೆಂಬರ್ 2ರಿಂದ ರೇಸ್ ಕೋರ್ಸ್ ಬಂದ್ ಮಾಡಬೇಕೆಂದು ವಿಧಾನಸೌಧದಲ್ಲಿ ಹೆಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.
₹33 ಕೋಟಿ ಬಾಡಿಗೆ ಬಾಕಿ: ನವೆಂಬರ್ ಅಂತ್ಯಕ್ಕೆ 33 ಕೋಟಿ ಬಾಡಿಗೆ ಹಣವನ್ನು ಸರ್ಕಾರಕ್ಕೆ ಟರ್ಫ್ ಕ್ಲಬ್ ನೀಡಬೇಕು ಎಂದು ಸಮಿತಿ ನಿರ್ದೇಶನ ನೀಡಿತ್ತು. ಈವರೆಗೆ ಟರ್ಫ್ ಕ್ಲಬ್ ಬಾಡಿಗೆ ಹಣವನ್ನೇ ಕಟ್ಟಿಲ್ಲ. PWD ಇದೇ ಜಾಗವನ್ನು ಯುವಜನ ಸೇವೆಗೆ ಇರಲಿ ಎಂದಿತ್ತು. ಆದರೆ ರೇಸ್ ಕೋರ್ಸ್ ಜೂಜಾಟ ಅಲ್ಲವೇ, ಹೀಗಾಗಿ ಅದು ಯುವಕರ ಕ್ರೀಡೆಯಲ್ಲ.
ಕುದುರೆ ಜೂಜಿನ ಆಟಕ್ಕೆ ಇತಿಶ್ರೀ? ಡಿ.2ರಿಂದ ಕುದುರೆ ಜೂಜನ್ನು ನಿಲ್ಲಿಸಬೇಕು. ಇದಕ್ಕೆ ಸರ್ಕಾರ ಕಾನೂನು ರಕ್ಷಣೆ ನೀಡಬೇಕು. ಉಳ್ಳವರ ಜೂಜಿನ ಆಟಕ್ಕೆ ಇತಿಶ್ರೀ ಹಾಡಲು ಸಮಿತಿ ಸರ್ವಾನುಮತದಿಂದ ನಿರ್ಣಯಿಸಿದೆ. ಇದರ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಳ್ಳಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ. ಅಲ್ಲದೆ, ಡಿ.2ರಿಂದ ರೇಸ್ ಕೋರ್ಸ್ ನಿಲ್ಲಿಸಲು ಅಪರ ಮುಖ್ಯ ಕಾರ್ಯದರ್ಶಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೂಚನೆ ನೀಡಿದೆ ಎಂದರು.
ರೀಸ್ ಕೋರ್ಸ್ ಹಿನ್ನೆಲೆ: 1923ರಲ್ಲಿ 83 ಎಕರೆ 14 ಗುಂಟೆ ಜಾಗವನ್ನು ವಿಧಾನಸೌಧ ಸಮೀಪ ಮೈಸೂರು ಮಹಾರಾಜರು ರೇಸ್ ಕೋರ್ಸ್ ಗೆ ಜಾಗ ನೀಡಿದ್ದರು. ಒಪ್ಪಂದದ ಪ್ರಕಾರ 1981ರಿಂದ ವಾರ್ಷಿಕವಾಗಿ 5 ಲಕ್ಷ ರೂ. ಸರ್ಕಾರಕ್ಕೆ ಟರ್ಫ್ ಕ್ಲಬ್ ಬಾಡಿಗೆ ನೀಡುತ್ತಿತ್ತು. 1986ರಲ್ಲಿ ಆ ಜಾಗವನ್ನು ಸರ್ಕಾರದ ವಶಕ್ಕೆ ನೀಡಬೇಕು ಎಂದು ಸೂಚನೆ ನೀಡಿತ್ತು. ಆದ್ರೆ ಟರ್ಫ್ ಕ್ಲಬ್ ಈ ಆದೇಶ ಪಾಲನೆ ಮಾಡಿಲ್ಲ.
ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ನಗರದಿಂದ ಟರ್ಫ್ ಕ್ಲಬ್ ಅನ್ನು ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿತ್ತು. ವಾರ್ಷಿಕ ಬಾಡಿಗೆಯನ್ನೂ ಹೆಚ್ಚಿಸಬೇಕೆಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದ್ರೆ ಅಕ್ರಮವಾಗಿ ಟೆಂಡರ್ ಪಡೆದು ರೇಸ್ ಕೋರ್ಸ್ ನಡೆಸಲಾಗುತ್ತಿದೆ ಎಂದು ಹೆಚ್.ಕೆ.ಪಾಟೀಲ್ ಗಂಭೀರವಾಗಿ ಆರೋಪಿಸಿದ್ದಾರೆ.
2009ಕ್ಕೇ ಒಪ್ಪಂದ ಮುಕ್ತಾಯ: ಲೆಕ್ಕಪತ್ರ ಸಮಿತಿ, ಸರ್ಕಾರ, ಬಜೆಟ್ನಲ್ಲೂ ಇದರ ಬಗ್ಗೆ ನಿರ್ಧಾರ ಮಾಡಲಾಗಿತ್ತು. ಆದರೆ ಅಧಿಕಾರಿಗಳು ತಮಗೆ ಬೇಕಾದಂತೆ ನಡೆದುಕೊಂಡಿದ್ದಾರೆ. ರೇಸ್ ಕೋರ್ಸ್ಗೆ ಅನಧಿಕೃತವಾಗಿ ಸಹಾಯ ಮಾಡುತ್ತಿದ್ದಾರೆ. ಸರ್ಕಾರ ಮತ್ತು ಟರ್ಫ್ ಕ್ಲಬ್ ಒಪ್ಪಂದ 2009ಕ್ಕೇ ಮುಕ್ತಾಯ ಆಗಿದೆ. ಅಂದಿನಿಂದ ಅನಧಿಕೃತವಾಗಿ ಟರ್ಫ್ ಕ್ಲಬ್ ನಡೆಯುತ್ತಿದೆ ಎಂದರು.