AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆಜಾನ್, ಫ್ಲಿಪ್ ಕಾರ್ಟ್​ನಲ್ಲಿ ಕಲಬುರಗಿಯ ಖಡಕ್ ರೊಟ್ಟಿ ಲಭ್ಯ

ಕಲಬುರಗಿ ಖಡಕ್ ರೊಟ್ಟಿ ಈಗ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ನವೆಂಬರ್ 16 ರಿಂದ ಖರೀದಿಸಬಹುದು. ಜಿಲ್ಲಾಡಳಿತದ ಈ ಉಪಕ್ರಮವು ಕಲಬುರಗಿ ಖಡಕ್ ರೊಟ್ಟಿಯನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಲು ಉದ್ದೇಶಿಸಿದೆ. ಸಿರಿಧಾನ್ಯಗಳಿಂದ ತಯಾರಿಸಲಾದ ಈ ರೊಟ್ಟಿಗಳು ರುಚಿಕರ ಮತ್ತು ಆರೋಗ್ಯಕರವಾಗಿವೆ. ಪ್ರತಿ ರೊಟ್ಟಿಗೆ 6 ರೂಪಾಯಿ ದರ ನಿಗದಿಪಡಿಸಲಾಗಿದೆ.

ದತ್ತಾತ್ರೇಯ ಪಾಟೀಲ್​
| Edited By: |

Updated on: Oct 29, 2024 | 10:02 PM

Share
ಉತ್ತರ ಕರ್ನಾಟಕದ ಜೋಳದ ರೊಟ್ಟಿ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಕಲಬುರಗಿಯ ಖಡಕ್ ರೊಟ್ಟಿಗೆ ಕರ್ನಾಟಕ ಮಾತ್ರವಲ್ಲದೇ ದೇಶ, ವಿದೇಶಗಳಲ್ಲಿ ಬಹುಬೇಡಿಕೆಯಿದೆ. ಇದೀಗ ಇದೇ ಕಲಬುರಗಿ ಖಡಕ್ ರೊಟ್ಟಿ ಇನ್ಮುಂದೆ ಆನ್‌ಲೈನ್ ಮೂಲಕ ಸಾರ್ವಜನಿಕರ ಕೈಸೇರಲಿವೆ. ಅಂದರೆ ಇನ್ಮೇಲೆ ಅಮೆಜಾನ್, ಫ್ಲಿಪ್ ಕಾರ್ಟ್​ನಲ್ಲಿ ಸಿಗುತ್ತೆ.

1 / 6
ಕಲಬುರಗಿ ಖಡಕ್ ರೊಟ್ಟಿಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಲು ಇದೀಗ ಕಲಬುರಗಿ ಜಿಲ್ಲಾಡಳಿತ ಮುಂದಾಗಿದೆ. ಹೀಗಾಗಿ ಖಡಕ್ ರೊಟ್ಟಿಯನ್ನ ಸಿರಿಧಾನ್ಯಗಳಿಂದ ತಯಾರಿಸಿ ವಿಶ್ವದ ದೈತ್ಯ ಆನ್‌ಲೈನ್ ಕಂಪನಿಗಳಾದ ಅಮೆಜಾನ್,  ಫ್ಲಿಪ್ ಕಾರ್ಟ್ ಮೂಲಕ ಸಾರ್ವಜನಿಕರ ಕೈಗೆ ಸಿಗುವಂತೆ ಮಾಡಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

2 / 6
ನವೆಂಬರ್ 16ರಿಂದ ಕಲಬುರಗಿ ಖಡಕ್ ರೊಟ್ಟಿ ಆನ್​ಲೈನ್​ನಲ್ಲಿ ಸಿಗಲಿದೆಯಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಹೇಳಿದ್ದಾರೆ. ಇನ್ನೂ ಕೇವಲ ರೊಟ್ಟಿ ಮಾತ್ರವಲ್ಲದೇ ಸಜ್ಜೆ ರೊಟ್ಟಿ, ದಪಾಟಿ, ಶೇಂಗಾ ಹೊಳಿಗೆಯನ್ನ ಖರೀದಿ ಕುರಿತಂತೆ ಹೋಟೆಲ್ ಮಾಲೀಕರ ಸಂಘದೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದಿದ್ದಾರೆ.

3 / 6
ಇನ್ನೂ ಒಂದು ರೊಟ್ಟಿಗೆ 6 ರೂ ದರ‌ ನಿಗದಿ ಮಾಡಲಾಗಿದೆ. ಅಲ್ಲದೇ ಹತ್ತು ರೊಟ್ಟಿ ಸೇರಿಸಿ ಒಂದು ಬಾಕ್ಸ್‌ ಮಾಡಲಾಗಿದ್ದು, ಬಾಕ್ಸ್ ಮೇಲೆ ಕಲಬುರಗಿ ಖಡಕ್ ರೊಟ್ಟಿ ಎಂದು ನಮೂದಿಸಲಾಗಿದೆ. ಜೊತೆಗೆ ಕ್ಯೂಆರ್‌ ಕೋಡ್ ಹಾಕಲಾಗಿದೆ. ಸ್ಕ್ಯಾನ್ ಮಾಡುವ ಮೂಲಕ ಆರ್ಡರ್ ಮಾಡಬಹುದಾಗಿದೆ. 

4 / 6
ಇನ್ನೂ ಸಂಬಂಧಪಟ್ಟ ಸಂಸ್ಥೆಯಿಂದ ರೊಟ್ಟಿಗೆ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲಾಗಿದೆ. ಇಷ್ಟೇ ಅಲ್ಲದೆ ಕಲಬುರಗಿ ರೊಟ್ಟಿ ಗಮನಿಸಿ ನ್ಯೂಜಿಲೆಂಡ್ ದೇಶದ ರಾಯಭಾರಿ ಕಚೇರಿ ಸಹ ರೊಟ್ಟಿ ಬಗ್ಗೆ ಮಾಹಿತಿ ಪಡೆದುಕೊಂಡಿದೆ.

5 / 6
ರೊಟ್ಟಿ ಎಂದರೆ ಎಂಥವರು ಇಷ್ಟಪಡುತ್ತಾರೆ. ಅದಕ್ಕಾಗಿ ಕಲಬುರಗಿ ಖಡಕ್ ರೊಟ್ಟಿ ಇದೀಗ ವಿಶ್ವಮಟ್ಟದಲ್ಲಿ ರಾರಾಜಿಸಲಿದ್ದು, ನವೆಂಬರ್ 16ರಿಂದ ಸಾರ್ವಜನಿಕರ ಕೈಗೆ ಸಿಗಲಿದೆ.

6 / 6
ದತ್ತಾತ್ರೇಯ ಪಾಟೀಲ್​
ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Follow Us
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ

ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ

ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​

ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ

ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?

ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ

ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR

ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್

ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ