ಬೆಂಗಳೂರು, ಅಕ್ಟೋಬರ್ 29: ನ.13ರಂದು ನಡೆಯಲಿರುವ ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಉಪಚುನಾವಣೆ (by-elections) ನಡೆಯಲಿದೆ. ಈಗಾಗಲೇ ಮೂರು ಕ್ಷೇತ್ರದಲ್ಲಿ ಮೂರು ಪಕ್ಷಗಳು ಕಸರತ್ತು ಮಾಡುತ್ತಿವೆ. ಅಭ್ಯರ್ಥಿಗಳು ಈಗಾಗಲೇ ಪ್ರಚಾರ ಕೂಡ ಆರಂಭಿಸಿದ್ದಾರೆ. ಈ ಮಧ್ಯೆ ಬಿಜೆಪಿ ತನ್ನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.
ಮೂರು ಕ್ಷೇತ್ರದ ಬೈಎಲೆಕ್ಷನ್‌ಗೆ ಅಖಾಡ ಸಜ್ಜಾಗಿದೆ. ಮೂರು ಕ್ಷೇತ್ರದಲ್ಲಿ ಗೆಲುವಿಗಾಗಿ ಬಿಜೆಪಿ ನಾನಾ ಕಸರತ್ತು ಮಾಡುತ್ತಿದೆ. ಸದ್ಯ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಲಾಗಿದೆ.
ಬಿ.ಎಸ್.ಯಡಿಯೂರಪ್ಪ, ರಾಧಾಮೋಹನ್ ದಾಸ್ ಅಗರ್ವಾಲ್, ಪ್ರಹ್ಲಾದ್ ಜೋಶಿ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಸುಧಾಕರ್ ರೆಡ್ಡಿ, ಸಿ.ಎನ್.ಮಂಜುನಾಥ್, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಸಿ.ಟಿ.ರವಿ, ಜಗದೀಶ್ ಶೆಟ್ಟರ್, ತಾರಾ ಅನುರಾಧ, ಶ್ರುತಿ ಸೇರಿದಂತೆ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಹೊಂದಾಣಿಕೆ ರಾಜಕೀಯ ಮಾಡುವವರನ್ನು ಹೊರ ಹಾಕ್ತಿದ್ದೇವೆ: ವಿಜಯೇಂದ್ರ
ಇನ್ನು ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಪ್ರಮುಖರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದ್ದಕ್ಕೆ ನಾಯಕತ್ವದ ವಿರುದ್ಧ ಧ್ವನಿಯೆತ್ತಿದ್ದು ಕಾರಣ ಎನ್ನಲಾಗುತ್ತಿದೆ.
ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ಸಿಕ್ಕಿದ್ದರೆ, ಸಂಡೂರಿನಲ್ಲಿ ರೆಡ್ಡಿ ಆಪ್ತ ಬಂಗಾರು ಹನುಮಂತುಗೆ ಟಿಕೆಟ್ ಕೊಡಲಾಗಿದೆ. ಹೈವೋಲ್ಟೇಜ್ ಚನ್ನಪಟ್ಟಣ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಲಾಗಿದೆ.
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಕಾಂಗ್ರೆಸ್ನಿಂದ ಮತ್ತೆ ಬಿಗ್ ಆಪರೇಷನ್
ಇನ್ನು ಇದರ ಮಧ್ಯೆ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಶಕ್ಕೆ ಪಡೆಯಲು ಕಾಂಗ್ರೆಸ್ ಪಣತೊಟ್ಟಿದೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಮತಗಳು ಸಿಗಬೇಕು ಅಂತ, ಉಸ್ತುವಾರಿ ಹಾಗೂ ಕ್ಯಾಂಪೇನರ್ಗಳನ್ನು ನೇಮಿಸಿದೆ. ಸಚಿವರಿಗೆ ಜಿಲ್ಲಾ ಪಂಚಾಯ್ತಿ ವಾರ್ಡ್ವಾರು ಜವಾಬ್ದಾರಿ ನೀಡಲಾಗಿದ್ದು, ಮತ ಶಿಕಾರಿಗೆ ತಂತ್ರ ರೂಪಿಸುವಂತೆ ಖಡಕ್ ಸಂದೇಶ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:23 pm, Tue, 29 October 24